ETV Bharat / business

ರಾಜ್ಯದಲ್ಲಿನ ಭೀಕರ ಜಲ ಕಂಟಕಕ್ಕೆ ಕೊಚ್ಚಿ ಹೋಯ್ತು ₹ 32 ಸಾವಿರ ಕೋಟಿ!

author img

By

Published : Aug 27, 2019, 10:01 PM IST

ಎಫ್​ಕೆಸಿಸಿಐನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರವಾಹ ಸಂಬಂಧಿತ ಹಾನಿಯಿಂದ ಅಂದಾಜು 32,000 ಕೋಟಿ ರೂ. ನಷ್ಟವಾಗಿದೆ. ಹಲವು ಹಂತದ ಪರಿಶೀಲನೆಗಳು ಮುಕ್ತಾಯವಾಗಿದ್ದು, ಕೊನೆಯ ಹಂತವೊಂದೇ ಉಳಿದಿದೆ. ಪ್ರವಾಹ ಪೀಡಿತ ಪ್ರತಿ ಸಂತ್ರಸ್ತ ಕುಟುಂಬಗಳಿಗೆ ತಲಾ 10,000 ರೂ. ಪರಿಹಾರ ಧನ ನೀಡಲಾಗುತ್ತಿದೆ. ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳನ್ನು ನೆರೆ ಸಂತ್ರಸ್ತರಿಗಾಗಿ ಉಪಯೋಗಿಸಲಾಗುತ್ತಿದೆ ಎಂದರು.

ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಿಂದ ಅಂದಾಜು 32 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳಿದರು.

ಎಫ್​ಕೆಸಿಸಿಐನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರವಾಹ ಸಂಬಂಧಿತ ಹಾನಿಯಿಂದ ಅಂದಾಜು 32,000 ಕೋಟಿ ರೂ. ನಷ್ಟವಾಗಿದೆ. ಹಲವು ಹಂತದ ಪರಿಶೀಲನೆಗಳು ಮುಕ್ತಾಯವಾಗಿದ್ದು, ಕೊನೆಯ ಹಂತವೊಂದೇ ಉಳಿದಿದೆ. ಪ್ರವಾಹ ಪೀಡಿತ ಪ್ರತಿ ಸಂತ್ರಸ್ತ ಕುಟುಂಬಗಳಿಗೆ ತಲಾ 10,000 ರೂ. ಪರಿಹಾರ ಧನ ನೀಡಲಾಗುತ್ತಿದೆ. ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳನ್ನು ನೆರೆ ಸಂತ್ರಸ್ತರಿಗಾಗಿ ಉಪಯೋಗಿಸಲಾಗುತ್ತಿದೆ ಎಂದರು.

ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬಗಳಿಗೆ 10 ಕೆಜಿ ಅಕ್ಕಿ, 1 ಕೆಜಿ ಬೆಲ್ಲ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಹಾಗೂ 5 ಲೀಟರ್ ಸೀಮೆಎಣ್ಣೆ ಒಳಗೊಂಡ ಆಹಾರ ಕಿಟ್​ ವಿತರಿಸುತ್ತಿದ್ದೇವೆ ಎಂದು ವಿಜಯ್ ಭಾಸ್ಕರ್ ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್

ಕೇಂದ್ರದ ತಂಡ 2 ದಿನಗಳ ಪ್ರವಾಸ ಮುಗಿಸಿ ಇಂದು ಕೊಡಗಿನಲ್ಲಿ ಪರಿಶೀಲನೆ ನಡೆಸಿದೆ. ರಾಜ್ಯ ಸರ್ಕಾರ ನಷ್ಟವಾಗಿರುವ ಎಲ್ಲ ಅಂಕಿ-ಅಂಶಗಳನ್ನು ಒಗ್ಗೂಡಿಸಿ ಕೇಂದ್ರಕ್ಕೆ ಸಲ್ಲಿಸಬೇಕಿತ್ತು. ಆದರೆ, ಮನವಿ ಪತ್ರ ಕಳಿಸುವ ಮುನ್ನವೇ ಕೇಂದ್ರ ರಾಜ್ಯದ ಪರಿಸ್ಥಿತಿಯನ್ನು ಅರಿಯಲು ಅಧಿಕಾರಿಗಳ ತಂಡ ಕಳುಹಿಸಿದೆ. ಬರಕ್ಕೆ ನೀಡಿದ ಹಣವನ್ನು ಪ್ರವಾಹಕ್ಕೆ ಬಳಸಲು ಸಾಧ್ಯವಿಲ್ಲ ಎಂದರು.

