ETV Bharat / bharat

Wrestlers Protest: "ಬ್ರಿಜ್ ಭೂಷಣ್ ವಿರುದ್ಧ ನಮ್ಮ ಹೋರಾಟ, ಸರ್ಕಾರದ ವಿರುದ್ಧ ಅಲ್ಲ"-ಸಾಕ್ಷಿ ಮಲಿಕ್ ದಂಪತಿ

author img

By

Published : Jun 17, 2023, 10:54 PM IST

ಭಾರತದ ಸ್ಟಾರ್ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ಅವರ ಪತಿ ಕುಸ್ತಿಪಟು ಸತ್ಯವ್ರತ್ ಕಡಿಯಾನ್ ತಮ್ಮ ಪ್ರತಿಭಟನೆಯು ರಾಜಕೀಯ ಪ್ರೇರಿತವಲ್ಲ ಎಂದು ಟ್ವಿಟರ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

sakshi malik and her husband satyawart kadian
ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ಅವರ ಪತಿ ಕುಸ್ತಿಪಟು ಸತ್ಯವ್ರತ್ ಕಡಿಯಾನ್

ನವದೆಹಲಿ: ತಮ್ಮ ಹೋರಾಟವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವೇ ಹೊರತು ಕೇಂದ್ರ ಸರ್ಕಾರದ ವಿರುದ್ಧ ಅಲ್ಲ ಎಂದು ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ಅವರ ಪತಿ ಸತ್ಯವರ್ತ್ ಕಡಿಯನ್ ಹೇಳಿದ್ದಾರೆ.

ಸಾಕ್ಷಿ ಶನಿವಾರ ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಕಳೆದ ಕೆಲವು ದಿನಗಳಿಂದ ತಮ್ಮ ಸುತ್ತ ಸುತ್ತುತ್ತಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ."ಭಾರತೀಯ ರೆಸ್ಲಿಂಗ್ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂಬ ಕಾರಣಕ್ಕೆ ನಾವು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಅವರು ಕುಸ್ತಿ ಫೆಡರೇಶನ್ ನಡೆಸುವಾಗ ಅನೇಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ನಮ್ಮ ವಿರುದ್ಧ ಕೆಲ ವದಂತಿಗಳು ಹರಡುತ್ತಿವೆ. ಮಾಧ್ಯಮದ ಒಂದು ವಿಭಾಗವು ತಪ್ಪುದಾರಿಗೆಳೆಯುವ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಈ ವೀಡಿಯೊದ ಉದ್ದೇಶವು ನಮ್ಮ ಸತ್ಯವನ್ನು ಹಂಚಿಕೊಳ್ಳುವುದಾಗಿದೆ" ಎಂದು ಸತ್ಯವರ್ತ್ ವಿಡಿಯೋದಲ್ಲಿ ಹೇಳಿದ್ದಾರೆ.

"ನಮ್ಮ ಹೋರಾಟವು ಸರ್ಕಾರದ ವಿರುದ್ಧವಲ್ಲ. ಆದರೆ ಫೆಡರೇಶನ್‌ನ ಚುಕ್ಕಾಣಿ ಹಿಡಿದಿರುವಾಗ ಆಪಾದಿತ ಅಪರಾಧಗಳನ್ನು ಮಾಡಿದ ಡಬ್ಲ್ಯುಎಫ್‌ಐ ಮುಖ್ಯಸ್ಥನ ವಿರುದ್ಧ ಎಂದು ನಾವು ಹಲವು ಬಾರಿ ಹೇಳಿದ್ದೇವೆ. ಕಳೆದ 10 ರಿಂದ 12 ವರ್ಷಗಳಿಂದ ನಮ್ಮ ಮಹಿಳಾ ಕುಸ್ತಿಪಟುಗಳಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ಕುಸ್ತಿಪಟುಗಳು ಮತ್ತು ಅವರ ತರಬೇತುದಾರರು ಸೇರಿದಂತೆ ಕುಸ್ತಿಗೆ ಸಂಬಂಧಿಸಿದ ಶೇಕಡಾ 90 ರಷ್ಟು ಜನರು ತಿಳಿದಿದ್ದರು ಎಂದು ನಾನು ಖಚಿತವಾಗಿ ಹೇಳಬಲ್ಲೆ. ಕೆಲವು ತರಬೇತುದಾರರು ಈ ಹಿಂದೆ ಸಾಕ್ಷ್ಯಗಳೊಂದಿಗೆ ಹೊರಬಂದಿದ್ದಾರೆ" ಅವರು ಹೇಳಿದರು.

