ETV Bharat / business

ಮೊದಲ ಸ್ಥಳೀಯ ಮೋಟಾರ್ ಚಾಲಿತ ಗಾಲಿ ಕುರ್ಚಿ ಅಭಿವೃದ್ಧಿ ಪಡಿಸಿದ IIT

author img

By

Published : Aug 23, 2021, 9:38 PM IST

ದಿವ್ಯಾಂಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಐಐಟಿಯು ಮೋಟಾರ್ ಚಾಲಿತ ಗಾಲಿ ಕುರ್ಚಿ ಅಭಿವೃದ್ಧಿ ಪಡಿಸಿದೆ.

ಗಾಲಿ ಕುರ್ಚಿ ವಾಹನ
ಗಾಲಿ ಕುರ್ಚಿ ವಾಹನ

ಚೆನ್ನೈ (ತಮಿಳುನಾಡು): ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಭಾರತದ ಮೊದಲ ಸ್ಥಳೀಯ ಮೋಟಾರ್ ಚಾಲಿತ ಗಾಲಿಕುರ್ಚಿ ವಾಹನ ನಿಯೋ ಬೋಲ್ಟ್ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ರಸ್ತೆಗಳಲ್ಲಿ ಮತ್ತು ಅಸಮ ಭೂಪ್ರದೇಶಗಳಲ್ಲಿಯೂ ಓಡಿಸಬಹುದು.

ವಾಹನವನ್ನು ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ, ಗರಿಷ್ಠ 25 ಕಿ.ಮೀ ಓಡಿಸಬಹುದು. ಕಾರು, ಆಟೋ - ರಿಕ್ಷಾಗಳಿಗೆ ಹೋಲಿಸಿದ್ರೆ, ಈ ವಾಹನ ಬಳಕೆದಾರರಿಗೆ ಅನುಕೂಲಕರ ಜತೆಗೆ ಸುರಕ್ಷಿತವಾಗಿದೆ.

ಐಐಟಿ - ಎಂ ಸಂಶೋಧಕರು ಅಂಗವೈಕಲ್ಯ ಹೊಂದಿರುವವರಿಗಾಗಿಯೇ ಈ ವಾಹನವನ್ನು ಅಭಿವೃದ್ಧಿ ಪಡಿಸಿದ್ದಾರೆ. ನಿಯೋಬೋಲ್ಟ್ ಅನ್ನು ಐಐಟಿ ಮದ್ರಾಸ್‌ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ.ಸುಜಾತಾ ಶ್ರೀನಿವಾಸನ್ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ.

ಇದನ್ನು 'ನಿಯೋಮೋಷನ್' ಎಂಬ ಸ್ಟಾರ್ಟ್ಅಪ್ ಮೂಲಕ ವಾಣಿಜ್ಯೀಕರಣಗೊಳಿಸಲಾಗಿದೆ. ಸ್ಟಾರ್ಟ್ಅಪ್ ಅನ್ನು ಪ್ರೊ-ಸುಜಾತಾ ಶ್ರೀನಿವಾಸನ್ ಮತ್ತು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ, ನಿಯೋಮೋಷನ್​ನ ಸಿಇಒ ಶ್ರೀ ಸ್ವಸ್ತಿಕ್ ಸೌರವ್ ಡ್ಯಾಶ್ ಅವರು ಈ ಯಂತ್ರ ನಿರ್ಮಿಸಿದ್ದಾರೆ.

ಪ್ರೊ.ಸುಜಾತಾ ಶ್ರೀನಿವಾಸನ್, ಭಾರತದ ಮೊದಲ ಸ್ವದೇಶಿ ವಿನ್ಯಾಸದ ಸ್ಟ್ಯಾಂಡಿಂಗ್ ವ್ಹೀಲ್ ಚೇರ್ 'ಏರಿಸ್' ಅನ್ನು ಅಭಿವೃದ್ಧಿಪಡಿಸಿದ್ದ ತಂಡವನ್ನು ಮುನ್ನಡೆಸಿದ್ದರು. ಇದು ವೀಲ್ ಚೇರ್​ನಲ್ಲಿ ಪ್ರಯಾಣಿಸುವವರ ಅನುಭವವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು ಇದು ಅನುಕೂಲ ಮಾಡಿಕೊಡುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೊ. ಸುಜಾತ ಶ್ರೀನಿವಾಸನ್, ಭಾರತದಲ್ಲಿ ಲಕ್ಷಾಂತರ ಜನರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಆರ್ಥಿಕತೆಗೆ ಕೊಡುಗೆ ನೀಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಐಐಟಿ ಮದ್ರಾಸ್‌ನಲ್ಲಿ ಇನ್‌ಕ್ಯುಬೇಟ್ ಮಾಡಲಾದ ಆರ್‌ 2 ಡಿ 2 ನಿಂದ ಆರಂಭವಾದ ನಿಯೋಮೋಶನ್, ಇಡೀ ಜಗತ್ತಿನಲ್ಲಿರುವ ದಿವ್ಯಾಂಗರಿಗೆ ಅನುಕೂಲವಾಗಲಿದೆ. ಆರೋಗ್ಯ ಮತ್ತು ಜೀವನಶೈಲಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಗಾಲಿಕುರ್ಚಿಯ 'ನಿಯೋಫ್ಲೈ' ಅನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡಲು ಮುಂದಾಗಿದೆ.

