ETV Bharat / briefs

ಕೊರೊನಾ ಪ್ಯಾರ್​ ಹೈ..!! ಪತಿಯೊಂದಿಗಿನ ಫೋಟೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

author img

By

Published : May 16, 2021, 3:40 PM IST

Updated : May 16, 2021, 8:08 PM IST

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಪೋಷಕರು, ಗಂಡ, ಮಗ ಮತ್ತು ಒಂದು ವರ್ಷದ ಮಗಳು ಕೊರೊನಾ ಸೋಂಕು ತಗುಲಿದ್ದರಿಂದ ಕ್ವಾರಂಟೈನ್​ನಲ್ಲಿದ್ದಾರೆ. ತನ್ನ ಕುಟುಂಬವು ಕೋವಿಡ್​ ಪಾಸಿಟಿವ್ ಆಗಿ ಸುಮಾರು 10 ದಿನ ಕಳೆದಿವೆ ಎಂದು ಅವರು ಫೋಟೋ ಹಂಚಿಕೊಂಡಿದ್ದಾರೆ.

Shilpa Shetty
Shilpa Shetty

ಹೈದರಾಬಾದ್: ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಸದ್ಯ ಅವರ ಕುಟುಂಬದಲ್ಲಿ ಕೋವಿಡ್ ತಗುಲದ ಏಕೈಕ ಸದಸ್ಯರಾಗಿದ್ದಾರೆ. ಉಳಿದಂತೆ ಅವರ ಕುಟುಂಬಸ್ಥರು ಹೋಮ್​ ಕ್ವಾರಂಟೈನ್​ನಲ್ಲಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಪೋಷಕರು, ಗಂಡ, ಮಗ ಮತ್ತು ಒಂದು ವರ್ಷದ ಮಗಳು ಕ್ವಾರಂಟೈನ್​ನಲ್ಲಿದ್ದಾರೆ. ತನ್ನ ಕುಟುಂಬವು ಕೋವಿಡ್​ ಪಾಸಿಟಿವ್ ಆಗಿ ಸುಮಾರು 10 ದಿನ ಕಳೆದಿವೆ ಎಂದು ಅವರು ಹಂಚಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ 'ಪ್ರೀತಿ' ಹೇಗಿರುತ್ತದೆ ಎಂಬುದರ ಒಂದು ನೋಟವನ್ನು ಅವರು ತಮ್ಮ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಭಾನುವಾರ, ಶಿಲ್ಪಾ ತನ್ನ ಪತಿ ರಾಜ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದು, 'ಕೊರೊನಾ ಕಾಲದಲ್ಲಿ ಪ್ರೀತಿ... ಕೊರೊನಾ ಪ್ಯಾರ್​ ಹೈ' ಎಂದು ಚಿತ್ರಕ್ಕೆ ಕ್ಯಾಪ್ಶನ್​ ನೀಡಿರುವ ಶಿಲ್ಪಾ, ನಿಮ್ಮೆಲ್ಲರ ಪ್ರೀತಿ, ಕಾಳಜಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ನಟನಾ ವಿಷಯಕ್ಕೆ ಬಂದ್ರೆ ಶಿಲ್ಪಾ ಕೈಯಲ್ಲಿ ಎರಡು ಚಿತ್ರಗಳಿವೆ. 2003 ರ ಹಿಟ್ 'ಹಂಗಾಮಾ'ದ ಸೀಕ್ವೆಲ್​ ಹಂಗಾಮಾ 2 ನಲ್ಲಿ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೆಟಿಯಾ ನಟಿಸಿರುವ 'ನಿಕಮ್ಮ' ಚಿತ್ರದಲ್ಲಿ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ.

Last Updated :May 16, 2021, 8:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.