ETV Bharat / briefs

ವಿಶ್ವಕಪ್​ಗೆ ಆಯ್ಕೆಯಾದ ಬೆನ್ನಲ್ಲೇ ಬರ್ತಡೇ ಸಂಭ್ರಮದಲ್ಲಿ ಕನ್ನಡಿಗ ರಾಹುಲ್​

author img

By

Published : Apr 18, 2019, 6:07 PM IST

ಇಂದು ಕನ್ನಡಿಗ ಕೆಎಲ್​ ರಾಹುಲ್​ ತಮ್ಮ 27 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಅವರ ಅತ್ಮೀಯ ಗೆಳೆಯನಾದ ಹಾರ್ದಿಕ್​ ಪಾಂಡ್ಯ ವಿಶ್​ ಮಾಡಿದ್ದು, ಈವರ್ಷವನ್ನು ತಮ್ಮ ವರ್ಷವನ್ನಾಗಿ ಮಾಡಿಕೊಳ್ಳೋಣ ಎಂದಿದ್ದಾರೆ.

kl

ಮುಂಬೈ: ವಿಶ್ವಕಪ್​ಗೆ ಆಯ್ಕೆಯಾಗಿರುವ ಏಕೈಕ ಕನ್ನಡಿಗ ಕೆಎಲ್ ​ರಾಹುಲ್​ಗೆ ಇಂದು 27ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

12ನೇ ಆವೃತ್ತಿಯಲ್ಲಿ ಪಂಜಾಬ್​ ಪರ ಅಬ್ಬರಿಸುತ್ತಿರುವ ಕೆಎಲ್​ ರಾಹುಲ್​ 2019 ರ ವಿಶ್ವಕಪ್​ಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಆಟಗಾರನಾಗಿದ್ದು, ಈ ಶುಭಸುದ್ದಿ ಹೊರಬಿದ್ದ ಬೆನ್ನಲ್ಲೇ ಇಂದು 27 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ರಾಹುಲ್​ ಹುಟ್ಟುಹಬ್ಬಕ್ಕೆ ಟೀಮ್​ ಇಂಡಿಯಾದ ಜೊತೆಗಾರ ಹಾರ್ದಿಕ್​ ಪಾಂಡ್ಯ ಸಹಿತ ಕ್ರಿಸ್​ ಗೇಲ್​, ಶಿಖರ್​ ಧವನ್​, ಅಜಿಂಕ್ಯಾ ರಹಾನೆ ಸೇರಿದಂತೆ ಹಲವಾರು ಕ್ರಿಕೆಟಿಗರು ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಇನ್ನು ರಾಹುಲ್​ ಜೊತೆ ಕಾಫಿ ವಿತ್​ ಕರುಣ್​ ಕಾರ್ಯಕ್ರಮಕ್ಕೆ ಭಾಗವಹಿಸಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದಕ್ಕೀಡಾಗಿದ್ದ ಹಾರ್ದಿಕ್​ ಪಾಂಡ್ಯ 'ಏನೇ ಆದರೂ ನನ್ನ ಜೀವನದ ಸೋದರನನ್ನು ಅತೀವ ಇಷ್ಟಪಡುವುದಾಗಿ ತಿಳಿಸಿದ್ದು, ಈ ವರ್ಷವನ್ನು ನಮ್ಮ ವರ್ಷವನ್ನಾಗಿ ಮಾಡೋಣ ಎಂದು ಬರೆದುಕೊಂಡು, ಶುಭಾಶಯ ಕೋರಿದ್ದಾರೆ.

ಇನ್ನು ಪಂಜಾಬ್​ ತಂಡ ಒಡತಿ ಪ್ರೀತಿ ಜಿಂಟಾ ನೀವು ನಮ್ಮ ತಂಡದಲ್ಲಿರುವುದು ನಮಗೆ ತುಂಬಾ ಖುಷಿಯಾಗಿದ್ದು, ನಿಮ್ಮ ವಿಶ್ವಕಪ್​ ಪ್ರಯಾಣ ಉತ್ತಮವಾಗಿರಲಿ ಎಂದಿದ್ದಾರೆ. ಕ್ರಿಸ್​ಗೇಲ್​,ಅಗರ್​ವಾಲ್​ ಸೇರಿದಂತೆ ಇತರೆ ಆಟಗಾರರು ರಾಹುಲ್​ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

