ETV Bharat / bharat

ಎಕ್ಸ್​ಪೋಸ್ಯಾಟ್​ ಹಿಂದಿದೆ ಮಹಿಳಾ ಶಕ್ತಿ, ಕಕ್ಷೆ ಸೇರಿದ ವರ್ಷದ ಮೊದಲ ಉಪಗ್ರಹ: ಇಸ್ರೋ

author img

By ETV Bharat Karnataka Team

Published : Jan 1, 2024, 3:23 PM IST

Updated : Jan 1, 2024, 5:16 PM IST

ISRO xposat : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾಯಿಸಿರುವ ಎಕ್ಸ್​ಪೋಸ್ಯಾಟ್​ ನೌಕೆಯನ್ನು ಮಹಿಳಾ ವಿಜ್ಞಾನಿಗಳು ರೂಪಿಸಿದ್ದಾರೆ. ಕೆಳಹಂತದ ಭೂ ಕಕ್ಷೆ ಸೇರಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಎಕ್ಸ್​ಪೋಸ್ಯಾಟ್
ಎಕ್ಸ್​ಪೋಸ್ಯಾಟ್

ಕಕ್ಷೆ ಸೇರಿದ ವರ್ಷದ ಮೊದಲ ಉಪಗ್ರಹ

ಹೈದರಾಬಾದ್: ಹೊಸ ವರ್ಷದ ಮೊದಲ ದಿನವಾದ ಸೋಮವಾರ ಇಸ್ರೋ ಹಾರಿಬಿಟ್ಟ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡು ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳು, ಗ್ಯಾಲಕ್ಸಿಯ ನ್ಯೂಕ್ಲಿಯಸ್​​ಗಳು, ಪಲ್ಸರ್​ಗಳು ಮತ್ತು ನೀಹಾರಿಕೆಗಳಂತಹ ಆಕಾಶ ವಸ್ತುಗಳ ಅಧ್ಯಯನ ಮಾಡುವ ಈ ಉಪಗ್ರಹವನ್ನು ಮಹಿಳಾ ವಿಜ್ಞಾನಿಗಳು ರೂಪಿಸಿದ್ದರು ಎಂಬುದು ವಿಶೇಷ.

XPoSat ಬಾಹ್ಯಾಕಾಶ ವೀಕ್ಷಣಾಲಯ ಉಪಗ್ರಹವಾಗಿದೆ. ಇದನ್ನು ಸಂಪೂರ್ಣವಾಗಿ ಮಹಿಳಾ ವಿಜ್ಞಾನಿಗಳು ರೂಪಿಸಿದ್ದಾರೆ. ಈ ಮೂಲಕ ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣವನ್ನು ಇದು ತೋರಿಸುತ್ತದೆ ಎಂದು ಇಸ್ರೋದ ಎಕ್ಸ್​ಪೋಸ್ಯಾಟ್​ ಮಿಷನ್ ಉಡಾವಣಾ ನಿರ್ದೇಶಕ ಡಾ. ಎಂ. ಜಯಕುಮಾರ್ ಅವರು ತಿಳಿಸಿದ್ದಾರೆ.

ಮಿಷನ್‌ ಯಶಸ್ವಿಯಾಗಿರುವ ಬಗ್ಗೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಘೋಷಿಸಿದ್ದಾರೆ. ಪಿಎಸ್‌ಎಲ್‌ವಿ ವಾಹಕವು ಮತ್ತೊಂದು ಮಿಷನ್ ಅನ್ನು ಯಶಸ್ವಿಗೊಳಿಸಿದೆ. ಹೊಸ ವರ್ಷ ಅದ್ಭುತವಾಗಿ ಪ್ರಾರಂಭವಾಗಿದೆ. ಇದು ಮುಂದಿನ ಯೋಜನೆಗಳಿಗೆ ನಮ್ಮನ್ನು ಉತ್ತೇಜಿಸುತ್ತದೆ. ಮಿಷನ್ ಗಗನಯಾನ ಈ ವರ್ಷದ ಗುರಿಯಾಗಿದೆ ಎಂದು ಅವರು ಹೇಳಿದರು.

  • #ISRO begins 2024 in Style!
    Successful launch of PSLV-C58/ 🛰 XPoSat Mission.
    Proud to be associated with the Department of Space at a time when Team @isro continues to accomplish one success after the other, with the personal intervention & patronage from PM Sh @narendramodi. pic.twitter.com/cisbjpUYpH

    — Dr Jitendra Singh (@DrJitendraSingh) January 1, 2024 " class="align-text-top noRightClick twitterSection" data=" ">

ಭೂಕಕ್ಷೆ ಸೇರಿದ ಉಪಗ್ರಹ: ಉಪಗ್ರಹದ ಚಲನೆಯ ಬಗ್ಗೆ ಇಸ್ರೋ ತನ್ನ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 'XPoSat ಉಪಗ್ರಹವು 350 ಕಿ.ಮೀ ಎತ್ತರದ ಭೂಕಕ್ಷೆಯಲ್ಲಿ ಇದು ಪ್ರಯಾಣಿಸುತ್ತಿದೆ. ಸ್ಯಾಟಲೈಟ್​ನ ಮೂರನೇ ಹಂತವಾದ POEM-3 ಸಕ್ರಿಯವಾಗಿದೆ. ಮಿಷನ್‌ನ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿದೆ. ವಿದ್ಯುತ್​ ಉತ್ಪಾದನೆಯನ್ನು ಅದು ಆರಂಭಿಸಿದೆ' ಎಂದು ತಿಳಿಸಿದೆ.

ಇಸ್ರೋಗೆ ಅಭಿನಂದನೆಗಳ ಸುರಿಮಳೆ: ಅತ್ಯಂತ ಯಶಸ್ವಿಯಾಗಿ ವರ್ಷಾರಂಭ ಮಾಡಿರುವ ಇಸ್ರೋಗೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್​ ಖಾತೆಯಲ್ಲಿ, '2024 ಉತ್ತಮ ಆರಂಭ ಪಡೆದಿದೆ. ಈ ಉಡಾವಣೆಯು ಬಾಹ್ಯಾಕಾಶ ಕ್ಷೇತ್ರಕ್ಕೆ ಅದ್ಭುತ ಸುದ್ದಿಯಾಗಿದೆ. ಈ ಕ್ಷೇತ್ರದಲ್ಲಿ ಭಾರತದ ಪರಾಕ್ರಮ ಮುಂದುವರಿದಿದೆ. ಭಾರತ ಖ್ಯಾತಿಯನ್ನು ಇಮ್ಮಡಿಗೊಳಿಸುತ್ತಿರುವ ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದಗಳು' ಎಂದು ಅವರು ಬರೆದುಕೊಂಡಿದ್ದಾರೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಇಸ್ರೋ 2024 ತನ್ನದೇ ಶೈಲಿಯಲ್ಲಿ ಪ್ರಾರಂಭಿಸಿದೆ. PSLV-C58 XPoSat ಮಿಷನ್‌ ಯಶಸ್ವಿ ಉಡಾವಣೆಯಾಗಿದೆ. ಇಸ್ರೋ ತಂಡವು ಒಂದರ ನಂತರ ಒಂದರಂತೆ ಯಶಸ್ಸು ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಇತಿಹಾಸ ಬರೆದ ಇಸ್ರೋ: 'ಎಕ್ಸ್‌ಪೋಸ್ಯಾಟ್‌' ಉಡ್ಡಯನ ಯಶಸ್ವಿ

Last Updated : Jan 1, 2024, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.