"ನಿಯೋಫ್ಲೈ, ಬಳಕೆದಾರರಿಗೆ ಕಸ್ಟಮೈಸ್ ಮಾಡಿದ ಮೊದಲ ಭಾರತೀಯ ಗಾಲಿಕುರ್ಚಿಯಾಗಿದ್ದು, ಸೌಕರ್ಯ, ದಕ್ಷ ಚಾಲನೆ ಒದಗಿಸಲಿದೆ. ಎಂತಹ ಕಡಿದಾದ ಪ್ರದೇಶಗಳಲ್ಲೂ ಈ ವಾಹನವನ್ನು ಓಡಿಸಬಹುದು. ನಿಯೋಬೋಲ್ಟ್‌ಗೆ ಹೋಲಿಸಬಹುದಾದ ವೈಶಿಷ್ಟ್ಯಗಳನ್ನು ಹೊಂದಿರುವ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿವೆ ಮತ್ತು ಕನಿಷ್ಠ ಮೂರರಿಂದ ಐದು ಪಟ್ಟು ಹೆಚ್ಚು ದುಬಾರಿಯಾಗಿದೆ. ಆದರೆ, ಈ ವಾಹನ ಅತಿ ಕಡಿಮೆ ಬೆಲೆಗೆ ಸಿಗಲಿದೆ ಎಂದು ಸುಜಾತಾ ತಮ್ಮ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ವಿವರಿಸಿರುವ ಸ್ವಸ್ತಿಕ್​ ಸೌರವ್ ಡ್ಯಾಶ್, ನಿಯೋಫ್ಲೈ ಮತ್ತು ನಿಯೋಬೋಲ್ಟ್​ ಅನ್ನು ಪ್ರಸ್ತುತ ಭಾರತದ 28 ರಾಜ್ಯಗಳಲ್ಲಿ 600 ಕ್ಕೂ ಹೆಚ್ಚು ಜನರು ಬಳಸುತ್ತಿದ್ದಾರೆ. ಡೆಮೊ ಘಟಕಗಳು 15 ಡೀಲರ್ ಮಳಿಗೆಗಳಲ್ಲಿ ಮತ್ತು ನಾಲ್ಕು ಪುನರ್ವಸತಿ ಕೇಂದ್ರಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ವಾರ್ಷಿಕವಾಗಿ ಸುಮಾರು ಮೂರು ಲಕ್ಷ ಗಾಲಿಕುರ್ಚಿಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ನಿಯೋಫ್ಲೈ ವೈಶಿಷ್ಟ್ಯದ ಮುಖ್ಯಾಂಶಗಳು

  • ಟ್ಯೂಬ್​ಲೆಸ್​ ಟೈಗರ್​​
  • ಸೀಟ್​ ಹೊಂದಾಣಿಕೆ
  • ಸೀಟ್​ ಅಗಲ ಹಾಗೂ ಹೊಂದಾಣಿಕೆ
  • ಸುರಕ್ಷತೆ ವಿರೋಧಿ ಟಿಪ್ಪರ್‌ಗಳು

ನಿಯೋಬೋಲ್ಟ್ ಫೀಚರ್ ಮುಖ್ಯಾಂಶಗಳು

  • ತ್ವರಿತ ಮತ್ತು ಸುಲಭ ಲಗತ್ತು ವಿನ್ಯಾಸ (ಪೇಟೆಂಟ್)
  • ಸುರಕ್ಷತೆ ವಿರೋಧಿ ಟಿಪ್ಪರ್‌ಗಳು (ಪೇಟೆಂಟ್)
  • 4 ಗಂಟೆಗಳ ರೀಚಾರ್ಜ್​ಗೆ 25 ಕಿಲೋ ಮೀಟರ್​ ಪ್ರಯಾಣ
  • ಡಿಜಿಟಲ್ ಡ್ಯಾಶ್‌ಬೋರ್ಡ್
  • ಹೆಡ್‌ಲೈಟ್, ಸೈಡ್ ಇಂಡಿಕೇಟರ್ಸ್, ಹಾರ್ನ್, ಮಿರರ್
  • ರಿವರ್ಸ್ ಫಂಕ್ಷನ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.