ETV Bharat / bharat

ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಂಸದರು - ಮಾರ್ಷಲ್​ಗಳ ನಡುವೆ ಫೈಟ್​.. ಸಿಸಿಟಿವಿ ವಿಡಿಯೋ

author img

By

Published : Aug 12, 2021, 3:07 PM IST

Updated : Aug 12, 2021, 3:17 PM IST

ರಾಜ್ಯಸಭೆಯಲ್ಲಿ ನಡೆದಿರುವ ಗಲಾಟೆ ದೃಶ್ಯಾವಳಿ ರಿಲೀಸ್ ಮಾಡಿರುವ ಕೇಂದ್ರ ಸರ್ಕಾರ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದೆ.

Women MP
Women MP

ನವದೆಹಲಿ: ಮಾನ್ಸೂನ್​ ಅಧಿವೇಶನ ಆರಂಭಗೊಂಡಾಗಿನಿಂದಲೂ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಸರಿಯಾಗಿ ಕಲಾಪ ನಡೆದಿಲ್ಲ. ನಿತ್ಯ ವಿಪಕ್ಷಗಳು ಪೆಗಾಸಸ್​, ಕೃಷಿ ಕಾಯ್ದೆ, ಪೆಟ್ರೋಲ್​​-ಡಿಸೇಲ್​ ಬೆಲೆ ಏರಿಕೆ ವಿಚಾರವನ್ನಿಟ್ಟುಕೊಂಡು ಗದ್ದಲ ನಡೆಸಿದ್ದು, ಪ್ರತಿಭಟನೆ ಸಹ ನಡೆಸಿವೆ. ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದರ ಬೆನ್ನಲ್ಲೇ ಮಹತ್ವದ ವಿಡಿಯೋವೊಂದನ್ನ ರಿಲೀಸ್ ಮಾಡಿದೆ.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಂಸದರು - ಮಾರ್ಷಲ್​ಗಳ ನಡುವೆ ಫೈಟ್

ರಾಜ್ಯಸಭೆಯಲ್ಲಿ ಮಹಿಳಾ ಸಂಸದೆಯೊಬ್ಬಳನ್ನು ಅಲ್ಲಿನ ಮಾರ್ಷಲ್​ಗಳು ನಿಂದಿಸಿದ್ದಾರೆಂಬ ಪ್ರತಿಪಕ್ಷಗಳು ಆರೋಪ ಮಾಡಿದ್ದು, ಇದನ್ನ ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ಘಟನೆಯ ಸಿಸಿಟಿವಿ ದೃಶ್ಯ ರಿಲೀಸ್ ಮಾಡಿದೆ. ಇದರಲ್ಲಿ ಮಾರ್ಷಲ್​ಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಪ್ಪು ಮಾಹಿತಿ ಹರಡುತ್ತಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​​ ಜೋಶಿ ಹೇಳಿದ್ದಾರೆ.

ಸುಮಾರು 2.5 ನಿಮಿಷಗಳ ವಿಡಿಯೋ ಇದೀಗ ರಿಲೀಸ್ ಆಗಿದ್ದು, ಇದರಲ್ಲಿ ಪ್ರತಿಪಕ್ಷ ಸಂಸದರು ಹಾಗೂ ಮಾರ್ಷಲ್​ಗಳ ನುಡುವೆ ಗಲಾಟೆ ನಡೆದಿದೆ. ಇದೇ ವಿಷಯವಾಗಿ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಸದನದ ಹೊರಗೆ ಪ್ರತಿಭಟನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದರು.

ಇದನ್ನೂ ಓದಿರಿ: ಸದನದಲ್ಲಿ ನಡೆದ ಘಟನೆ ನೆನೆದು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಭಾವುಕ

ಇದರ ಬಗ್ಗೆ ಮಾತನಾಡಿರುವ ಎನ್​​ಸಿಪಿ ನಾಯಕ ಶರದ್ ಪವಾರ್, ರಾಜ್ಯಸಭೆಯಲ್ಲಿ ವಿಮಾ ವ್ಯವಹಾರಗಳ ಮಸೂದೆ ಅಂಗೀಕಾರದ ವೇಳೆ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ, ಸಂಸದರನ್ನ ನಿಯಂತ್ರಣ ಮಾಡಲು 40ಕ್ಕೂ ಹೆಚ್ಚು ಜನರನ್ನ ಹೊರಗಿನಿಂದ ಕರೆತರಲಾಗಿತ್ತು. ನನ್ನ 55 ವರ್ಷಗಳ ಸಂಸತ್ತಿನ ವೃತ್ತಿ ಜೀವನದಲ್ಲಿ ಈ ರೀತಿಯ ಘಟನೆ ನೋಡಿಲ್ಲ. ಸದನದಲ್ಲಿ ಮಹಿಳಾ ಸಂಸದೆ ಮೇಲೆ ಈ ರೀತಿಯಾಗಿ ಹಲ್ಲೆ ನಡೆಸಿರುವುದು ನಿಜಕ್ಕೂ ಬೇಸರದ ಸಂಗತಿ. ಇದು ನನಗೆ ನೋವು ತಂದಿದೆ ಎಂದಿದ್ದರು.

ಮೊನ್ನೆ ಕೂಡ ರಾಜ್ಯಸಭೆ ಕಲಾಪದ ವೇಳೆ ಗದ್ದಲ ನಡೆಸಿದ್ದ ವಿಪಕ್ಷಗಳು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಈ ವೇಳೆ, ಟೇಬಲ್​ ಮೇಲೆ ಹತ್ತಿ ರೂಲ್​ ಬುಕ್​​ ಹರಿದು, ಛೇರ್ಮನ್​​ ಸೀಟ್​ನತ್ತ ಎಸೆದಿದ್ದರು. ಈ ವಿಚಾರವನ್ನ ರಾಜ್ಯಸಭೆ ಕಲಾಪದ ವೇಳೆ ಪ್ರಸ್ತಾಪ ಮಾಡಿದ್ದ ವೆಂಕಯ್ಯ ನಾಯ್ಡು ಆಕ್ರೋಶ ವ್ಯಕ್ತಪಡಿಸಿ, ಬಾವುಕರಾಗಿದ್ದರು. ಸದನದ ಪಾವಿತ್ರ್ಯತೆ ಕಾಪಾಡುವುದು ಸದಸ್ಯರ ಜವಾಬ್ದಾರಿಯಾಗಿದೆ ಎಂದಿದ್ದರು. ಜೊತೆಗೆ ನಾನು ನಿದ್ದೆಯಿಲ್ಲದ ರಾತ್ರಿ ಕಳೆದಿದ್ದೇನೆ ಎಂದಿದ್ದರು.

Last Updated : Aug 12, 2021, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.