ಅತಿ ಕಡಿಮೆ ದರದಲ್ಲಿ ವಿಮಾನ ಸೇವೆ: 70 ವಿಮಾನ ಖರೀದಿಗೆ ಕೋಟ್ಯಧಿಪತಿ ಜುನ್‌ಜುನ್‌ವಾಲ ಪ್ಲಾನ್‌

author img

By

Published : Jul 28, 2021, 9:14 PM IST

Billionaire investor Rakesh Jhunjhunwala plans 70 planes for new airline

ಕೋವಿಡ್ ಬರುವುದಕ್ಕೂ ಮೊದಲಿನಿಂದಲೂ ದೇಶದ ಬಹುತೇಕ ವಿಮಾನಯಾನ ಸಂಸ್ಥೆಗಳ ದರ ಸಮರ ಹಾಗೂ ಹೆಚ್ಚಿದ ನಿರ್ವಹಣಾ ವೆಚ್ಚದಿಂದಾಗಿ ತತ್ತರಿಸಿ ಹೋಗಿವೆ. ಇದರ ನಡುವೆಯೇ ಬಿಲಿಯನೇರ್ ರಾಕೇಶ್ ಜುನ್‌ಜುನ್‌ವಾಲ ಅತಿ ಕಡಿಮೆ ದರದಲ್ಲಿ ಜನರಿಗೆ ವಿಮಾನ ಸೇವೆ ನೀಡುವ ಆಶಾವಾದ ಹೊಂದಿದ್ದಾರೆ. ಇದಕ್ಕಾಗಿ ಮುಂದಿನ 4 ವರ್ಷಗಳಲ್ಲಿ 70 ವಿಮಾನಗಳನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ.

ನವದೆಹಲಿ: ಕೋಟ್ಯಾಧಿಪತಿ, ಹೂಡಿಕೆದಾರ ರಾಕೇಶ್ ಜುನ್‌ಜುನ್‌ವಾಲ ಹೊಸ ವಿಮಾನಯಾನ ಸಂಸ್ಥೆ ಸ್ಥಾಪನೆಗೆ ಮುಂದಾಗಿದ್ದು, ನಾಲ್ಕು ವರ್ಷಗಳಲ್ಲಿ 70 ವಿಮಾನಗಳನ್ನು ಖರೀದಿಸಲು ಯೋಜಿಸುತ್ತಿದ್ದಾರೆ.

260,60,80,330 ಕೋಟಿ ರೂ. (35 ಮಿಲಿಯನ್‌) ಹೂಡಿಕೆ ಮಾಡಲು ರಾಕೇಶ್‌ ಯೋಚಿಸುತ್ತಿದ್ದು, ಶೇ 40 ರಷ್ಟು ಷೇರು ಹೊಂದಲು ಜುನ್‌ಜುನ್‌ವಾಲ ನಿರ್ಧರಿಸಿದ್ದಾರೆ. ಮುಂದಿನ 15 ದಿನಗಳಲ್ಲಿ ಭಾರತದ ವಾಯುಯಾನ ಸಚಿವಾಲಯದಿಂದ ನಿರಪೇಕ್ಷಣಾ ಪ್ರಮಾಣಪತ್ರವನ್ನು ಪಡೆಯುವ ನಿರೀಕ್ಷೆಯಿದೆ ಎಂದು ಸಂದರ್ಶನದಲ್ಲಿ ಬುಧವಾರ ಹೇಳಿದ್ದಾರೆ.

ಅತಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯನ್ನು ಅಕಾಶ ಏರ್ ಎಂದು ಕರೆಯಲಾಗುತ್ತದೆ. ಡೆಲ್ಟಾ ಏರ್ ಲೈನ್ಸ್ ಸಂಸ್ಥೆಯ ಮಾಜಿ ಹಿರಿಯ ಕಾರ್ಯನಿರ್ವಾಹಕನನ್ನು ಒಳಗೊಂಡ ತಂಡವು 180 ಪ್ರಯಾಣಿಕರ ಸಾಮರ್ಥ್ಯದ ವಿಮಾನಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ದರ ಹೆಚ್ಚಳ ಮತ್ತು ಹೆಚ್ಚಿನ ವೆಚ್ಚಗಳಿಂದಾಗಿ ಕೆಲವು ವಿಮಾನಯಾನ ಸಂಸ್ಥೆಗಳು ಕುಸಿದಿರುವುದನ್ನು ಕಂಡಿದ್ದೇವೆ ಎಂದು ಹೇಳುವ ಭಾರತದ ವಾರೆನ್ ಬಫೆಟ್ ಖ್ಯಾತಿಯ ಜುನ್‌ಜುನ್‌ವಾಲ, ಒಂದು ಕಾಲದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಯು ಒಂದು ಆಕರ್ಷಣೆಯನ್ನು ಹೊಂದಿದೆ. ಕಡಿಮೆ ದರದಲ್ಲಿ ಹೊಸ ವಿಮಾನ ಸೇವೆ ನೀಡುವತ್ತ ಗಮನ ಹರಿಸುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ನೋಡಿ: ಬಿಜೆಪಿ ನಾಯಕರಿದ್ದ 'ಐತಿಹಾಸಿಕ' ವಿಮಾನ ಚಲಾಯಿಸಿದ ಸಂಸದ ರಾಜೀವ್ ಪ್ರತಾಪ್ ರೂಡಿ!

ಸಾಂಕ್ರಾಮಿಕ ಕೋವಿಡ್‌ಗೂ ಮುನ್ನವೇ ಭಾರತದ ವಿಮಾನಯಾನ ಸಂಸ್ಥೆಗಳು ಕಷ್ಟಪಡುತ್ತಿದ್ದವು. ಒಂದು ಕಾಲದಲ್ಲಿ ದೇಶದ ಎರಡನೇ ಅತಿದೊಡ್ಡ ದೇಶೀಯ ವಿಮಾನಯಾನ ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್ 2012 ರಲ್ಲಿ ಕಾರ್ಯಾಚರಣೆಯನ್ನು ಕೊನೆಗೊಳಿಸಿತು. ಇತ್ತೀಚೆಗೆ ಮತ್ತೆ ಹಾರಲು ಅನುಮೋದನೆ ಪಡೆದ ಜೆಟ್ ಏರ್‌ವೇಸ್ ಇಂಡಿಯಾ ಲಿಮಿಟೆಡ್ 2019 ರಲ್ಲಿ ಕುಸಿಯಿತು.

ಜಾಗತಿಕವಾಗಿ ವಾಯುಯಾನಕ್ಕೆ ಬೇಡಿಕೆಯುಂಟಾಗಿದ್ದರೂ, ಭಾರತದ ವಾಯುಯಾನ ಉದ್ಯಮವು ಚೇತರಿಕೆ ಕಾಣದೆ ಹೆಚ್ಚಿನ ಅಪಾಯ ಎದುರಿಸುತ್ತಿದೆ, ಏಕೆಂದರೆ ಕೋವಿಡ್‌ 3ನೇ ಅಲೆಯ ಬೆದರಿಕೆ ಕಾರಣವಾಗುತ್ತಿದೆ. ವಿಮಾನಯಾನ ಸಂಸ್ಥೆಗಳು ಇದರ ಪರಿಣಾಮವನ್ನು ಅನುಭವಿಸುತ್ತಿವೆ.

ಸಿಂಗಾಪುರ್ ಏರ್ಲೈನ್ಸ್ ಲಿಮಿಟೆಡ್ ಸಂಘಟಿತ ಟಾಟಾ ಗ್ರೂಪ್‌ನೊಂದಿಗೆ ಜಂಟಿಯಾಗಿ ಹೊಂದಿರುವ ವಿಸ್ತಾರಾ, ವಿಮಾನ ವಿತರಣೆಯನ್ನು ವಿಳಂಬಗೊಳಿಸಲು ಮತ್ತು ಪಾವತಿ ವೇಳಾಪಟ್ಟಿಗಳಲ್ಲಿ ಬದಲಾವಣೆಗಳನ್ನು ಮಾಡಲು ಬೋಯಿಂಗ್ ಕೋ ಮತ್ತು ಏರ್ಬಸ್ ಎಸ್ಇ ಜೊತೆ ಚರ್ಚಿಸುತ್ತಿದೆ. ಫೋರ್ಬ್ಸ್ ಪ್ರಕಾರ ರಾಕೇಶ್‌ ಜುನ್‌ಜನ್‌ವಾಲಾ ಅಂದಾಜು 64.6 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.