ETV Bharat / briefs

ಕೋವಿಡ್ ನಿಯಮ ಉಲ್ಲಂಘನೆ: ಹಾವೇರಿ ಜಿಲ್ಲೆಯಲ್ಲಿ 50 ಪ್ರಕರಣ ದಾಖಲು

author img

By

Published : May 6, 2021, 9:20 PM IST

ಹಾವೇರಿ ನಗರ, ರಾಣೆಬೆನ್ನೂರು, ಹಲಗೇರಿ ಹಿರೇಕೆರೂರು ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಬಟ್ಟೆ ಅಂಗಡಿ, ಸ್ಟೇಷನರಿ, ಎಲೆಕ್ಟ್ರೀಕ್ ಸೇರಿದಂತೆ ವಿವಿಧ ಅಂಗಡಿಗಳು ಜನತಾ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ಮಾಡಿವೆ.

50 corona rules violation cases registered in Haveri
50 corona rules violation cases registered in Haveri

ಹಾವೇರಿ: ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಾದಾಗಿನಿಂದ ವಿವಿಧ ಪೊಲೀಸ್ ಠಾಣೆಗಳಲ್ಲಿ 50 ಕ್ಕೂ ಅಧಿಕ ಅಂಗಡಿಗಳ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.

ಅಲ್ಲದೆ, ಬುಧವಾರ ಒಂದೇ ದಿನ ಜಿಲ್ಲೆಯ ವಿವಿಧ 18 ಅಂಗಡಿಗಳ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಸರ್ಕಾರ ನಿಗದಿ ಮಾಡಿದ್ದ ವೇಳೆಯ ಉಲ್ಲಂಘನೆ ಮಾಡಿ. ಅವಧಿ ಮೀರಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಮೇಲೂ ಸಹ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದೆ.

ಹಾವೇರಿ ನಗರ, ರಾಣೆಬೆನ್ನೂರು, ಹಲಗೇರಿ ಹಿರೇಕೆರೂರು ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಬಟ್ಟೆ ಅಂಗಡಿ, ಸ್ಟೇಷನರಿ, ಎಲೆಕ್ಟ್ರೀಕ್ ಸೇರಿದಂತೆ ವಿವಿಧ ಅಂಗಡಿಗಳು ಜನತಾ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ಮಾಡಿವೆ.

ಅಲ್ಲದೇ ಕೆಲವು ಕಿರಾಣಿ ಮತ್ತು ತರಕಾರಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಮರೆತು ಮಾಸ್ಕ್ ಇಲ್ಲದೇ ವ್ಯಾಪಾರ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಹಾವೇರಿ ಪೊಲೀಸ್ ಇಲಾಖೆ ವರ್ತಕರ ಮೇಲೆ ಪ್ರಕರಣಗಳನ್ನ ದಾಖಲಿಸಿದೆ.

ಅಲ್ಲದೇ, ಎಲ್ಲ ಅಂಗಡಿಗಳಿಗೆ ಎಚ್ಚರಿಕೆ ನೀಡಿರುವ ಪೊಲೀಸ್ ಇಲಾಖೆ ಕೊರೊನಾ ನಿಯಮಗಳಂತೆ ವರ್ತಕರು ವ್ಯಾಪಾರ ಮಾಡಿ ಇಲ್ಲದಿದ್ದರೇ ತಮ್ಮ ಮೇಲೆ ಪ್ರಕರಣ ದಾಖಲಿಸಲಾಗುತ್ತೆ. ನಿಯಮಗಳ ಪಾಲನೆಯಲ್ಲಿ ಯಾವುದೇ ರಿಯಾಯತಿ ಇಲ್ಲ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.