Intro:Body:

ವಿಶ್ವಕಪ್​ಗೆ ಆಯ್ಕೆಯಾದ ಬೆನ್ನಲ್ಲೇ ಬರ್ತಡೇ ಸಂಭ್ರಮದಲ್ಲಿ ಕನ್ನಡಿಗ ರಾಹುಲ್​



ಮುಂಬೈ: ವಿಶ್ವಕಪ್​ಗೆ ಆಯ್ಕೆಯಾಗಿರುವ ಏಕೈಕ ಕನ್ನಡಿಗ ಕೆಎಲ್ ​ರಾಹುಲ್​ಗೆ ಇಂದು 27ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.



12ನೇ ಆವೃತ್ತಿಯಲ್ಲಿ ಪಂಜಾಬ್​ ಪರ ಅಬ್ಬರಿಸುತ್ತಿರುವ ಕೆಎಲ್​ ರಾಹುಲ್​ 2019 ರ ವಿಶ್ವಕಪ್​ಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಆಟಗಾರನಾಗಿದ್ದು, ಈ ಶುಭಸುದ್ದಿ ಹೊರಬಿದ್ದ ಬೆನ್ನಲ್ಲೇ ಇಂದು 27 ನೇ ವಸಂತಕ್ಕೆ ಕಾಳಿಟ್ಟಿದ್ದಾರೆ.



ರಾಹುಲ್​ ಹುಟ್ಟುಹಬ್ಬಕ್ಕೆ ಟೀಮ್​ ಇಂಡಿಯಾದ ಜೊತೆಗಾರ ಹಾರ್ದಿಕ್​ ಪಾಂಡ್ಯ ಸಹಿತ ಕ್ರಿಸ್​ ಗೇಲ್​,ಶಿಖರ್​ ಧವನ್​,ಅಜಿಂಕ್ಯಾ ರಹಾನೆ ಸೇರಿದಂತೆ ಹಲವಾರು ಕ್ರಿಕೆಟಿಗರು ಹುಟ್ಟುಹಬ್ಬದ ಶುಭ ಕೋರಿದ್ದಾರೆ.



ಇನ್ನು ರಾಹುಲ್​ಜೊತೆ ಕಾಫಿ ವಿತ್​ ಕರುಣ್​ ಕಾರ್ಯಕ್ರಮಕ್ಕೆ ಭಾಗವಹಿಸಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದಕ್ಕೀಡಾಗಿದ್ದ ಹಾರ್ದಿಕ್​ ಪಾಂಡ್ಯ 'ಏನೇ ಆದರೂ ನನ್ನ ಜೀವನದ ಸೋದರನನ್ನು ಅತೀವ ಇಷ್ಟಪಡುವುದಾಗಿ ತಿಳಿಸಿದ್ದು, ಈ ವರ್ಷವನ್ನು ನಮ್ಮ ವರ್ಷವನ್ನಾಗಿ ಮಾಡೋಣ ಎಂದು ಬರೆದುಕೊಂಡು, ಶುಭಾಶಯ ಕೋರಿದ್ದಾರೆ.



ಇನ್ನು ಪಂಜಾಬ್​ ತಂಡ ಒಡತಿ ಪ್ರೀತಿ ಜಿಂಟಾ ನೀವು ನಮ್ಮ ತಂಡದಲ್ಲಿರುವುದು ನಮಗೆ ತುಂಬಾ ಖುಷಿಯಾಗಿದ್ದು, ನಿಮ್ಮ ವಿಶ್ವಕಪ್​ ಪ್ರಯಾಣ ಉತ್ತಮವಾಗಿರಲಿ ಎಂದಿದ್ದಾರೆ. ಕ್ರಿಸ್​ಗೇಲ್​,ಅಗರ್​ವಾಲ್​ ಸೇರಿದಂತೆ ಇತರೆ ಆಟಗಾರರು ರಾಹುಲ್​ಗೆ ಹುಟ್ಟು ಹಬ್ಬದ ಶುಭಶಯ ತಿಳಿಸಿದ್ದಾರೆ.

 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.