ETV Bharat / bharat

ನಿಮ್ಮ ಸ್ಕೂಟಿ ನಂದಿಗ್ರಾಮದಲ್ಲಿ ಪಲ್ಟಿಯಾಗಲಿದೆ; ಸಿಎಂ ಮಮತಾಗೆ ಪ್ರಧಾನಿ ಮೋದಿ ಎಚ್ಚರಿಕೆ

author img

By

Published : Mar 7, 2021, 4:13 PM IST

ಪಶ್ಚಿಮ ಬಂಗಾಳದ ಜನತೆಗೆ ಇಂದು ಶಾಂತಿಯುತ ಬಂಗಾಳ, ಸ್ವರ್ಣಿಮ ಬಂಗಾಳ ಹಾಗೂ ಅಭಿವೃದ್ಧಿಶೀಲ ಬಂಗಾಳ ಬೇಕಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ, ಕಾಂಗ್ರೆಸ್​ ಹಾಗೂ ಎಡಪಕ್ಷಗಳು ತಮ್ಮ ಬಂಗಾಳ ವಿರೋಧಿ ನೀತಿಯೊಂದಿಗೆ ಒಂದಾಗಿದ್ದಾರೆ. ಆದರೆ ಮತ್ತೊಂದೆಡೆ ಬಂಗಾಳಿ ಜನರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿ, ರಾಜ್ಯವನ್ನು ಸೋನಾರ್ ಬಾಂಗ್ಲಾ ಮಾಡುವ ಕನಸನ್ನು ನನಸಾಗಿಸುವ ಭರವಸೆಯೊಂದಿಗೆ ನಾನಿವತ್ತು ನಿಮ್ಮ ಮುಂದೆ ಆಗಮಿಸಿದ್ದೇನೆ. ಮುಂದಿನ 25 ವರ್ಷಗಳು ಬಂಗಾಳದ ಉತ್ತಮ ಭವಿಷ್ಯದ ದೃಷ್ಟಿಯಿಂದ ಬಹಳೇ ಅಮೂಲ್ಯವಾಗಿವೆ. ಮುಂದಿನ 5 ವರ್ಷಗಳಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳೇ ಬಂಗಾಳದ ಮುಂದಿನ 25 ವರ್ಷದ ಅಭಿವೃದ್ಧಿಗೆ ಅಡಿಪಾಯ ಹಾಕಲಿವೆ ಎಂದು ಪ್ರಧಾನಿ ತಿಳಿಸಿದರು.

your scooty will overturn in nandigram; modi warns cm mamata
ನಿಮ್ಮ ಸ್ಕೂಟಿ ನಂದಿಗ್ರಾಮದಲ್ಲಿ ಪಲ್ಟಿಯಾಗಲಿದೆ; ಸಿಎಂ ಮಮತಾಗೆ ಪ್ರಧಾನಿ ಮೋದಿ ಎಚ್ಚರಿಕೆ