Intro:Body:ಪ್ರವಾಹದಿಂದ ಅಂದಾಜು 32,000 ಕೋಟಿಗಳಷ್ಟು ನಷ್ಟ ಸಂಭವಿಸಿದೆ


ಬೆಂಗಳೂರು: ಇಂದು ಎಫ್ ಕೆ ಸಿ ಸಿ ಐ ನಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಪಾಲ್ಗೊಂಡಿದ್ದರು.


ಸದ್ಯಕ್ಕೆ 32,000 ಕೋಟಿ ನಷ್ಟ ಆಗಿದೆ, ಇನ್ನು ಕೊನೆ ಹಂತದ ಪರಿಶೀಲನೆ ಬಾಕಿ ಇದೆ. ಪ್ರವಾಹ ಸಂತ್ರಸ್ತರಿಗೆ 10,000 ರೂಪಾಯಿ ನೀಡಲಾಗುತ್ತಿದೆ, ಜೊತೆಗೆ ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನವನ್ನು ನೆರೆ ಸಂತ್ರಸ್ತರಿಗೆ ಉಪಯೋಗಿಸಲಾಗುತ್ತಿದೆ. ಹಾಗೂ ಗಂಜಿಕೇಂದ್ರದಿಂದ ಮನೆಗೆ ಹೋದ ಸಂದರ್ಭದಲ್ಲಿ 10 ಕೆಜಿ ಅಕ್ಕಿ, 1 ಕೆ ಜಿ ಬೇಲೆ, ಅಡುಗೆ ಎಣ್ಣೆ, ಸಕ್ಕರೆ,ಉಪ್ಪು ಹಾಗೂ 5 ಲೀಟರ್ ಸೀಮೆ ಎಣ್ಣೆ (ಆಹಾರ ಕಿಟ್) ಕೊಡಲಾಗುವುದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ತಿಳಿಸಿದರು.


ಕೇಂದ್ರದ ತಂಡ 2 ದಿನದ ಪ್ರವಾಸ ಮುಗಿಸಿ ಇಂದು ಕೊಡಗಿಗೆ ಪರಿಶೀಲನೆ ಪ್ರಯುಕ್ತ ತೆರಳಿದ್ದಾರೆ, ಇಂದು ಸಂಜೆ ಬೆಂಗಳೂರಿಗೆ ಪರಿಶೀಲನೆ ಮುಗಿಸಿ ಬರುತ್ತಾರೆ. ವಾಡಿಕೆ ಪ್ರಕಾರ ರಾಜ್ಯ ಸರ್ಕಾರ ನಷ್ಟವಾಗಿರುವ ಎಲ್ಲಾ ಅಂಕಿಅಂಶಗಳನ್ನು ಕೃಡಿಕರಿಸಿ ಕೇಂದ್ರಕ್ಕೆ ಕಲಿಸಬೇಕು, ಆದರೆ ಮನವಿ ಪತ್ರ ಕಳಿಸುವ ಮುನ್ನವೇ ಕೇಂದ್ರ ಪರಿಸ್ಥಿತಿಯನ್ನು ಅರಿತು ತಂಡವನ್ನು ಕಳಿಸಿದೆ, ಹಾಗೂ ಬರಕ್ಕೆ ನೀಡಿದ ಹಣವನ್ನು ಪ್ರವಾಹಕ್ಕೆ ಬಳಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ತಳಿಸಿದರು.


ಇದೆ ಸಂದರ್ಭದಲ್ಲಿ ಪೀಣ್ಯ ಇಂಡಸ್ತ್ರೀಯಲ್ ಎಸ್ಟೇಟ್ ಅಲ್ಲಿ ಬಿಡದಿ ಕೈಗಾರಿಕಾ ಪ್ರದೇಶದಂತೆ ಮಾಡಬಹುದು ಇದಕ್ಕೆ ಸೂಚನೆಯನ್ನು ಪೀಣ್ಯ ಕೈಗಾರಿಕಾ ಪ್ರದೇಶದ ಉದ್ಯಮಿಗಳಿಗೆ ಹೇಳಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.