ETV Bharat / business

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎನ್ ಲೈನ್ ಬ್ರಾಂಡ್

author img

By

Published : Aug 9, 2021, 4:33 PM IST

ಹ್ಯುಂಡೈ ತನ್ನ ಕಾರ್ಯಕ್ಷಮತೆ ಆಧಾರಿತ ಎನ್ ಲೈನ್ ಬ್ರಾಂಡ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಹ್ಯುಂಡೈ ಪ್ರಸ್ತುತ ಎನ್ ಲೈನ್ ಅನ್ನು ಯುರೋಪ್, ದಕ್ಷಿಣ ಕೊರಿಯಾ, ಯುಎಸ್ ಮತ್ತು ರಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಮಾರಾಟ ಮಾಡುತ್ತಿದೆ.

Hyundai
Hyundai

ನವದೆಹಲಿ: ದಕ್ಷಿಣ ಕೊರಿಯಾದ ವಾಹನ ತಯಾರಿಕಾ ಕಂಪನಿ ಹ್ಯುಂಡೈ ತನ್ನ ಕಾರ್ಯಕ್ಷಮತೆ ಆಧಾರಿತ ಎನ್ ಲೈನ್ ಬ್ರಾಂಡ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ ಎಂದು ಸೋಮವಾರ ಹೇಳಿದೆ.

ಈ ವರ್ಷ ಎನ್ ಬ್ಯಾಡ್ಜ್ ಅಡಿ ಮೊದಲ ಮಾದರಿಯನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಕಂಪನಿಯು ಹೇಳಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಹೆಚ್ಚುವರಿ ಮಾದರಿ ಬಿಡುಗಡೆಮಾಡಲಿದೆ.

"ನಮ್ಮ ಎನ್ ಲೈನ್ ಶ್ರೇಣಿಯನ್ನು ಭಾರತಕ್ಕೆ ಪರಿಚಯಿಸುವುದು, ಹಿಂದೆಂದೂ ಇಲ್ಲದಂತಹ ಕ್ರೀಡಾ ಅನುಭವಗಳನ್ನು ಪ್ರೇರೇಪಿಸುತ್ತದೆ, ಪ್ರತಿ ಡ್ರೈವ್ ಉತ್ಸಾಹ ಮತ್ತು ಮೋಜಿನ ಅನುಭವವನ್ನು ನೀಡುತ್ತದೆ" ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಎಂಡಿ ಮತ್ತು ಸಿಇಒ ಎಸ್ ಎಸ್ ಕಿಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತಕ್ಕೆ ಬದ್ಧವಾಗಿರುವ ಸಂಸ್ಥೆಯಾಗಿ, ಕಂಪನಿಯು ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸುತ್ತಿದೆ ಎಂದು ಅವರು ಹೇಳಿದರು.

ಹ್ಯುಂಡೈ ಪ್ರಸ್ತುತ ಎನ್ ಲೈನ್ ಅನ್ನು ಯುರೋಪ್, ದಕ್ಷಿಣ ಕೊರಿಯಾ, ಯುಎಸ್ ಮತ್ತು ರಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಮಾರಾಟ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.