"ಮಮತಾ ದೀದಿ, ಕೆಲ ದಿನಗಳ ಹಿಂದೆ ನೀವು ಸ್ಕೂಟಿ ಓಡಿಸಿದ್ದೀರಿ. ಆದರೆ ಅಂದು ಸ್ಕೂಟಿಯಿಂದ ಬಿದ್ದು ನಿಮಗೆ ಪೆಟ್ಟಾಗದಿರಲೆಂದು ಎಲ್ಲರೂ ಪ್ರಾರ್ಥಿಸಿದ್ದರು. ಒಂದು ವೇಳೆ ನೀವು ಅವತ್ತು ವಾಹನದಿಂದ ಏನಾದರೂ ಬಿದ್ದು ಪೆಟ್ಟು ಮಾಡಿಕೊಂಡಿದ್ದರೆ, ಆ ಸ್ಕೂಟಿ ತಯಾರಾದ ರಾಜ್ಯದ ವಿರುದ್ಧ ನೀವು ದ್ವೇಷ ಕಾರುವ ಸಂಭವವಿತ್ತು. ಅವತ್ತು ನಿಮ್ಮ ಸ್ಕೂಟಿ ಭವಾನಿಪೋರಗೆ ಹೋಗುವ ಬದಲು ನಂದಿಗ್ರಾಮನತ್ತ ತಿರುವು ತೆಗೆದುಕೊಂಡಿತು. ಯಾರಿಗೂ ಪೆಟ್ಟಾಗದಿರಲಿ, ಎಲ್ಲರೂ ಚೆನ್ನಾಗಿರಲಿ ಎಂಬುದೇ ನನ್ನ ಹಾರೈಕೆಯಾಗಿದೆ. ಆದರೆ ನಿಮ್ಮ ಸ್ಕೂಟಿ ನಂದಿಗ್ರಾಮದಲ್ಲಿ ಪಲ್ಟಿಯಾಗುವುದೇ ನಿಮ್ಮ ಹಣೆಬರಹದಲ್ಲಿ ಬರೆದಿದ್ದರೆ ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ." ಎಂದು ಪ್ರಧಾನಿ ನರೇಂದ್ರ ಮೋದಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬಿಜೆಪಿಯ ಚುನಾವಣಾ ರ್ಯಾಲಿಯಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ನಂದಿಗ್ರಾಮದಲ್ಲಿ ಸಿಎಂ ಮಮತಾಗೆ ಸೋಲುಂಟಾಗುವುದನ್ನು ಯಾರೂ ತಪ್ಪಿಸಲಾಗದು ಎಂದು ಈ ಮೂಲಕ ಸಂದೇಶ ರವಾನಿಸಿದರು

ಈ ಬ್ರಿಗೇಡ್ ಪರೇಡ್​ ಮೈದಾನವು ಬಂಗಾಲದ ಹಲವಾರು ದಿಗ್ಗಜ ನೇತಾರರ ಮಾತುಗಳಿಗೆ ಸಾಕ್ಷಿಯಾಗಿದೆ. ಹಾಗೆಯೇ ಬಂಗಾಲದ ದುಸ್ಥಿತಿಗೆ ಕಾರಣರಾದವರನ್ನೂ ನೋಡಿದೆ. ಆದರೆ ಪಶ್ಚಿಮ ಬಂಗಾಳದ ಜನತೆ ಉತ್ತಮ ಬದಲಾವಣೆಗಾಗಿ ತಮ್ಮ ಆಶಾಭಾವನೆಯನ್ನು ಮಾತ್ರ ಎಂದಿಗೂ ಬಿಟ್ಟಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಪಶ್ಚಿಮ ಬಂಗಾಳದ ಜನತೆಗೆ ಇಂದು ಶಾಂತಿಯುತ ಬಂಗಾಳ, ಸ್ವರ್ಣಿಮ ಬಂಗಾಳ ಹಾಗೂ ಅಭಿವೃದ್ಧಿಶೀಲ ಬಂಗಾಳ ಬೇಕಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ, ಕಾಂಗ್ರೆಸ್​ ಹಾಗೂ ಎಡಪಕ್ಷಗಳು ತಮ್ಮ ಬಂಗಾಳ ವಿರೋಧಿ ನೀತಿಯೊಂದಿಗೆ ಒಂದಾಗಿದ್ದಾರೆ. ಆದರೆ ಮತ್ತೊಂದೆಡೆ ಬಂಗಾಳಿ ಜನರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿ, ರಾಜ್ಯವನ್ನು ಸೋನಾರ್ ಬಾಂಗ್ಲಾ ಮಾಡುವ ಕನಸನ್ನು ನನಸಾಗಿಸುವ ಭರವಸೆಯೊಂದಿಗೆ ನಾನಿವತ್ತು ನಿಮ್ಮ ಮುಂದೆ ಆಗಮಿಸಿದ್ದೇನೆ. ಮುಂದಿನ 25 ವರ್ಷಗಳು ಬಂಗಾಳದ ಉತ್ತಮ ಭವಿಷ್ಯದ ದೃಷ್ಟಿಯಿಂದ ಬಹಳೇ ಅಮೂಲ್ಯವಾಗಿವೆ. ಮುಂದಿನ 5 ವರ್ಷಗಳಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳೇ ಬಂಗಾಳದ ಮುಂದಿನ 25 ವರ್ಷದ ಅಭಿವೃದ್ಧಿಗೆ ಅಡಿಪಾಯ ಹಾಕಲಿವೆ ಎಂದು ಪ್ರಧಾನಿ ತಿಳಿಸಿದರು.

