ETV Bharat / business

ಕೋವಿಡ್​ ಸಾಮಗ್ರಿಗಳ ಆಮದು ಮೇಲಿನ ತೆರಿಗೆ ವಿನಾಯಿತಿ GST ಮಂಡಳಿ ನಿರ್ಧರಿಸುತ್ತೆ: ಸೀತಾರಾಮನ್​

author img

By

Published : May 28, 2021, 8:55 PM IST

ಏಳು ತಿಂಗಳ ಅಂತರದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಮನ್ ಅವರ ಅಧ್ಯಕ್ಷತೆಯಲ್ಲಿ 43ನೇ ಸರಕು ಮತ್ತು ಸೇವಾ ತರಿಗೆಯ (ಜಿಎಸ್​ಟಿ) ಮಂಡಳಿ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಬಂಧಿತ ವಸ್ತುಗಳ ಮೇಲಿನ ಜಿಎಸ್​ಟಿ ಕಡಿತದ ಬಗ್ಗೆ ಚರ್ಚಿಸಲು ಮತ್ತು ನಿರ್ಧರಿಸಲು ಸಚಿವರ ತಂಡ ರಚಿಸಲಾಗುವುದು. ಜೂನ್ 8ರೊಳಗೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದರು.

GST
GST

ನವದೆಹಲಿ: ಕೋವಿಡ್ ಸಂಬಂಧಿತ ವಸ್ತುಗಳ ಮೇಲಿನ ಜಿಎಸ್​ಟಿ ಕಡಿತದ ಬಗ್ಗೆ ಚರ್ಚಿಸಲು ಮತ್ತು ನಿರ್ಧರಿಸಲು ಸಚಿವರ ತಂಡ ರಚಿಸಲಾಗುವುದು. ಜೂನ್ 8ರೊಳಗೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಹಣಕಾಸು ಸಚಿವೆ ಸೀತಾರಾಮನ್​ ಹೇಳಿದ್ದಾರೆ.

ಏಳು ತಿಂಗಳ ಅಂತರದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಮನ್ ಅವರ ಅಧ್ಯಕ್ಷತೆಯಲ್ಲಿ 43ನೇ ಸರಕು ಮತ್ತು ಸೇವಾ ತರಿಗೆಯ (ಜಿಎಸ್​ಟಿ) ಮಂಡಳಿ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ತೆರಿಗೆ ಬಳಕೆದಾರರಿಗೆ ಅಂತಿಮ ಬಳಕೆದಾರರನ್ನು ತಲುಪುವ ಜವಾಬ್ದಾರಿಯನ್ನು ಹೊಂದಿದ್ದೇವೆ. ಅದಕ್ಕಾಗಿಯೇ ಕೋವಿಡ್-19 ಸಂಬಂಧಿತ ವಸ್ತುಗಳನ್ನು ವಿನಾಯಿತಿ ನೀಡುವಲ್ಲಿ ಒಂದು ಬಿಕ್ಕಟ್ಟು ಇತ್ತು ಎಂದರು.

ಮುಂಬರುವ ತಿಂಗಳುಗಳಲ್ಲಿ ಲಸಿಕೆ ಪೂರೈಕೆ ಪ್ರಸ್ತುತಕ್ಕಿಂತ ಹೆಚ್ಚಿನದಾಗಿದೆ ಇರಲಿದೆ. ಯುರೋಪ್ ಮತ್ತು ಜಪಾನ್ ಅನುಮೋದಿಸಿದ ಲಸಿಕೆ ತಯಾರಕರನ್ನು ಭಾರತಕ್ಕೆ ಬಂದು ಉತ್ಪಾದಿಸುವಂತೆ ನಾವು ಆಹ್ವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.