ETV Bharat / briefs

ಕೊಲೆ ಯತ್ನ ಆರೋಪಿಗೆ ಕೊರೊನಾ: ಡಿಜೆ ಹಳ್ಳಿಯ 20 ಪೊಲೀಸರು ಕ್ವಾರಂಟೈನ್​​​​​​

author img

By

Published : Jun 23, 2020, 3:50 PM IST

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದ ಆರೋಪಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಠಾಣೆಯ 20 ಜನ ಸಿಬ್ಬಂದಿಯನ್ನು ನಿಗಾದಲ್ಲಿಡಲಾಗಿದೆ.

DJ halli police station accused tested corona
DJ halli police station accused tested corona

ಬೆಂಗಳೂರು: ಖಾಕಿಯನ್ನೂ ಕೊರೊನಾ ಆವರಿಸುತ್ತಿದ್ದು, ಭಯದ ವಾತಾವರಣದಲ್ಲಿ ಪೊಲೀಸರು ಕೆಲಸ ಮಾಡಬೇಕಾದ ಪರಿಸ್ಥಿತಿ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಗಿದೆ.

ಸದ್ಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದರು. ಆರೋಪಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಇದರಿಂದ ಆರೋಪಿಯನ್ನು ತನಿಖೆ ಮಾಡಿದ್ದ 20‌ ಮಂದಿ ಪೊಲೀಸರನ್ನ ಕ್ವಾರಂಟೈನ್​​ ಮಾಡಲಾಗಿದೆ. ಹಾಗೆಯೇ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್‌ ಮಾಡಿ ಸ್ಯಾನಿಟೈಸ್​​ ಮಾಡಿದ್ದು, ಸದ್ಯ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.