ನಿಜವಾದ ಪರಿವರ್ತನೆಯನ್ನು (ಅಸೋಲ್ ಪೊರಿಬೋರ್ತನ್) ಖಚಿತ ಪಡಿಸುವುದು ನಮ್ಮ ಗುರಿಯಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿ, ಕೈಗಾರಿಕೋದ್ಯಮಗಳನ್ನು ಬೆಳೆಸುವುದು ಹಾಗೂ ಆ ಮೂಲಕ ರಾಜ್ಯದ ಪುನರುಜ್ಜೀವನ ಮಾಡುವುದು ನಮ್ಮ ಉದ್ದೇಶವಾಗಿದೆ. ರಾಜ್ಯದ ರೈತರು, ಉದ್ಯಮಿಗಳು ಸೇರಿದಂತೆ ಸಾಮಾನ್ಯ ಬಂಗಾಳಿ ಸಹೋದರ, ಸಹೋದರಿಯರ ಏಳಿಗೆಗಾಗಿ ಕೆಲಸ ಮಾಡುವುದಾಗಿ ನಿಮಗೆ ಭರವಸೆ ನೀಡುತ್ತಿದ್ದೇನೆ ಎಂದು ಮೋದಿ ನುಡಿದರು.

2047ರ ಹೊತ್ತಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷಗಳಾಗಲಿದ್ದು, ಆ ಸಮಯಕ್ಕೆ ಬಂಗಾಳವು ಇಡೀ ದೇಶವನ್ನೇ ಮತ್ತೆ ಮುನ್ನಡೆಸುವ ಶಕ್ತಿಯಾಗಿ ಹೊರಹೊಮ್ಮಲಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ಹಾಳುಗೆಡವಲಾಗುತ್ತಿದೆ ಎಂಬುದನ್ನು ನೀವೆಲ್ಲ ನೋಡಿರುವಿರಿ. ಆದರೆ ಬಿಜೆಪಿ ಇದನ್ನೆಲ್ಲ ಬದಲಾಯಿಸಿ, ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ಜನತೆಯ ನಂಬಿಕೆಯನ್ನು ಮರುಸ್ಥಾಪಿಸಲಿದೆ. ಆಡಳಿತ ಹಾಗೂ ಪೊಲೀಸ್​ ವ್ಯವಸ್ಥೆಯಲ್ಲಿಯೂ ನಿಮ್ಮ ವಿಶ್ವಾಸ ಮೂಡುವಂತೆ ನಾವು ಮಾಡಲಿದ್ದೇವೆ ಎಂದು ಪ್ರಧಾನಿ ಭರವಸೆ ನೀಡಿದರು.

ಅವರು (ಟಿಎಂಸಿ ಪಕ್ಷ) ಮಾ, ಮಾಟಿ, ಮಾನುಷ್ (ತಾಯಿ, ಮಾತೃಭೂಮಿ ಹಾಗೂ ಜನತೆ) ಎಂಬ ಘೋಷಣೆಯ ಮೂಲಕ ಬದಲಾವಣೆ ತರುವುದಾಗಿ ಭರವಸೆ ನೀಡಿದ್ದರು. ಆದರೆ 10 ವರ್ಷಗಳಲ್ಲಿ ಯಾವುದೇ ಬದಲಾವಣೆಯನ್ನು ಅವರು ಮಾಡಿದ್ದಾರಾ? ಎಂದು ಪ್ರಧಾನಿ ಮೋದಿ ನೆರೆದ ಜನಸ್ತೋಮಕ್ಕೆ ಪ್ರಶ್ನಿಸಿದರು.

