ETV Bharat / briefs

ಇನ್ನೂ 2 ವಾರ ಲಾಕ್​ಡೌನ್​ ವಿಸ್ತರಿಸಿ: ಸರ್ಕಾರಕ್ಕೆ ಐಐಎಸ್​​​​​​ಸಿ ತಜ್ಞರ ಸಲಹೆ

author img

By

Published : May 6, 2021, 8:05 PM IST

ಬೆಂಗಳೂರಿನಲ್ಲಿ ಮಾತ್ರ 23,106 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 4,87,288 ಮತ್ತು ರಾಜಧಾನಿಯಲ್ಲಿ 3,13,314 ಸಕ್ರಿಯ ಪ್ರಕರಣಗಳನ್ನು ದಾಖಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

Indian Institute of Science experts lockdown reports
Indian Institute of Science experts lockdown reports

ಬೆಂಗಳೂರು: ರಾಜ್ಯದ ಕೋವಿಡ್ ಅಂಕಿ - ಅಂಶಗಳು ಹೊಸ ಗರಿಷ್ಠ ಮಟ್ಟವನ್ನು ತಲುಪಿದ್ದು , ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರು ಮೇ ಮಧ್ಯದ ವೇಳೆಗೆ ಭಾರತದಲ್ಲಿ ದಿನವೊಂದಕ್ಕೆ ಐದು ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಬಹುದು ಎಂದು ಮುನ್ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ನಿನ್ನೆ 50,112 ಪ್ರಕರಣಗಳು ದಾಖಲಾಗಿದ್ದು ಪೊಸಿಟಿವಿಟಿ ಪ್ರಮಾಣ ಹೊಸ ಗರಿಷ್ಠ ಮಟ್ಟವಾದ ಶೇ 32ಕ್ಕೆ ಮುಟ್ಟಿದ್ದು, ಮೊದಲ ಬಾರಿಗೆ ಅರ್ಧ ಲಕ್ಷವನ್ನು ದಾಟಿದೆ ಎಂದು ಕೋವಿಡ್ ಲಾಕ್ ಡೌನ್ ಸಂಬಂಧ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರ 23,106 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ 4,87,288 ಮತ್ತು ರಾಜಧಾನಿಯಲ್ಲಿ 3,13,314 ಸಕ್ರಿಯ ಪ್ರಕರಣಗಳನ್ನು ದಾಖಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಟಾಟಾ ವಿಜ್ಞಾನ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ, ಐಐಎಸ್​​​​ಸಿ ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸಸ್ ವಿಭಾಗದ ಮುಖ್ಯಸ್ಥ ಪ್ರೊ. ಶಶಿಕುಮಾರ್ ಗಣೇಶನ್, ಶ್ರೇಣೀಕೃತ ಅನ್ಲಾಕ್ ಪ್ರಕ್ರಿಯೆ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ. ಲಾಕ್ ಡೌನ್ ಸನ್ನಿವೇಶದಲ್ಲಿ ಯಾವುದೇ ಗರಿಷ್ಠ ಪೊಸಿಟಿವಿಟಿ ಮಟ್ಟವನ್ನು ಗಮನಿಸಲಾಗುವುದಿಲ್ಲ. ಅನ್ಲಾಕ್ ಮಾಡುವ ಮೊದಲು ಸ್ಥಳೀಯ ಪೊಸಿಟಿವಿಟಿ ಅಂಕಿ - ಅಂಶಗಳನ್ನು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಪ್ರಕರಣಗಳ ಸಂಖ್ಯೆಯು ಲಾಕ್​​ಡೌನ್​​ ನಂತರ ಹೆಚ್ಚಲು ಪಾರಂಭವಾಗುತ್ತದೆ, ಕಟ್ಟುನಿಟ್ಟಾದ ಶ್ರೇಣೀಕೃತ ಅನ್ಲಾಕ್ ಪ್ರಕ್ರಿಯೆಯ ಅಗತ್ಯತೆ ಸೂಚಿಸುತ್ತದೆ. ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಸ್ತುತ ಲಾಕ್‌ಡೌನ್ ಇನ್ನೂ ಎರಡು ವಾರಗಳವರೆಗೆ ವಿಸ್ತರಿಸುವಂತೆ ಪ್ರೊಫೆಸರ್ ಶಶಿಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಲಾಕ್ ಡೌನ್ ಇಲ್ಲದ ಸನ್ನಿವೇಶದಲ್ಲಿ ಪಾಸಿಟಿವ್ ಪ್ರಕರಣಗಳು ಮೇ 30ಕ್ಕೆ 1,85,348 ಮುಟ್ಟಬಹುದು ಎಂದು ವರದಿ ಸೂಚಿಸುತ್ತದೆ. ಲಾಕ್ ಡೌನ್ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಅಂದಾಜು ಮೇ 30 ಕ್ಕೆ 77,552 ಪ್ರಕರಣಗಳನ್ನು ತಲುಪಬಹುದು. ಪ್ರಸ್ತುತ ಮುನ್ಸೂಚನಾ ಮಾದರಿಯು ಜೂನ್ 10 ರವರೆಗೆ ಮಾತ್ರ ಅನ್ವಯವಾಗುತ್ತಿದೆ. ಆ ದಿನಾಂಕದ ನಂತರದ ಪ್ರಕರಣಗಳ ಬಗ್ಗೆ ನಾವು ಯಾವುದೇ ಅಂದಾಜುಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.


ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಗಿರಿಧರ್ ಬಾಬು ಮೇ ಮಧ್ಯದ ವೇಳೆಗೆ ಬೆಂಗಳೂರಿನಲ್ಲಿ 3.75 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ದಾಖಲಾಗಬಹುದು (ಕರ್ನಾಟಕದಲ್ಲಿ 6,26,020) ಎಂದು ಅಂದಾಜಿಸುತ್ತಾರೆ. ಕಡಿಮೆ ಪರೀಕ್ಷೆ ಪ್ರಮಾಣದಲ್ಲಿ ಎರಡನೇ ಅಲೆಯ ಗರಿಷ್ಠ ಮಟ್ಟವನ್ನು ಅಂದಾಜಿಸುವುದು ನಿಖರವಾಗಿ ಕಷ್ಟ ಸಾಧ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.