ಸಂಸ್ಕೃತ ವಿವಿಗೆ ರಾಜೀವ್ ಗಾಂಧಿ ಬದಲು ಶಂಕರಾಚಾರ್ಯರ ಹೆಸರಿಡುವುದು ಸೂಕ್ತ: ಕರಂದ್ಲಾಜೆ

author img

By

Published : Sep 19, 2021, 3:48 AM IST

Updated : Sep 19, 2021, 12:31 PM IST

ಕೇಂದ್ರ ಕೃಷಿ ಮತ್ತು ರೈತ ಖಾತೆ ಸಚಿವೆ ಶೋಭಾ ಕರಂದ್ಲಾಜೆ

ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್‍ಗೆ ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರು ಇಡಬೇಕು ಎನ್ನುವ ಬಗ್ಗೆ ಮನವಿ ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಈ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾದರೇ ಸಾಂಸ್ಕೃತಿಕ ಇಲಾಖೆಯಲ್ಲಿ ಪರಿಶೀಲನೆ ಒತ್ತಡ ಹಾಕುತ್ತೆವೆ. ರಾಜೀವ್ ಗಾಂಧಿ ಹೆಸರಿಗೆ ಬದಲಾಗಿ ಶಂಕರಾಚಾರ್ಯ ಹೆಸರನ್ನು ಇಡುವುದು ಸೂಕ್ತ ಇದೆ ಎಂದು ಹೇಳಿದರು.

ಕಾರವಾರ: ದೇವಾಲಯಗಳು ಅಕ್ರಮವಾಗಿದ್ದರೆ ಒಡೆಯುವ ಮೊದಲು ಊರ ಜನರ ವಿಶ್ವಾಸಗಳಿಸಬೇಕು. ಜೊತೆಗೆ ಪರ್ಯಾಯ ವ್ಯವಸ್ಥೆಕೂಡ ಮಾಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅಂಕೋಲಾದ ಕೈಗಡಿಯಲ್ಲಿ ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು 2008ರ ದೇವಾಲಯ ಯಾವುದು ಇದೆ ಅದನ್ನು ಸಕ್ರಮ ಮಾಡಬಹುದು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಆದರೆ ಮೈಸೂರು ಘಟನೆ ಖಂಡನೀಯವಾಗಿದೆ. ಮೈಸೂರು ದೇವಾಲಯ ಚೋಳರ ಕಾಲದಾಗಿದ್ದು, ಸಕ್ರಮಗೊಳಿಸಲು ಪ್ರಕ್ರಿಯೆ ಮಾಡಬೇಕು 2008ರ ನಂತರ ಕಟ್ಟಿದ ದೇವಾಲಯಗಳ ಬಗ್ಗೆ ಪರಿಶೀಲಿಸಿ ಪುರಾತನ ದೇವಾಲಯಗಳನ್ನು ಉಳಿಸುವ ಮತ್ತು ಸಕ್ರಮಗೊಳಿಸುವ ಬಗ್ಗೆ ಪರಿಶೀಲಿಸಬೇಕು ಎಂದರು.

ಕೇಂದ್ರ ಕೃಷಿ ಮತ್ತು ರೈತ ಖಾತೆ ಸಚಿವೆ ಶೋಭಾ ಕರಂದ್ಲಾಜೆ

ಇನ್ನು ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕ್ಯಾಂಪಸ್‍ಗೆ ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಶಂಕರಾಚಾರ್ಯರ ಹೆಸರು ಇಡಬೇಕು ಎನ್ನುವ ಬಗ್ಗೆ ಮನವಿ ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಈ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾದರೇ ಸಾಂಸ್ಕೃತಿಕ ಇಲಾಖೆಯಲ್ಲಿ ಪರಿಶೀಲನೆ ಒತ್ತಡ ಹಾಕುತ್ತೆವೆ. ರಾಜೀವ್ ಗಾಂಧಿ ಹೆಸರಿಗೆ ಬದಲಾಗಿ ಶಂಕರಾಚಾರ್ಯ ಹೆಸರನ್ನು ಇಡುವುದು ಸೂಕ್ತ ಇದೆ ಎಂದು ಹೇಳಿದರು.

ಇದನ್ನು ಓದಿ:ದೇವಸ್ಥಾನ, ಮಸೀದಿ, ಚರ್ಚುಗಳ ರಕ್ಷಣೆ ನಮ್ಮ ಜವಾಬ್ದಾರಿ: ಸಚಿವೆ ಶೋಭಾ ಕರಂದ್ಲಾಜೆ

Last Updated :Sep 19, 2021, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.