ETV Bharat / briefs

ತನ್ನ ಆರು ದಿನದ ಮಗುವನ್ನೇ ಮಾರಿದ ತಂದೆ.. ಪೊಲೀಸರಿಂದ ಹಸುಳೆಯ ರಕ್ಷಣೆ

author img

By

Published : Jun 19, 2021, 10:19 PM IST

ತಂದೆಯೊಬ್ಬ ತನ್ನ ನವಜಾತ ಗಂಡು ಮಗುವನ್ನು 10,000 ರೂ.ಗೆ ಮಾರಾಟ ಮಾಡಿದ್ದು, ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.

child
child

ಭುವನೇಶ್ವರ (ಒಡಿಶಾ): ನವಜಾತ ಗಂಡು ಮಗುವೊಂದನ್ನು ತಂದೆ 10,000 ರೂ.ಗೆ ಮಾರಾಟ ಮಾಡಿದ್ದು, ಕಮಿಷನರೇಟ್ ಪೊಲೀಸರು ಮತ್ತು ಚೈಲ್ಡ್​ ಲೈನ್ ಅಧಿಕಾರಿಗಳು ಶನಿವಾರ ಮಗುವನ್ನು ರಕ್ಷಿಸಿದ್ದಾರೆ.

ಆರು ದಿನದ ನವಜಾತ ಶಿಶುವನ್ನು ಮಾಲಿ ಸಾಹಿ ಪ್ರದೇಶದಿಂದ ರಕ್ಷಿಸಿದ ನಂತರ ದತ್ತು ಕೇಂದ್ರದಲ್ಲಿ ಇಡಲಾಗುವುದು ಎಂದು ಚೈಲ್ಡ್​ ಲೈನ್ ಅಧಿಕಾರಿಗಳು ಹೇಳಿದ್ದಾರೆ. ಸ್ಥಳೀಯ ಪೊಲೀಸರ ಸಹಾಯದಿಂದ ಚೈಲ್ಡ್​ ಲೈನ್ ಅಧಿಕಾರಿಗಳು ನಗರದ ಮಾಲಿಸಾಹಿ ಪ್ರದೇಶದ ಬಳಿಯ ಮಹಿಳೆಯ ಮನೆಯಿಂದ 10 ದಿನಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದ್ದು, ಗಂಡು ಮಗುವನ್ನು ಚೈಲ್ಡ್​ ಲೈನ್​ಗೆ ಹಸ್ತಾಂತರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.