ETV Bharat / bharat

ಬಕ್ರಿದ್ ವೇಳೆ ಕೋವಿಡ್ ಹರಡಿದ್ರೆ ಕಠಿಣ ಕ್ರಮ: ಕೇರಳ ಸರ್ಕಾರಕ್ಕೆ ಸುಪ್ರೀಂ ಎಚ್ಚರಿಕೆ

author img

By

Published : Jul 20, 2021, 4:47 PM IST

ಹಬ್ಬಗಳಿಗಾಗಿ ಲಾಕ್​ಡೌನ್ ನಿರ್ಬಂಧಗಳನ್ನು ತೆಗೆದುಹಾಕುವುದು ಅತ್ಯಂತ ಆತಂಕಕಾರಿ ಎಂದಿರುವ ಸುಪ್ರೀಂಕೋರ್ಟ್, ಒತ್ತಡ ಗುಂಪುಗಳ ಮೂಲಭೂತ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಅಭಿಪ್ರಾಯಪಟ್ಟಿದೆ.

Bakrid relaxation: Will take action if Covid spreads, SC warns Kerala govt
ಬಕ್ರಿದ್ ವೇಳೆ ಕೋವಿಡ್ ಹರಡಿದ್ರೆ ಕಠಿಣ ಕ್ರಮ: ಕೇರಳ ಸರ್ಕಾರಕ್ಕೆ ಸುಪ್ರೀಂ ಎಚ್ಚರಿಕೆ

ನವದೆಹಲಿ: ಬಕ್ರಿದ್​ ಆಚರಣೆಗಾಗಿ ಮೂರು ದಿನಗಳ ಕಾಲ ಲಾಕ್​ಡೌನ್ ಸಡಿಲಿಕೆ ಮಾಡಿರುವ ಕೇರಳ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಬಕ್ರಿದ್ ಆಚರಣೆ ವೇಳೆ ಕೋವಿಡ್ ಹರಡಿದರೆ ನ್ಯಾಯಾಲಯದ ಮೊರೆಹೋಗಬಹುದು. ನ್ಯಾಯಾಲಯವು ರಾಜ್ಯ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಮತ್ತು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು, ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಿ, ಈ ರೀತಿಯ ಎಚ್ಚರಿಕೆಯನ್ನು ರವಾನಿಸಿದೆ.

ಹಬ್ಬಗಳಿಗಾಗಿ ಲಾಕ್​ಡೌನ್ ನಿರ್ಬಂಧಗಳನ್ನು ತೆಗೆದುಹಾಕುವುದು ಅತ್ಯಂತ ಆತಂಕಕಾರಿ ಎಂದಿರುವ ಸುಪ್ರೀಂಕೋರ್ಟ್, ಒತ್ತಡ ಗುಂಪುಗಳ ಮೂಲಭೂತ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಅಭಿಪ್ರಾಯಪಟ್ಟಿದೆ.

ಜುಲೈ 17ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಧ್ಯಮಗೋಷ್ಟಿಯೊಂದಲ್ಲಿ ಬಕ್ರಿದ್ ಹಬ್ಬಕ್ಕಾಗಿ ಮೂರು ದಿನಗಳ ಲಾಕ್​ಡೌನ್ ಸಡಿಲಿಕೆಯನ್ನು ಘೋಷಣೆ ಮಾಡಿದ್ದರು. ಜವಳಿ, ಪಾದರಕ್ಷೆಗಳ ಅಂಗಡಿಗಳು, ಆಭರಣಗಳು, ಅಲಂಕಾರಿಕ ಅಂಗಡಿಗಳು, ಮನೆ ಮಾರಾಟ ಮಾಡುವ ಅಂಗಡಿಗಳು ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ವ್ಯವಹಾರಕ್ಕೆ ಮುಕ್ತವಾಗಲಿವೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಬದಲಾದ್ರೇ ನಾವ್‌ ರೆಡಿ, ನಾವ್‌ ರೆಡಿ ಅಂತಾವ್ರೇ ಧಾರವಾಡಿಗರು.. ಪೇಡೆನಗರಿಯ ಸಿಹಿ ಹೆಚ್ಚುತ್ತಾ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.