ETV Bharat / briefs

ಸರಪಾಡಿಯಲ್ಲಿ ಕರ್ತವ್ಯ ನಿರತ ಆಶಾ ಕಾರ್ಯಕರ್ತೆಗೆ ಬೆದರಿಕೆ.. ಆರೋಪಿಗಳ ಬಂಧನ

author img

By

Published : May 8, 2021, 8:38 PM IST

ಕರ್ತವ್ಯನಿರತ ಆಶಾ ಕಾರ್ಯಕರ್ತೆಗೆ ಬೆದರಿಕೆ ಒಡ್ಡಿದ ಹಿನ್ನೆಲೆ ಇಬ್ಬರು ಯುವಕರನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

Bnatwal
Bnatwal

ಬಂಟ್ವಾಳ(ದ.ಕ): ಕರ್ತವ್ಯನಿರತ ಆಶಾ ಕಾರ್ಯಕರ್ತೆಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಶನಿವಾರ ನಡೆದಿದೆ.

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರಪಾಡಿಯಲ್ಲಿ ಆಶಾ ಕಾರ್ಯಕತೆಯೊಬ್ಬರು ಪಾಸಿಟಿವ್ ಬಂದ ವ್ಯಕ್ತಿಯ ಆರೋಗ್ಯ ವಿಚಾರಿಸಿಕೊಂಡು ಅವರಿಗೆ ಹೊರಗೆ ತಿರುಗಾಡದಂತೆ ತಿಳಿಸಿದ್ದಾರೆ. ಆ ಬಳಿಕ ಹಿಂತಿರುಗಿ ಬರುತ್ತಿರುವಾಗ ಸೋಂಕಿತೆ ಸಂಬಂಧಿಕರಾದ ಸರಪಾಡಿಯ ಸಂದೀಪ್ ಮತ್ತು ಸಂತೋಷ ಎಂಬ ವ್ಯಕ್ತಿಗಳು ನನ್ನ ಅತ್ತೆಗೆ ಕೊರೊನಾ ಟೆಸ್ಟ್ ಮಾಡಿಸಿ ಪಾಸಿಟಿವ್ ಬರಿಸಿದ್ದೇ ನೀನು, ನಿನಗೆ ಪಾಸಿಟಿವ್ ಬರಿಸಿದರೆ ಬಾರಿ ಹಣ ಬರುತ್ತದೆ ಎಂದು ಹೇಳಿ, ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ.

ಘಟನೆ ಕುರಿತು ಆರೋಪಿಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಐ.ಪಿ.ಸಿ ಕಲಂ 354, 506, 269, 270 ಮತ್ತು ಕಲಂ 5 [1] ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.