ETV Bharat / briefs

ಚುನಾವಣೆಗೆ ಟಾಟಾ ಕಂಪನಿ ಮಾಡಿದ ಖರ್ಚೆಷ್ಟು ಗೊತ್ತೇ..?

author img

By

Published : Apr 30, 2019, 4:21 PM IST

ರಾಜಕೀಯ ಪಕ್ಷಗಳ ಹಿಂದೆ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಿರುವುದು ಗೊತ್ತಿರುವ ವಿಚಾರ. ಸದ್ಯ ದೇಶದೆಲ್ಲೆಡೆ ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಟಾಟಾ ಕಂಪನಿ ಮಾಡಿರುವ ಖರ್ಚೆಷ್ಟು ಗೊತ್ತೇ..? 2014ರ ಮಹಾ ಚುನಾವಣೆಗೆ ಹೋಲಿಕೆ ಮಾಡಿದ್ರೆ, ಈ ಬಾರಿ 20 ಪಟ್ಟು ಹೆಚ್ಚು ವ್ಯಯ ಮಾಡಿದೆ..!

ಟಾಟಾ ಚುನಾವಣಾ ಖರ್ಚು

ನವದೆಹಲಿ: ಲೋಕಸಭೆ ಚುನಾವಣೆ 5 ನೇ ಹಂತಕ್ಕೆ ಬಂದು ತಲುಪಿದೆ. ಎಲೆಕ್ಷನ್‌ಗೆ ಕೇಂದ್ರ ಚುನಾವಣಾ ಆಯೋಗ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಜತೆಗೆ ಕಾರ್ಪೋರೇಟ್‌ ಕಂಪೆನಿಗಳು ಕೂಡಾ ನೂರಾರು ಕೋಟಿ ರೂಪಾಯಿ ಸುರಿಯುತ್ತವೆ. ಆಯೋಗ ಖರ್ಚು ಮಾಡುವುದು, ಚುನಾವಣೆ ನಡೆಸುವುದಕ್ಕಾದ್ರೆ, ಕಾರ್ಪೋರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ಕಾಸು ಕೊಡುತ್ತವೆ. ಈ ನಿಟ್ಟಿನಲ್ಲಿ ದೇಶದ ಪ್ರತಿಷ್ಟಿತ ಟಾಟಾ ಕಂಪನಿ ತನ್ನ ಎಲೆಕ್ಟೋರಲ್ ಟ್ರಸ್ಟ್‌ ಮೂಲಕ ಈ ಬಾರಿ ಬರೋಬ್ಬರಿ 500-600 ಕೋಟಿ ರೂ ರೂಪಾಯಿ ವೆಚ್ಚ ಮಾಡಿರುವುದು ತಿಳಿದು ಬಂದಿದೆ. ಇದು ದೇಶದಲ್ಲಿ ಚುನಾವಣೆ ನಡೆಸುವುದಕ್ಕೆ ಮಾಡಲಾಗುವ ವೆಚ್ಚ ಕಾಲು ಭಾಗ ಅನ್ನೋದನ್ನು ಇಲ್ಲಿ ಗಮನಿಸಬೇಕು.

2014- 15ನೇ ಹಣಕಾಸು ವರ್ಷದಲ್ಲಿ ಟಾಟಾ ಟ್ರಸ್ಟ್ 25.11 ಕೋಟಿ ರೂ ಹಣವನ್ನು ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಕೊಟ್ಟಿದೆ. ಆದ್ರೆ ಈ ಬಾರಿಯ ಚುನಾವಣೆಗೆ ಇದಕ್ಕಿಂತ 20 ಪಟ್ಟು ಹೆಚ್ಚು ದುಡ್ಡು ಸುರಿದಿದೆ ಎಂದು ಟಾಟಾ ಗುಂಪಿನ ಚುನಾವಣಾ ವೆಚ್ಚದ ಹೊಣೆ ಹೊತ್ತಿರುವ ಪ್ರೊಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್‌ ಅಧಿಕೃತವಾಗಿ ಮಾಹಿತಿ ಕೊಟ್ಟಿದೆ.

ವಿಶೇಷ ಅಂದ್ರೆ, ಇಷ್ಟೊಂದು ದುಡ್ಡನ್ನು ಟಾಟಾ ಕಂಪನಿ ಅನೇಕ ರಾಜಕೀ ಪಕ್ಷಗಳಿಗೆ ಒದಗಿಸಿದ್ದು, ಇದರಲ್ಲಿ ಹೆಚ್ಚಿನ ಫಂಡ್‌ ಬಿಜೆಪಿ ಪಾಲಾಗಿದೆ.

Intro:Body:

Tatas' election expenditure rises 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.