ETV Bharat / bharat

ತನ್ನದು ಕೆಟ್ಟ ಮುಖ, ಕೂದಲು ಎಂದು ಭಾವಿಸಿ ಯುವಕ ಆತ್ಮಹತ್ಯೆ!

author img

By

Published : May 31, 2023, 8:06 PM IST

ತನ್ನದು ಕೆಟ್ಟ ಮುಖ ಹಾಗೂ ಕೆಟ್ಟ ಕೂದಲು ಎಂದು ಭಾವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ.

ತನ್ನದು ಕೆಟ್ಟ ಮುಖ, ಕೂದಲು ಎಂದು ಭಾವಿಸಿ ಯುವಕ ಆತ್ಮಹತ್ಯೆ!
Youth Commits Suicide in Nalanda of Bihar Because of His Face and Hair

ನಳಂದಾ (ಬಿಹಾರ): ಬಿಹಾರದ ನಳಂದಾ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಈ ಸಾವಿಗೆ ತನ್ನ ಕೆಟ್ಟ ಮುಖ ಹಾಗೂ ಕೆಟ್ಟ ಕೂದಲು ಕಾರಣ ಎಂದು ಸೂಸೈಡ್ ನೋಟ್​ ಬರೆದಿಟ್ಟಿದ್ದಾನೆ. 25 ವರ್ಷದ ವಿಜಯ್ ಕುಮಾರ್ ಎಂಬಾತನೇ ಸಾವಿಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ.

ಇಲ್ಲಿನ ಏಕಾಂಗರಸರೈ ಗ್ರಾಮದ ಏಕಾಂಗರ್ಡಿಹ್ ನಿವಾಸಿ ಜೈ ನಾರಾಯಣ ಲಾಲ್ ಎಂಬುವವರ ಪುತ್ರನಾಗಿರುವ ವಿಜಯ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಸಾವಿಗೆ ಮುನ್ನ ಡೆತ್​ನೋಟ್​ ಬರೆದಿಟ್ಟಿದ್ದು, ತನ್ನ ಕಠಿಣ ನಿರ್ಧಾರಕ್ಕೆ ಕೆಟ್ಟ ಮುಖ ಮತ್ತು ಕೂದಲು ಕಾರಣ ಎಂದು ಉಲ್ಲೇಖಿಸಿದ್ದಾನೆ ಎಂದು ತಿಳಿದು ಬಂದಿದೆ.

ತನ್ನ ಮುಖ ಹಾಗೂ ಕೂದಲಿನ ಬಗ್ಗೆ ವಿಜಯ್ ಕುಮಾರ್ ತೀವ್ರ ಅಸಮಾಧಾನ ಹೊಂದಿದ್ದ. ಮನೆಯಿಂದ ಹೊರಗೆ ಬಂದಾಗ ಜನ ತೆಗಳುತ್ತಿದ್ದರು. ಇದರಿಂದ ಮತ್ತಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ಹೇಳಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದ ವಿಜಯ್​ಗೆ ರಾಂಚಿಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು ಎಂದೂ ಮಾಹಿತಿ ನೀಡಿದ್ದಾರೆ.

ನಾವು ಮೂವರು ಸಹೋದರರಾಗಿದ್ದು, ವಿಜಯ್ ಕಿರಿಯ ಸಹೋದರ. ಇವನ ಆರೋಗ್ಯ ಯಾವಾಗಲೂ ಸರಿ ಇರಲಿಲ್ಲ. ರಾತ್ರಿ ಚೆನ್ನಾಗಿ ನಿದ್ರೆ ಸಹ ಮಾಡುತ್ತಿರಲಿಲ್ಲ. ಊಟ ಮುಗಿಸಿ ರಾತ್ರಿ ಮಲಗಲು ಹೋಗಿದ್ದ. ಬೆಳಗ್ಗೆ ಎದ್ದು ನೋಡಿದಾಗ ಯುವಕ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಹಾರದ ಶರೀಫ್ ಸದರ್ ಆಸ್ಪತ್ರೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಬಗ್ಗೆ ಪ್ರಕರಣ ದಾಖಲಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ದಂಪತಿ ಆತ್ಮಹತ್ಯೆ: ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯಲ್ಲಿ ತಮ್ಮ ಕಣ್ಮುಂದೆಯೇ ಮಗಳನ್ನು ಯುವಕನೋರ್ವ ಅಪಹರಣ ಮಾಡಿದ ಕಾರಣದಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡು ಘಟನೆ ನಡೆದಿತ್ತು. ಭರ್ವೀರ್ ಬುದ್ರುಕ್ ಗ್ರಾಮದಲ್ಲಿ ಭಾನುವಾರ ಕಿಸಾನ್ ಖತಲೆ (49) ಮತ್ತು ಮಂಜುಳಾ ಖತಲೆ (40) ಎಂಬ ದಂಪತಿ ತಮ್ಮ ಮಗಳೊಂದಿಗೆ ಬೈಕ್​ನಲ್ಲಿ ಸಂಚರಿಸುತ್ತಿದ್ದರು.

ಈ ವೇಳೆ ಆಕೆಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ತನ್ನ ಸಹಚರರೊಂದಿಗೆ ಕಾರಿನಲ್ಲಿ ಆಗಮಿಸಿ ಘೋಟಿ - ಪಂಧುರ್ಲಿ ಹೆದ್ದಾರಿಯಲ್ಲಿ ಮೂವರನ್ನು ಅಡ್ಡಗಟ್ಟಿದ್ದ. ಅಲ್ಲದೇ, ಖತಲೆ ದಂಪತಿಗೆ ಆರೋಪಿಗಳು ಥಳಿಸಿದ್ದರು. ನಂತರ ಯುವತಿಯನ್ನು ಅಪಹರಣ ಮಾಡಿದ್ದರು. ಇದರಿಂದ ಮಾನಸಿಕವಾಗಿ ನೊಂದು ಕಿಸಾನ್ ಮತ್ತು ಮಂಜುಳಾ ದಂಪತಿ ರೈಲು ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರದಲ್ಲಿ ಇಬ್ಬರು ಮೃತಗಳನ್ನು ಆರೋಪಿ ಮನೆಯ ಮುಂದೆ ಸಂಬಂಧಿಕರು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದ್ದರು.

ಇದನ್ನೂ ಓದಿ: ಮಗಳ ಕಿಡ್ನಾಪ್​: ರೈಲಿಗೆ ತಲೆ ಕೊಟ್ಟ ತಂದೆ - ತಾಯಿ.. ಆರೋಪಿಯ ಮನೆ ಮುಂದೆ ಶವ ಸುಟ್ಟ ಸಂಬಂಧಿಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.