ETV Bharat / business

30 ಕೋಟಿ ಜನರಿಗೆ ಮೊದಲ ಹಂತದ ಲಸಿಕೆ ವಿತರಣೆ: ಸರ್ಕಾರ ಖರ್ಚು ಮಾಡುವ ಹಣವೆಷ್ಟು ಗೊತ್ತೇ?

author img

By

Published : Dec 18, 2020, 5:16 PM IST

ಸುಮಾರು 30 ಕೋಟಿ ಭಾರತೀಯ ಆದ್ಯತೆಯ ಗುಂಪಿಗೆ ನೀಡಲಾಗುತ್ತದೆ. ಬಹು ವಿಶಾಲವಾದ ಲಸಿಕೆ ಆಯಾಮದ ವೆಚ್ಚವನ್ನು ಕೇಂದ್ರವು ಭರಿಸಲಿದೆ. ಬಿಹಾರ ಮತ್ತು ಕೇರಳ ರಾಜ್ಯಗಳು ಈಗಾಗಲೇ ಉಸಿತ ಲಸಿಕೆ ನೀಡುವುದಾಗಿ ಘೋಷಿಸಿವೆ. ಇತರ ರಾಜ್ಯಗಳು ಸಹ ಇದೇ ರೀತಿಯ ಪ್ರಕಟಣೆ ಹೊರಡಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ

COVID-19 vaccination
ಲಸಿಕೆ

ನವದೆಹಲಿ: ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಯೋಜನೆಯ ಮೊದಲ ಹಂತದಲ್ಲಿ ಕೇಂದ್ರವು 10,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಲಸಿಕೆಯನ್ನು ಮೊದಲಿಗೆ ಸುಮಾರು 30 ಕೋಟಿ ಭಾರತೀಯರ ಆದ್ಯತೆಯ ಗುಂಪಿಗೆ ನೀಡಲಾಗುತ್ತದೆ. ಬಹು ವಿಶಾಲವಾದ ಲಸಿಕೆ ಆಯಾಮದ ವೆಚ್ಚವನ್ನು ಕೇಂದ್ರವು ಭರಿಸಲಿದೆ. ಬಿಹಾರ ಮತ್ತು ಕೇರಳ ರಾಜ್ಯಗಳು ಈಗಾಗಲೇ ಉಸಿತ ಲಸಿಕೆ ನೀಡುವುದಾಗಿ ಘೋಷಿಸಿವೆ. ಇತರ ರಾಜ್ಯಗಳು ಸಹ ಇದೇ ರೀತಿಯ ಪ್ರಕಟಣೆ ಹೊರಡಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಮೆಗಾ ವ್ಯಾಕ್ಸಿನೇಷನ್ ಡ್ರೈವ್‌ಗೆ ಹಣ ಒದಗಿಸಲು ಸರ್ಕಾರವು ಅಂತಾರಾಷ್ಟ್ರೀಯ ಬ್ಯಾಂಕ್​ಗಳಿಂದ ಸಾಲ ತೆಗೆದುಕೊಳ್ಳಬಹುದು ಎಂದು ಮೂಲಗಳು ಹೇಳುತ್ತಿವೆ.

ಅಜೀಮ್​ ಪ್ರೇಮ್​ಜಿ, ಪತ್ನಿ ಯಾಸ್ಮೀನ್​​ಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್​

ಭಾರತವು ಜಾಗತಿಕ ವ್ಯಾಕ್ಸಿನೇಷನ್ ಪ್ರಯತ್ನದ ಒಂದು ಭಾಗವಾಗಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಜಿಎವಿಐ ಸಾಗುತ್ತಿದೆ. ಈ ಸಂಸ್ಥೆಗಳು ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ವ್ಯಾಕ್ಸಿನೇಷನ್​ಗೆ ನೆರವಾಗುತ್ತಿವೆ. ಜಿಎವಿಐ ಈಗಾಗಲೇ ತನ್ನ ವ್ಯಾಕ್ಸಿನೇಷನ್ ಯೋಜನೆ ಕುರಿತು ಭಾರತದೊಂದಿಗೆ ಮಾತುಕತೆ ಆರಂಭಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.