ETV Bharat / briefs

ಇಂದಿರಾ ಕ್ಯಾಂಟಿನ್ ಕಟ್ಟಡದಲ್ಲಿ ಬಿರುಕು: ಗ್ರಾಹಕರಿಗೆ ಭೀತಿ

author img

By

Published : Jun 23, 2019, 11:02 PM IST

ವೈಟ್​ ಫೀಲ್ಡ್​ ಬಳಿ ಇರುವ ಹೂಡಿಯಲ್ಲಿ ಇಂದಿರಾ ಕ್ಯಾಂಟಿನ್​ನ ಗೋಡೆ ಬಿರುಕು ಬಿಟ್ಟಿದ್ದು, ಗ್ರಾಹಕರು ಇಲ್ಲಿಗೆ ಬರಲು ಯೋಚಿಸುವಂತಾಗಿದೆ.

ಕುಸಿತದ ಭೀತಿಯಲ್ಲಿರುವ ಇಂದಿರಾ ಕ್ಯಾಂಟಿನ್​

ಬೆಂಗಳೂರು: ವೈಟ್​ ಫೀಲ್ಡ್​ ಬಳಿಯ ಹೂಡಿಯಲ್ಲಿ ಇಂದಿರಾ ಕ್ಯಾಂಟಿನ್​ನ ಗೋಡೆ ಬಿರುಕು ಬಿಟ್ಟಿದ್ದು, ಗ್ರಾಹಕರು ಇಲ್ಲಿಗೆ ಬರಲು ಯೋಚಿಸುವಂತಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಈ ಇಂದಿರಾ ಕ್ಯಾಂಟಿನ್​ ಗೋಡೆ ಕುಸಿಯುವ ಭೀತಿಯಲ್ಲಿ ಇಲ್ಲಿನ ಜನರಿದ್ದಾರೆ.

ಕುಸಿತದ ಭೀತಿಯಲ್ಲಿರುವ ಇಂದಿರಾ ಕ್ಯಾಂಟಿನ್​

ಹೂಡಿಯ ಇಂದಿರಾ ಕ್ಯಾಂಟಿನ್​ನಲ್ಲಿ ಶುಚಿತ್ವದ ಪಾಲನೆ ಇಲ್ಲ. ಕಟ್ಟಡವನ್ನು ತರಾತುರಿಯಲ್ಲಿ ಕಾಮಗಾರಿ ಮುಗಿಸಿರುವುದರಿಂದ ಕ್ಯಾಂಟಿನ್ ಬೀಳುವ ಹಂತ ತಲುಪಿದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು.

Intro:ಬಿರುಕು ಬಿಟ್ಟ ಇಂದಿರಾ ಕ್ಯಾಂಟಿನ್ ಕಟ್ಟಡ , ಗ್ರಾಹಕರಲ್ಲಿ ಭಯದ ಭೀತಿ.


ಹಿಂದಿನ ಕಾಂಗ್ರೆಸ್ ಸರ್ಕಾರ ಬಡ ಮಧ್ಯಮ ವರ್ಗದವರು ಹಸಿವಿನಿಂದ ಇರಬಾರದೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಿಸಿ ಕಡಿಮೆ ದರದಲ್ಲಿ ಆಹಾರ ಒದಗಿದಿಸಿದ್ದು ಆಯ್ತು ಆದರೆ ಕಳಪೆ ಆಹಾರ, ಹಲ್ಲಿ, ಇಲಿ, ಜಿರಳೆ ಆಹಾರದಲ್ಲಿ ಬಿದ್ದಂತಹ ಘಟನೆಗಳು ಸಾಕಷ್ಟು ಸುದ್ದಿಯಾಗಿದ್ದಂತೂ ನಿಜ. ಆದರೇ ಇಲ್ಲೋಂದು ಕ್ಯಾಂಟೀನ್ ಸರಿಯಾದ ನಿರ್ವಹಣೆವಿಲ್ಲದೆ ಗೋಡೆ ಬಿರುಕು ಬಿಟ್ಟು ಕುಸಿಯುವ ಭೀತಿಯಲ್ಲಿದೆ.

ಗೋಡೆಯಲ್ಲಿ ಬಿರುಕು ಬಿಟ್ಟು, ಹೀಗೆ ಬೀಳುವ ಹಂತ ತಲುಪಿರುವ ಇಂದಿರಾ ಕ್ಯಾಂಟಿನ್ ಇರುವುದು ವೈಟ್ ಫೀಲ್ಡ್ ನ ಹೂಡಿಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ ಗೋಡೆ ಬಿರುಕು ಬಿಟ್ಟ ಪರಿಣಾಮ ಸಾರ್ವಜನಿಕರು ಕ್ಯಾಂಟಿನಿಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕ್ಯಾಂಟಿನ್ ಊಟದಲ್ಲಿ ಶುಚಿತ್ವವಿಲ್ಲ, ಮಳೆಗಾಲ ಆರಂಭವಾದರಿಂದ ಯಾವಾಗ ಬೇಕಾದರೂ ಕ್ಯಾಂಟಿನ್ ಬೀಳುವ ಅಪಾಯದಲ್ಲಿದೆ. ಕಟ್ಟಡವನ್ನು ತರಾತುರಿಯಲ್ಲಿ ಕಾಮಗಾರಿ ಮುಗಿಸಿರುವುದರಿಂದ ಕ್ಯಾಂಟಿನ್ ಬೀಳುವ ಹಂತ ತಲುಪಿದೆ ಅನ್ನುತ್ತಾರೆ ಅಲ್ಲಿನ ಸ್ಥಳೀಯರು.






Body:ಒಂದು ಕಡೆ ಕಳಪೆ ಆಹಾರ , ಮತ್ತೊಂದು ಕಡೆ ಕಳಪೆ ಕಾಮಗಾರಿ , ಪ್ರಾರಂಭದ ದಿನಗಳಲ್ಲಿ ಇದ್ದ ಗುಣಮಟ್ಟ ಶುಚಿತ್ವ ಈಗ ಇಲ್ಲ. ಅಧಿಕಾರಿಗಳ ಬೇಜಾಬ್ದಾರಿತನದಿಂದ ಇಂದು ಕ್ಯಾಂಟಿನ್ ಬೀಳುವ ಹಂತ ತಲುಪಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು, ಅಪಾಯವನ್ನು ತಪ್ಪಿಸುವ ಮಾರ್ಗ ಹಿಡಿಯಬೇಕಾಗಿದೆ.Conclusion:ತರತುರಿಯಲ್ಲಿ ನಿರ್ಮಾಣವಾದ ಸುಮಾರು ಕ್ಯಾಂಟಿನ್ ಗಳು ಇಂದು ಅಪಾಯದ ಹಂತದಲ್ಲಿವೆ. ಇನ್ನೂ ಸಮಯವೇನೂ ಮಿಂಚಿಲ್ಲ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಅಪಾಯವನ್ನು ತಪ್ಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಧರ್ಮರಾಜು ಎಂ ಕೆಆರ್ ಪುರ.


ಬೈಟ್1: ವಿಜಯ್ ಕುಮಾರ್, ಸ್ಥಳೀಯ.

ಬೈಟ್2: ಹರೀಶ್,ಸ್ಥಳೀಯ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.