ರಾಜ್ಯದಲ್ಲಿ ತಾಯಂದಿರು, ಜನತೆಯ ಪರಿಸ್ಥಿತಿ ಈಗ ಏನಾಗಿದೆಯೆಂಬುದನ್ನು ನಾವು ನೋಡುತ್ತಿದ್ದೇವೆ. ತಾಯಂದಿರನ್ನು ಹಾದಿ ಬೀದಿಗಳಲ್ಲಿ ಹಾಗೂ ಅವರ ಮನೆಯೊಳಗೆ ನುಗ್ಗಿ ಹೊಡೆಯಲಾಗುತ್ತಿದೆ. ಇತ್ತೀಚೆಗೆ 80 ವರ್ಷದ ತಾಯಿಯೊಬ್ಬಳ ಮೇಲೆ ಅವರು ಹಲ್ಲೆ ನಡೆಸಿದ್ದು, ಅವರ ಕ್ರೂರ ಮುಖದ ಪರಿಚಯ ಮಾಡಿದೆ ಎಂದು ಮೋದಿ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಮತಾ ಅವರೇ, ರಾಜ್ಯದ ಜನತೆ ನಿಮ್ಮನ್ನು ತಮ್ಮ ದೀದಿ (ಅಕ್ಕ) ಎಂದು ಆರಿಸಿದ್ದಾರೆ. ಆದರೆ ನೀವು ನಿಮ್ಮ ಸೋದರ ಸಂಬಂಧಿಯ ಚಿಕ್ಕಮ್ಮನ ಪಾತ್ರವನ್ನು ಮಾತ್ರ ಏಕೆ ನಿರ್ವಹಿಸುತ್ತಿರುವಿರಿ ಎಂಬುದನ್ನು ಬಂಗಾಳದ ಜನತೆ ತಿಳಿಯಲು ಬಯಸುತ್ತಿದ್ದಾರೆ. ಅವರಿಗೆ ಉತ್ತರಿಸುವುದು ನಿಮ್ಮ ಕರ್ತವ್ಯವಾಗಿದೆ ಎಂದು ಪ್ರಧಾನಿ ಮೋದಿ ಸಿಎಂ ಮಮತಾ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಟಿಎಂಸಿ ಪಕ್ಷದ ಆಟ ಮುಗಿದಿದೆ. ಇನ್ನೇನಿದ್ದರೂ ವಿಕಾಸದ ಸಮಯ ಆರಂಭವಾಗಲಿದೆ. ಈಗ ಆಳುತ್ತಿರುವವರು ಭ್ರಷ್ಟಾಚಾರದಲ್ಲಿ ಪಳಗಿದ್ದು, ಸರ್ಕಾರಿ ಖಜಾನೆಯ ಲೂಟಿಯಲ್ಲಿ ತೊಡಗಿದ್ದಾರೆ. ಅಂಫನ್ ಚಂಡಮಾರುತದ ಪರಿಹಾರದ ಹಣವನ್ನೂ ಅವರು ಲೂಟಿ ಮಾಡಿದ್ದಾರೆ. ಇವರು ಮಾಡಿರುವ ಭ್ರಷ್ಟಾಚಾರದ ಆಟಗಳಿಂದ 'ಭ್ರಷ್ಟಾಚಾರದ ಒಲಿಂಪಿಕ್​' ಅನ್ನೇ ಆಯೋಜಿಸಬಹುದು ಎಂದು ಆಡಳಿತಾರೂಢ ಮಮತಾ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.