ETV Bharat / bharat

ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಿಂಟರ್ ಫೆಸ್ಟ್! ಪ್ರವಾಸಿಗರಿಗೆ ಅವಿಸ್ಮರಣೀಯ ಅನುಭವ

author img

By

Published : Dec 16, 2022, 5:19 PM IST

Updated : Dec 17, 2022, 4:00 PM IST

ಹೈದರಾಬಾದ್‌ನಲ್ಲಿರುವ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ರಾಮೋಜಿ ಫಿಲಂ ಸಿಟಿಯಲ್ಲಿ ವಿಂಟರ್ ಫೆಸ್ಟ್​ ನಡೆಯುತ್ತಿದ್ದು, ಪ್ರವಾಸಿಗರನ್ನು ರಂಜಿಸುತ್ತಿದೆ.

winter-fest-celebration-dot-dot-dot-tourist-frenzy-at-ramoji-film-city
ವಿಂಟರ್ ಫೆಸ್ಟ್... ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರವಾಸಿಗರ ಅವಿಸ್ಮರಣೀಯ ಸಂಭ್ರಮ

ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಿಂಟರ್ ಫೆಸ್ಟ್

ರಾಮೋಜಿ ಫಿಲಂ ಸಿಟಿ(ಹೈದರಾಬಾದ್​): ವಿಶ್ವದ ಅತಿದೊಡ್ಡ ಚಲನಚಿತ್ರ ನಗರಿ 'ರಾಮೋಜಿ ಫಿಲಂ ಸಿಟಿ'ಯಲ್ಲಿ ಈಗ ರಾಮೋಜಿ ವಿಂಟರ್ ಫೆಸ್ಟ್ ಆರಂಭವಾಗಿದೆ. ಪ್ರಕೃತಿ ಸೌಂದರ್ಯದ ನಡುವೆ ವಿಶೇಷ ಮನರಂಜನಾ ಕಾರ್ಯಕ್ರಮಗಳೊಂದಿಗೆ ಡಿಸೆಂಬರ್​ 15ರಿಂದ ವಿಂಟರ್ ಫೆಸ್ಟ್‌ ಶುರುವಾಗಿದ್ದು, ಮೊದಲ ದಿನ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು.

ಹೊಸ ವರ್ಷದ ಹೊಸ್ತಿಲಲ್ಲಿ ವಿಂಟರ್ ಫೆಸ್ಟ್​​ ಪ್ರವಾಸಿಗರನ್ನು ರಂಜಿಸುತ್ತಿದೆ. ಇದರ ಭಾಗವಾಗಿ ಆಯೋಜಿಸಲಾದ ಅಂತಾರಾಷ್ಟ್ರೀಯ ಮಟ್ಟದ ಮನರಂಜನಾ ಕಾರ್ಯಕ್ರಮಗಳೊಂದಿಗೆ ರಾಮೋಜಿ ಫಿಲ್ಮ್ ಸಿಟಿ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಚಳಿಯ ವಾತಾವರಣದಲ್ಲಿ ಅತ್ಯಾಕರ್ಷಕ ಮನರಂಜನೆ ಕಾರ್ಯಕ್ರಮಗಳ ಸಂಭ್ರಮದಲ್ಲಿ ಪ್ರವಾಸಿಗರು ಮಿಂದೇಳುತ್ತಿದ್ದಾರೆ.

ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರೂ ಫಿಲ್ಮ್‌ ಸಿಟಿಯ ಅದ್ಭುತಗಳ ಆನಂದದ ಸವಿಯನ್ನು ಅನುಭವಿಸುತ್ತಿದ್ದಾರೆ. ಆಕರ್ಷಕ ವಿದ್ಯುದ್ದೀಪಗಳಿಂದ ಝಗಮಗಿಸುವ ಬೆಳಕಿನಲ್ಲಿ ಚಿತ್ರಲೋಕವನ್ನೇ ಕಣ್ಮುಂದೆ ಸಾಕ್ಷಾತ್ಕರಿಸುವಂತಿದ್ದು, ಪ್ರತಿ ಹೆಜ್ಜೆಯಲ್ಲೂ ಪ್ರವಾಸಿಗರಿಗೆ ಸಂತೋಷದ ರಸದೌತಣವನ್ನೇ ಉಣಬಡಿಸಲಾಗುತ್ತಿದೆ. ಬಗೆ ಬಗೆಯ ಹಾಡುಗಳಿಗೆ ಕಲಾವಿದರೊಂದಿಗೆ ಹೆಜ್ಜೆ ಹಾಕುತ್ತಾ ಪ್ರವಾಸಿಗರು ಖುಷಿಪಡುತ್ತಿದ್ದಾರೆ.