ಕುಸ್ತಿಪಟುಗಳ ಪ್ರತಿಭಟನೆಯ ಹಿಂದೆ ರಾಜಕೀಯವಿದೆ ಮತ್ತು ಅವರು ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ ಅವರಿಂದ ಪ್ರಚೋದನೆಗೆ ಒಳಗಾಗಿದ್ದಾರೆ ಎಂಬ ಹೇಳಿಕೆಗಳ ಬಗ್ಗೆ ಮತ್ತಷ್ಟು ಸ್ಪಷ್ಟನೆ ನೀಡಿದ ಅವರು, "ರಾಜಕೀಯದಿಂದ ಪ್ರೇರಿತವಾದ ಪ್ರತಿಭಟನೆಯೆಂದು ನಾವು ಮೊದಲು ಆರೋಪಿಸಿದ್ದೇವೆ. ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ ನಮ್ಮನ್ನು ಪ್ರಚೋದಿಸಿದರು ಎಂದು ಹೇಳಲಾಗಿದೆ. ಪ್ರತಿಭಟನೆಯನ್ನು ಆರಂಭಿಸಿ, ನಾವು ಈ ಪ್ರತಿಭಟನೆಯನ್ನು ಜನವರಿಯಲ್ಲಿ ಪ್ರಾರಂಭಿಸಿದ್ದೇವೆ ಮತ್ತು ಇಬ್ಬರು ಬಿಜೆಪಿ ನಾಯಕರಿಂದ ಪೂರ್ವಾನುಮತಿ ಪಡೆದಿದ್ದೇವೆ. ಅದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ದಾಖಲೆಯನ್ನು 11 ನಿಮಿಷದ ವಿಡಿಯೋದಲ್ಲಿ ತೋರಿಸಿದ್ದಾರೆ.

ಈ ಹಿಂದೆಯೇ ಏಕೆ ಲೈಂಗಿಕ ಕಿರುಕುಳದ ವಿರುದ್ಧ ಕುಸ್ತಿಪಟುಗಳು ಮಾತನಾಡಲಿಲ್ಲ ಎಂಬುದಕ್ಕೂ ಸಾಕ್ಷಿ ಮಲಿಕ್ ಹೇಳಿದ್ದಾರೆ,"ನಾವು ಹೆಚ್ಚು ಕಾಲ ಸುಮ್ಮನಿದ್ದೆವು ಎಂದು ಆರೋಪಿಸಲಾಗುತ್ತಿದೆ. ಆದರೆ, ಅದಕ್ಕೆ ಹಲವು ಕಾರಣಗಳಿವೆ. ನಾವು ಒಗ್ಗಟ್ಟಾಗಿರಲಿಲ್ಲ ಮತ್ತು ಎರಡನೆಯದಾಗಿ, ಅಲ್ಲಿ ಅಪ್ರಾಪ್ತ ವಯಸ್ಕರು ಇದ್ದರು. ಸಾಕ್ಷಿ ಮಲಿಕ್ ಐಪಿಸಿ ಸೆಕ್ಷನ್ 161 ಮತ್ತು 164 ರ ಅಡಿಯಲ್ಲಿ ಹೇಳಿಕೆ ನೀಡಿದ್ದರು. ಅವರಿಗೆ ಬೆದರಿಕೆ ಹಾಕಲಾಗಿತ್ತು" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ವಿಡಿಯೋ ಕೊನೆಯಲ್ಲಿ, ತಮ್ಮ ಉದ್ದೇಶವನ್ನು ಬೆಂಬಲಿಸಿದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು, ಅನ್ಯಾಯದ ವಿರುದ್ಧ ಎಲ್ಲರೂ ನಿಲ್ಲಬೇಕು ಎಂದು ಕೇಳಿಕೊಂಡರು. ಒಲಿಂಪಿಯನ್‌ಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಮತ್ತು ಇತರ ಕುಸ್ತಿಪಟುಗಳು ಈ ವರ್ಷದ ಆರಂಭದಿಂದ ರಾಷ್ಟ್ರ ರಾಜಧಾನಿಯಲ್ಲಿ ಲೈಂಗಿಕ ಕಿರುಕುಳದ ಆರೋಪದ ಮೇಲೆ ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಲು ಪ್ರತಿಭಟನೆ ನಡೆಸುತ್ತಿದ್ದರು.

ಪ್ರತಿಭಟನಾನಿರತ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ದೂರಿನ ಮೇರೆಗೆ ಬ್ರಿಜ್ ಭೂಷಣ್ ವಿರುದ್ಧ ಎಫ್‌ಐಆರ್‌ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಐಪಿಸಿ ಸೆಕ್ಷನ್ 354, 354ಡಿ, 345ಎ ಮತ್ತು 506 (1) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ.

ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಚುನಾವಣೆಯು ಜುಲೈ 6 ರಂದು ನಡೆಯಲಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಜೂನ್ 19 ರಂದು ಪ್ರಾರಂಭವಾಗಲಿದೆ.

ಇದನ್ನೂ ಓದಿ: ಜುಲೈನಲ್ಲಿ ಬಾಂಗ್ಲಾ ಪ್ರವಾಸದಲ್ಲಿ ಭಾರತೀಯ ವನಿತೆಯರ ಕ್ರಿಕೆಟ್ ತಂಡ, 3 ಏಕದಿನ ಮತ್ತು 3 ಟಿ20 ಪಂದ್ಯಗಳ ಮುಖಾಮುಖಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.