ETV Bharat / briefs

ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುವೆ: ಖೂಬಾ ವಿಶ್ವಾಸ

author img

By

Published : May 23, 2019, 5:50 AM IST

ಬೀದರ್ ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಅಂತರದಿಂದ ನಾನು ಗೆದ್ದು ಬರುವ ವಿಶ್ವಾಸವನ್ನು ಮತದಾರರು ನನಗೆ ತುಂಬಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಜನರ ಆಶಯ ಈಡೇರಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ಬಿಜೆಪಿನಾಯಕ ಭಗವಂತ ಖೂಬಾ

ಬೀದರ್: ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬೀದರ್ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಿಂತ ದೊಡ್ಡ ಮಟ್ಟದ ಅಂತರದಲ್ಲಿ ಗೆಲ್ಲುವುದಾಗಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ
ಎಂಟು ತಿಂಗಳಿನಿಂದ ದೇಶದಲ್ಲಿ ಮೋದಿ ಅವರನ್ನು ಪ್ರಧಾನಿಯಾಗಿ ಮತ್ತೊಮ್ಮೆ ನೋಡಬೇಕು ಎಂಬ ಸಂಕಲ್ಪ ಮತದಾರರು ಮಾಡಿಕೊಂಡಿದ್ದಾರೆ. ಜಾತಿ, ಮತ, ಪಂಥ, ಧರ್ಮ, ಹಣ ಹೀಗೆ ಎಲ್ಲವನ್ನು ಮೀರಿ ನಡೆದ ಚುನಾವಣೆ ಇದಾಗಿದೆ. ಈ ನಿಟ್ಟಿನಲ್ಲಿ ಚುನಾವಣೆ ಪೂರ್ವ ಸಮೀಕ್ಷಾ ಫಲಿತಾಂಶಗಳು ಕೂಡ ಭಾಗಶಃ ಸತ್ಯದ ಹತ್ತಿರದಲ್ಲಿದ್ದಂತಿವೆ. ಇದೆಲ್ಲವನ್ನು ನೋಡಿದರೆ ಅಂದಾಜು 2 ಲಕ್ಷ ಅಂತರದ ಜಯ ಬಿಜೆಪಿಗೆ ಆಗಲಿದೆ ಎಂದು ಭಗವಂತ ಖೂಬಾ ಭರವಸೆ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರಲ್ಲದೆ ಹಲವಾರು ಕಡೆಯಿಂದ ಮತದಾರರು ಖುದ್ದಾಗಿ ಫೋನ್ ಮಾಡಿ ನನ್ನ ಗೆಲುವಿನ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಇಂದಿನ ಫಲಿತಾಂಶ ನಮ್ಮ ಪಾಲಿಗೆ ಜಯಮಾಲೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:ದೊಡ್ಡ ಅಂತರದ ಗೆಲುವು ಬಿಜೆಪಿಯದ್ದಾಗಲಿದೆ ಭಗವಂತ ಖೂಬಾ ವಿಶ್ವಾಸ...!

ಬೀದರ್:
ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬೀದರ್ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗಿಂತ ದೊಡ್ಡ ಮಟ್ಟದ ಅಂತರದಲ್ಲಿ ಗೆಲ್ಲುವುದಾಗಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ದೇಶದಲ್ಲಿ ಮೋದಿ ಅವರನ್ನು ಪ್ರಧಾನಿಯಾಗಿ ಮತ್ತೊಮ್ಮೆ ನೋಡಬೇಕು ಎಂಬ ಸಂಕಲ್ಪ ಮತದಾರರು ಮಾಡಿಕೊಂಡಿದ್ದರು. ಅಲ್ಲದೆ ಜಾತಿ, ಮತ, ಪಂಥ, ಧರ್ಮ, ಹಣ ಹೀಗೆ ಎಲ್ಲವನ್ನು ಮೀರಿ ನಡೆದ ಚುನಾವಣೆ ಇದಾಗಿದೆ. ಈ ನಿಟ್ಟನಲ್ಲಿ ಚುನಾವಣೆ ಪೂರ್ವ ಸಮಿಕ್ಷಾ ಫಲಿತಾಂಶಗಳು ಕೂಡ ಭಾಗಶಃ ಸತ್ಯದ ಹತ್ತಿರದಲ್ಲಿದ್ದಂತಿದ್ದು ಇದೆಲ್ಲವನ್ನು ನೋಡಿದ್ರೆ ಅಂದಾಜು ಎರಡು ಲಕ್ಷ ಅಂತರದ ಜಯ ಬಿಜೆಪಿಗೆ ಆಗಲಿದೆ ಎಂದು ಭಗವಂತ ಖೂಬಾ ಭರವಸೆ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರಲ್ಲದೆ ಹಲವಾರು ಕಡೆಯಿಂದ ಮತದಾರರು ಖುದ್ದಾಗಿ ಫೋನ್ ಮೇಸೆಜ್ ಮಾಡಿ ನನ್ನ ಗೆಲುವಿನ ಭರವಸೆ ವ್ಯಕ್ತಪಡಿಸಿರುವುದು ಇಂದಿನ ಫಲಿತಾಂಶ ನಮ್ಮ ಪಾಲಿಗೆ ಜಯಮಾಲೆ ಹಾಕಲಿದೆ ಎಂದು ಹೇಳಿದರು.Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.