ETV Bharat / briefs

ಕಂದಾಯ ಭವನಕ್ಕೂ ಕಾಲಿಟ್ಟ ಕೊರೊನಾ: ಕೆಎಟಿ ಕಲಾಪ 2 ದಿನ ರದ್ದು

author img

By

Published : Jun 25, 2020, 8:40 PM IST

ಕಂದಾಯ ಇಲಾಖೆ ಅಧಿಕಾರಿಗಳಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ (ಕೆಎಟಿ) 2 ದಿನಗಳ ಕಲಾಪಗಳನ್ನು ರದ್ದುಪಡಿಸಲಾಗಿದೆ.

Revenue office tested corona positive
Revenue office tested corona positive

ಬೆಂಗಳೂರು: ನಗರದ ಕಂದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂದಾಯ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ಕಟ್ಟಡದ 6 ಮತ್ತು 7ನೇ ಮಹಡಿಯಲ್ಲಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ (ಕೆಎಟಿ) 2 ದಿನಗಳ ಕಲಾಪಗಳನ್ನು ರದ್ದುಪಡಿಸಲಾಗಿದೆ.

ಸೋಂಕು ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಜೂ. 26 ಹಾಗೂ 27ರಂದು ಕಲಾಪಗಳನ್ನು ರದ್ದುಪಡಿಸಿ ಕೆಎಟಿ ರಿಜಿಸ್ಟ್ರಾರ್​ ಗುರುವಾರ ಆದೇಶ ಹೊರಡಿಸಿದ್ದಾರೆ. ಕಂದಾಯ ಭವನವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕಿರುವ ಹಿನ್ನೆಲೆಯಲ್ಲಿ ಕಟ್ಟಡದ 1 ಹಾಗೂ 2ನೇ ಮಹಡಿಯಲ್ಲಿರುವ ಕಂದಾಯ ಇಲಾಖೆಯ ಕಚೇರಿಗಳನ್ನೂ ಬಂದ್ ಮಾಡಲಾಗಿದ್ದು, 3ನೇ ಮಹಡಿಯಲ್ಲಿರುವ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಕಲಾಪಗಳನ್ನೂ ಸ್ಥಗಿತಗೊಳಿಸಲಾಗಿದೆ.

ಕೆಎಟಿ ಶುಕ್ರವಾರಕ್ಕೆ ವಿಚಾರಣೆಗೆ ನಿಗದಿಪಡಿಸಿದ್ದ ಪ್ರಕರಣಗಳನ್ನು ಜೂ. 29ಕ್ಕೆ ಮುಂದೂಡಿದೆ. ಬೆಂಗಳೂರಿನ ಕೆಎಟಿ ಪ್ರಧಾನ ಪೀಠದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಮತಿ ಇಲ್ಲದೆ ಹೆಡ್ ಕ್ವಾಟ್ರಸ್​​​ನಿಂದ ಹೊರ ಹೋಗದಂತೆ ಸೂಚಿಸಿದ್ದು, ಆದೇಶ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.