ETV Bharat / bharat

ಕ್ಯಾನ್ಸರ್​ ಇರುವುದು ಗೊತ್ತಾಗುತ್ತಿದ್ದಂತೆ ಸೂಸೈಡ್ ನೋಟ್​ ಬರೆದಿಟ್ಟು, ನೇಣಿಗೆ ಶರಣಾದ ದಂಪತಿ

author img

By

Published : Apr 30, 2022, 9:10 PM IST

ಕಳೆದ ಮೂರು ವರ್ಷಗಳ ಹಿಂದೆ ನೂರಾರು ಕನಸು ಕಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿವೊಂದು ಇದೀಗ ಸಾವಿನಲ್ಲೂ ಒಂದಾಗಿದೆ.

wife wrote a letter of suicide after her husband diagnosed cancer
wife wrote a letter of suicide after her husband diagnosed cancer

ನೋಯ್ಡಾ(ಉತ್ತರ ಪ್ರದೇಶ): ಕಳೆದ ಮೂರು ವರ್ಷಗಳ ಹಿಂದೆ ಒಟ್ಟಿಗೆ ಬಾಳುವುದಾಗಿ ಪ್ರತಿಜ್ಞೆ ಮಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪತಿ-ಪತ್ನಿ ನೇಣು ಬಿಗಿದುಕೊಂಡು ದುರಂತ ಅಂತ್ಯ ಕಂಡಿರುವ ಹೃದಯವಿದ್ರಾವಕ ಘಟನೆ ನೋಯ್ಡಾದ ಸೆಕ್ಟರ್​​ 22 ಪ್ರದೇಶದಲ್ಲಿ ನಡೆದಿದೆ.

ನೋಯ್ಡಾದ ಸೆಕ್ಟರ್​​ 22 ಪ್ರದೇಶದಲ್ಲಿ ಕಳೆದ 8 ವರ್ಷಗಳಿಂದ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ 34 ವರ್ಷದ ಅರುಣ್​​ ಮೂರು ವರ್ಷಗಳ ಹಿಂದೆ ಶಶಿಕಲಾ ಎಂಬ ಹುಡುಗಿ ಜೊತೆ ಮದುವೆ ಮಾಡಿಕೊಂಡಿದ್ದರು. ಮೂಲತಃ ಸೋನಭದ್ರ ನಿವಾಸಿಯಾಗಿದ್ದ ಅರುಣ್​, ಖಾಸಗಿ ಕಂಪನಿವೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡ್ತಿದ್ದರು. ಇತ್ತೀಚೆಗೆ ಅರುಣ್​ ಆರೋಗ್ಯದಲ್ಲಿ ಏರುಪೇರು ಕಂಡುಬಂದಿರುವ ಕಾರಣ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಕೊನೆಯ ಹಂತದ ಕ್ಯಾನ್ಸರ್​ ಇರುವುದು ಗೊತ್ತಾಗಿದೆ. ಹೀಗಾಗಿ, ಅರುಣ್​​-ಶಶಿಕಲಾ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದಾರೆ. ಇದರ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗುವ ಬಗ್ಗೆ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ಪಿಕಪ್​ ವಾಹನಕ್ಕೆ ಡಿಕ್ಕಿ ಹೊಡೆದ ಬೈಕ್​.. ತೂರಿಬಿದ್ದು ಕಾರ್​ಗೆ ಡಿಕ್ಕಿ ಹೊಡೆದ ತಾಯಿ-ಮಗ!

ಅರುಣ್​ಗೆ ಕ್ಯಾನ್ಸರ್​ ಇರುವುದು ಗೊತ್ತಾಗುತ್ತಿದ್ದಂತೆ ಸೂಸೈಡ್​​ ನೋಟ್​ ಬರೆದಿಟ್ಟಿರುವ ಇವರು, ನೇಣಿಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ತಾವೇ ಕಾರಣ ಎಂಬುದನ್ನ ಅದರೊಳಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ತಮ್ಮ ಕುಟುಂಬಸ್ಥರ ಮೊಬೈಲ್​ ನಂಬರ್​ ಬರೆದಿಟ್ಟಿದ್ದು, ಅವರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನೋಯ್ಡಾ ಎಸಿಪಿ ರಜನೀಶ್ ವರ್ಮಾ, ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಸೂಸೈಡ್​ ನೋಟ್​ ಸಿಕ್ಕಿದೆ. ಇದರಲ್ಲಿ ಗಂಡನಿಗೆ ಕ್ಯಾನ್ಸರ್ ಇರುವ ಬಗ್ಗೆ ತಿಳಿಸಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖ ಮಾಡಿರುವ ಮೊಬೈಲ್ ನಂಬರ್​ಗೆ ಫೋನ್ ಮಾಡಿ, ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.