ETV Bharat / briefs

ಮೊದಲ ವಿಕೆಟ್​​ಗೆ ವಿಶ್ವದಾಖಲೆಯ ಜೊತೆಯಾಟ... ಕೆರೆಬಿಯನ್ನರಿಂದ ಏಕದಿನ ಕ್ರಿಕೆಟ್​​ನಲ್ಲಿ ನೂತನ ರೆಕಾರ್ಡ್​​

author img

By

Published : May 5, 2019, 11:28 PM IST

ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಇಮಾಮ್ ಉಲ್ ಹಕ್ ಹಾಗೂ ಫಕರ್ ಜಮಾನ್ 304 ರನ್​ಗಳ ದಾಖಲೆ ಇಂದು ಪತನವಾಗಿದೆ.

ನೂತನ ರೆಕಾರ್ಡ್​​

ಡಬ್ಲಿನ್: ಇಂದಲ್ಲ ನಾಳೆ ದಾಖಲೆಗಳು ಬ್ರೇಕ್ ಆಗಲೇಬೇಕು. ಕ್ರಿಕೆಟ್ ಲೋಕದಲ್ಲಿ ಈ ಮಾತು ಸರ್ವೇ ಸಾಮಾನ್ಯ. ವಿಂಡೀಸ್​ನ ಆರಂಭಿಕ ಆಟಗಾರರಿಬ್ಬರು ಇಂದು ಹೊಸದೊಂದು ದಾಖಲೆ ಬರೆದಿದ್ದಾರೆ.

ಐರ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವಿನ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ವಿಂಡೀಸ್​ನ ಆರಂಭಿಕ ಬ್ಯಾಟ್ಸ್​ಮನ್​ಗಳಾದ ಜಾನ್ ಕ್ಯಾಂಪ್​ಬೆಲ್(179)​​ ಹಾಗೂ ಶೈ ಹೋಪ್(170)​ ಮೊದಲ ವಿಕೆಟ್​ಗೆ 365 ರನ್ ಬಾರಿಸಿ ದಾಖಲೆ ಬರೆದಿದ್ದಾರೆ.

ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಇಮಾಮ್ ಉಲ್ ಹಕ್ ಹಾಗೂ ಫಕರ್ ಜಮಾನ್ 304 ರನ್​ಗಳ ದಾಖಲೆ ಇಂದು ಪತನವಾಗಿದೆ.

ನೂರೈವತ್ತರ ಗಡಿ ದಾಟಿದ ಆರಂಭಿಕರು:

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕರಿಬ್ಬರೂ ನೂರೈವತ್ತರ ಗಡಿ ದಾಟಿದ ಮೊದಲ ದೃಷ್ಟಾಂತವಿದು. ಜೊತೆಗೆ ವಿಂಡೀಸ್ ಕ್ರಿಕೆಟ್​​ನಲ್ಲಿ ಇದೇ ಮೊದಲ ಬಾರಿಗೆ ಓಪನರ್ಸ್​ಗಳು 150ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ದಾಖಲೆಯ ಜೊತೆಯಾಟದಿಂದ ವಿಂಡೀಸ್ ನಿಗದಿತ 50 ಓವರ್​ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 381 ರನ್ ಬಾರಿಸಿತ್ತು. ಬೃಹತ್ ಮೊತ್ತ ಬೆನ್ನತ್ತಿದ ಐರ್ಲೆಂಡ್ 34.4 ಓವರ್​ನಲ್ಲಿ 185 ರನ್ನಿಗೆ ಸರ್ವಪತನವಾಯಿತು. ಈ ಮೂಲಕ ವಿಂಡೀಸ್ 196 ರನ್​ಗಳ ಅರ್ಹ ಜಯ ಸಾಧಿಸಿತು.

Intro:Body:

ಮೊದಲ ವಿಕೆಟ್​​ಗೆ ವಿಶ್ವದಾಖಲೆಯ ಜೊತೆಯಾಟ... ಕೆರೆಬಿಯನ್ನರಿಂದ ಏಕದಿನ ಕ್ರಿಕೆಟ್​​ನಲ್ಲಿ ನೂತನ ರೆಕಾರ್ಡ್​​

ಡಬ್ಲಿನ್: ಇಂದಲ್ಲ ನಾಳೆ ದಾಖಲೆಗಳು ಬ್ರೇಕ್ ಆಗಲೇಬೇಕು. ಕ್ರಿಕೆಟ್ ಲೋಕದಲ್ಲಿ ಈ ಮಾತು ಸರ್ವೇ ಸಾಮಾನ್ಯ. ವಿಂಡೀಸ್​ನ ಆರಂಭಿಕ ಆಟಗಾರರಿಬ್ಬರು ಇಂದು ಹೊಸದೊಂದು ದಾಖಲೆ ಬರೆದಿದ್ದಾರೆ.

ಐರ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವಿನ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ವಿಂಡೀಸ್​ನ ಆರಂಭಿಕ ಬ್ಯಾಟ್ಸ್​ಮನ್​ಗಳಾದ ಜಾನ್ ಕ್ಯಾಂಪ್​ಬೆಲ್(179)​​ ಹಾಗೂ ಶೈ ಹೋಪ್(170)​ ಮೊದಲ ವಿಕೆಟ್​ಗೆ 365 ರನ್ ಬಾರಿಸಿ ದಾಖಲೆ ಬರೆದಿದ್ದಾರೆ.

ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಇಮಾಮ್ ಉಲ್ ಹಕ್ ಹಾಗೂ ಫಕರ್ ಜಮಾನ್ 304 ರನ್​ಗಳ ದಾಖಲೆ ಇಂದು ಪತನವಾಗಿದೆ.

ನೂರೈವತ್ತರ ಗಡಿ ದಾಟಿದ ಅರಂಭಿಕರು:

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕರಿಬ್ಬರೂ ನೂರೈವತ್ತರ ಗಡಿ ದಾಟಿದ ಮೊದಲ ದೃಷ್ಟಾಂತವಿದು. ಜೊತೆಗೆ ವಿಂಡೀಸ್ ಕ್ರಿಕೆಟ್​​ನಲ್ಲಿ ಇದೇ ಮೊದಲ ಬಾರಿಗೆ ಓಪನರ್ಸ್​ಗಳು 150ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ದಾಖಲೆಯ ಜೊತೆಯಾಟದಿಂದ ವಿಂಡೀಸ್ ನಿಗದಿತ 50 ಓವರ್​ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 381 ರನ್ ಬಾರಿಸಿತ್ತು. ಬೃಹತ್ ಮೊತ್ತ ಬೆನ್ನತ್ತಿದ ಐರ್ಲೆಂಡ್ 34.4 ಓವರ್​ನಲ್ಲಿ 185 ರನ್ನಿಗೆ ಸರ್ವಪತನವಾಯಿತು. ಈ ಮೂಲಕ ವಿಂಡೀಸ್ 196 ರನ್​ಗಳ ಅರ್ಹ ಜಯ ಸಾಧಿಸಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.