ಜನವರಿ 29ರವರೆಗೆ ಮುಂದುವರಿಯುವ ವಿಂಟರ್ ಫೆಸ್ಟ್​ ಅಂತ್ಯವಿಲ್ಲದ ಸಂತೋಷ ಅಪರೂಪದ ಕ್ಷಣಗಳಿಗಾಗಿ ನಿಮ್ಮನ್ನು ಸ್ವಾಗತಿಸುತ್ತಿದೆ. ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಸಂಭ್ರಮಾಚರಣೆ ನಡೆಯುತ್ತಿದ್ದು, ಪ್ರವಾಸಿಗರು ಕುಟುಂಬಸಮೇತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಚಳಿಗಾಲ ಮತ್ತು ಹೊಸ ವರ್ಷವನ್ನು ಸಂಭ್ರಮಿಸಲು ವಿಂಟರ್ ಫೆಸ್ಟ್​ ಮತ್ತು ರಾಮೋಜಿ ಫಿಲಂ ಸಿಟಿ ಅತ್ಯದ್ಭುತ ತಾಣವಾಗಿದೆ.

ವಿಂಟರ್ ಫೆಸ್ಟ್​ನಲ್ಲಿ ಭಾಗವಹಿಸಲು​ ಬಯಸುವವರಿಗೆ ಒಂದು ದಿನದ ಪ್ರವಾಸ, ಸಂಜೆ ಮತ್ತು ಇತರ ಪ್ಯಾಕೇಜ್‌ಗಳ ವ್ಯವಸ್ಥೆ ಇದೆ. ಫಿಲ್ಮ್ ಸಿಟಿಯು ಆಕರ್ಷಕ ರಜಾ ದಿನದ ಪ್ಯಾಕೇಜ್‌ಗಳನ್ನೂ ನೀಡುತ್ತಿದೆ. ರಾಮೋಜಿ ವಿಂಟರ್ ಫೆಸ್ಟ್ ಅಂಗವಾಗಿ ಹೈದರಾಬಾದ್‌ನಲ್ಲಿ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಆಯೋಜಿಸಲಾದ ದೀಪೋತ್ಸವ ಮತ್ತು ಬಾರ್ಬೆಕ್ಯು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಕಾರ್ನಿವಲ್ ಮೆರವಣಿಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮನರಂಜನೆಗಳ ನಡುವೆ ಸಂಜೆಯ ಹೊತ್ತು ಲೈವ್ ಡಿಜೆ ಆನಂದಿಸಲು ವಿಶೇಷ ವ್ಯವಸ್ಥೆಯಾಗಿದೆ. ಇದಷ್ಟೇ ಅಲ್ಲ, ಬರ್ಡ್ ಪಾರ್ಕ್, ಬಟರ್‌ಫ್ಲೈ ಪಾರ್ಕ್, ರಾಮೋಜಿ ಅಡ್ವೆಂಚರ್ ಸಾಹಸ್ ಮತ್ತು ಬಾಹುಬಲಿ ಸೆಟ್‌ಗಳೆಲ್ಲ ಫಿಲ್ಮ್‌ ಸಿಟಿಯ ನಿಮ್ಮ ಭೇಟಿಯನ್ನು ಅವಿಸ್ಮರಣೀಯಗೊಳಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ www.ramojifilmcity.com ಗೆ ಲಾಗ್​ ಇನ್​ ಆಗಿ ಅಥವಾ ಟೋಲ್‌​ ಫ್ರೀ ನಂಬರ್​ 1800 120 2999ಗೆ ಕರೆ ಮಾಡಿ.

ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಉತ್ತೇಜನ: ರಾಮೋಜಿ ಫಿಲಂ ಸಿಟಿ ಜೊತೆ ಭಾರತೀಯ ರೈಲ್ವೆ ಮಹತ್ವದ ಒಪ್ಪಂದ

Last Updated :Dec 17, 2022, 4:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.