ETV Bharat / bharat

Living Together : ಪ್ರೇಮಿಗಳ ನಡುವೆ ಕಲಹ, ಪ್ರಿಯಕರನನ್ನೇ ಹತ್ಯೆಗೈದ ಪ್ರೇಯಸಿ

author img

By

Published : Jun 26, 2021, 7:10 PM IST

ಕರಣ್​ ಎಂಬಾತ ತನ್ನ ಪೂನಂ ಜತೆಗೆ ನಾಲ್ಕು ವರ್ಷಗಳಿಂದ ಲಿವಿಂಗ್​ ಟು ಗೆದರ್​ನಲ್ಲಿದ್ದ. ಇಬ್ಬರೂ ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ದರ್ವಾಜಾ ನಿವಾಸಿಗಳು. ಕೆಲವು ವಿಚಾರಗಳಲ್ಲಿ ಇಬ್ಬರಿಗೂ ಆಗಾಗ್ಗೆ ಜಗಳ ಉಂಟಾಗುತ್ತಿತ್ತು. ಆದರೆ, ಶುಕ್ರವಾರ ರಾತ್ರಿ ವಿವಾದವು ತಾರಕಕ್ಕೇರಿದ್ದು, ಪ್ರೇಯಸಿಯೇ ದೊಣ್ಣೆಯಿಂದ ಹೊಡೆದು ಪ್ರಿಯತಮನ ಹತ್ಯೆಗೈದಿದ್ದಾಳೆ..

Living Together
Living Together

ಅಲ್ವಾರ್(ರಾಜಸ್ಥಾನ) : ಪೋಷಕರ ವಿರೋಧದ ನಡುವೆಯೂ ಯುವಕ ತನ್ನ ಪ್ರೇಯಸಿಯೊಂದಿಗೆ ನಾಲ್ಕು ವರ್ಷಗಳಿಂದ ಲಿವಿಂಗ್​ ಟು ಗೆದರ್​ನಲ್ಲಿದ್ದ. ಆದರೆ, ಇಬ್ಬರ ಮಧ್ಯೆ ಮನಸ್ತಾಪವುಂಟಾಗಿ ಶುರುವಾದ ಜಗಳ ಯುವಕನ ಹತ್ಯೆಯಲ್ಲಿ ಅಂತ್ಯವಾಗಿದೆ.

ಜಿಲ್ಲೆಯ ಶಿವಾಜಿ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ಧ ವಿಹಾರದಲ್ಲಿ ಕರಣ್​ ಎಂಬಾತ ತನ್ನ ಪೂನಂ ಜತೆಗೆ ನಾಲ್ಕು ವರ್ಷಗಳಿಂದ ಲಿವಿಂಗ್​ ಟು ಗೆದರ್​ನಲ್ಲಿದ್ದ. ಇಬ್ಬರೂ ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ದರ್ವಾಜಾ ನಿವಾಸಿಗಳು. ಕೆಲವು ವಿಚಾರಗಳಲ್ಲಿ ಇಬ್ಬರಿಗೂ ಆಗಾಗ್ಗೆ ಜಗಳ ಉಂಟಾಗುತ್ತಿತ್ತು. ಆದರೆ, ಶುಕ್ರವಾರ ರಾತ್ರಿ ವಿವಾದವು ತಾರಕಕ್ಕೇರಿದ್ದು, ಪ್ರೇಯಸಿಯೇ ದೊಣ್ಣೆಯಿಂದ ಹೊಡೆದು ಪ್ರಿಯತಮನ ಹತ್ಯೆಗೈದಿದ್ದಾಳೆ.

ಇದನ್ನೂ ಓದಿ:ಸಲಿಂಗ ಕಾಮದಾಟಕ್ಕೆ ವಿದ್ಯಾರ್ಥಿ ಬಳಸಿಕೊಂಡಿದ್ದ Head Master ಬಂಧನ

ಈ ಘಟನೆ ಸಂಭವಿಸುತ್ತಿದ್ದಂತೆ, ಯುವತಿ ತಾನೇ ಕರೆ ಮಾಡಿ ಯುವಕನ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದು ಪೊಲೀಸರೊಂದಿಗೆ ಆಗಮಿಸಿದ ಪೋಷಕರು, ಪರಿಶೀಲನೆ ನಡೆಸಿದ್ದಾರೆ. ಕರಣ್​ ಆದಷ್ಟು ಬೇಗ ಮದುವೆಯಾಗುವಂತೆ ಪೂನಂಗೆ ಒತ್ತಾಯಿಸಿದ್ದ. ಆದರೆ, ಪೂನಂ ವಿವಾಹಕ್ಕೆ ಒಪ್ಪಿರಲಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ವಾಗ್ವಾದ ಉಂಟಾಗಿದೆ ಎಂದರು. ಕರಣ್ ಕುಟುಂಬಸ್ಥರು ಪೊಲೀಸರಿಗೆ ಯುವತಿ ವಿರುದ್ಧ ಲಿಖಿತ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.