ETV Bharat / business

ಭಾರತದ GDP ಬೆಳವಣಿಗೆ 2022 ರಲ್ಲಿ ಶೇ. 9.5ಕ್ಕೆ ಏರಿಕೆಯಾಗಬಹುದು: ಮೂಡೀಸ್

author img

By

Published : Feb 24, 2022, 10:16 PM IST

ಈ ಕ್ಯಾಲೆಂಡರ್ ವರ್ಷದಲ್ಲಿ ಭಾರದ ಜಿಡಿಪಿಯು ಶೇ. 7ರಷ್ಟರಿಂದ ಶೇ.9.5ಕ್ಕೆ ಏರಿಕೆಯಾಗಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್​​ ಸರ್ವೀಸ್ ಅಂದಾಜು ಮಾಡಿದೆ. ಈ ಅಂದಾಜನ್ನು ತೈಲ ಬೆಲೆ ಮತ್ತು ಪೂರೈಕೆಯ ಆಧಾರದ ಮೇಲೆ ಮಾಡಲಾಗಿದೆ.

ಮೂಡೀಸ್
ಮೂಡೀಸ್

ನವದೆಹಲಿ: ಕೋವಿಡ್​ ನಂತರದಲ್ಲಿ ಭಾರತದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ನಿವ್ವಳ ರಾಷ್ಟ್ರೀಯ ಉತ್ಪನ್ನ (GDP) ಈ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್​) ಶೇ. 7ರಷ್ಟರಿಂದ ಶೇ.9.5ಕ್ಕೆ ಏರಿಕೆಯಾಗಲಿದೆ ಎಂದು ಮೂಡೀಸ್ ಇನ್ವೆಸ್ಟರ್ಸ್​​ ಸರ್ವೀಸ್ ಅಂದಾಜು ಮಾಡಿದೆ.

ಈ ಅಂದಾಜನ್ನು ತೈಲ ಬೆಲೆ ಮತ್ತು ಪೂರೈಕೆಯ ಆಧಾರದ ಮೇಲೆ ಮಾಡಲಾಗಿದೆ. ನಾವು ಭಾರತದ 2022ರ ಕ್ಯಾಲೆಂಡರ್ ವರ್ಷದ ಬೆಳವಣಿಗೆಯ ಮುನ್ಸೂಚನೆಯನ್ನು ಶೇ.7 ರಿಂದ ಶೇ. 9.5 ಕ್ಕೆ ಹೆಚ್ಚಿಸಿದ್ದೇವೆ. 2023 ರಲ್ಲಿ ಇದು ಶೇ.5.5ರಷ್ಟು ಬೆಳವಣಿಗೆಯಲ್ಲೇ ಉಳಿಸಿಕೊಳ್ಳಲಾಗಿದೆ. ಇದು 2022-23 ರ ಆರ್ಥಿಕ ವರ್ಷದಲ್ಲಿ ಶೇ. 8.4 ರಿಂದ ಶೇ.6.5 ಆಗಬಹುದೆಂದು ಮೂಡೀಸ್ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಮೂಡೀಸ್ ಭಾರತದ ಆರ್ಥಿಕತೆಯು 2022-23 ರ ಹಣಕಾಸು ವರ್ಷದಲ್ಲಿ ಶೇ. 7.9 ರಷ್ಟು ವಿಸ್ತರಿಸಲಿದೆ ಎಂದು ಮುನ್ಸೂಚನೆ ನೀಡಿತ್ತು.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆ ಚೇತರಿಕೆ ಕಾಣುತ್ತದೆ.. ಭಯಬೇಡ: ರವಿ ಸಿಂಘಾಲ್ ವಿಶ್ವಾಸ

ಅಧಿಕೃತ ಅಂದಾಜಿನ ಪ್ರಕಾರ, ಮಾರ್ಚ್ 31ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 9.2 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಬೇರೆ ದೇಶಗಳಲ್ಲಿ ಸೇವಾ ವಲಯದಲ್ಲಿ ಚೇತರಿಕೆಯು ಹಿಂದುಳಿದಿದೆ, ಆದರೆ ಓಮಿಕ್ರಾನ್ ಅಲೆ ಕಡಿಮೆಯಾದಾಗಿನಿಂದ ಇದು ಹೆಚ್ಚಾಗುತ್ತದೆ ಎಂದು ಮೂಡೀಸ್ ಹೇಳಿದೆ.

ಫೆಬ್ರವರಿಯಲ್ಲಿ ನಡೆಸಿದ ಸಭೆಯಲ್ಲಿ ಆರ್​ಬಿಐ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರಿಂದ ವಿತ್ತೀಯ ನೀತಿಗೆ ಬೆಂಬಲ ನೀಡಿದಂತಾಗಿದೆ. ಆರ್‌ಬಿಐ ದ್ರವ್ಯತೆ ಕ್ರಮಗಳನ್ನು ಬಿಗಿಗೊಳಿಸಲು ಮುಂದಾಗಬಹುದು ಮತ್ತು ಈ ವರ್ಷದ ದ್ವಿತೀಯಾರ್ಧದಲ್ಲಿ ರೆಪೋ ದರವನ್ನು ಹೆಚ್ಚಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಮೂಡೀಸ್​ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.