ETV Bharat / bharat

ಸುವೇಂದು ರಾಜೀನಾಮೆ ತಿರಸ್ಕರಿಸಿದ ವಿಧಾನಸಭೆ ಸ್ಪೀಕರ್!

author img

By

Published : Dec 18, 2020, 5:38 PM IST

ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿರುವ ತೃಣಮೂಲ ಕಾಂಗ್ರೆಸ್ ಬಂಡಾಯ ನಾಯಕ ಸುವೇಂದು ಅಧಿಕಾರಿಯ ರಾಜೀನಾಮೆ ಇನ್ನೂ ಅಂಗೀಕಾರಗೊಂಡಿಲ್ಲ. ಹಾಗಾಗಿ ಅವರು ಇನ್ನೂ ತೃಣಮೂಲ ಶಾಸಕರಾಗಿ ಉಳಿದಿದ್ದಾರೆ ಎನ್ನಲಾಗುತ್ತಿದೆ.

West Bengal Assembly Speaker rejects resignation of Suvendu Adhikari
ಸುವೇಂದು ಅಧಿಕಾರಿ

ಕೋಲ್ಕತಾ: ಕೆಲವು ಕಾನೂನಿನ ಅಡತಡೆ ಹಾಗೂ ನ್ಯೂನತೆಗಳಿಂದಾಗಿ ತೃಣಮೂಲ ಕಾಂಗ್ರೆಸ್ ಶಾಸಕ ಸುವೇಂದು ಅಧಿಕಾರಿಯ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ ಎಂದು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.

ಅವರ ರಾಜೀನಾಮೆಯನ್ನು ಅಂಗೀಕರಿಸುವವರೆಗೂ ಅಧಿಕಾರಿಯು ತೃಣಮೂಲ ಶಾಸಕರಾಗಿ ಉಳಿಯುತ್ತಾರೆ. ರಾಜೀನಾಮೆಗೂ ಕೆಲವು ಕಾನೂನು ಕಟ್ಟುಪಾಡುಗಳಿವೆ. ಹೀಗೆ ಸಲ್ಲಿಸಬೇಕೆಂಬ ಸಂವಿಧಾನದ ನಿಬಂಧನೆಗಳಿವೆ. ಹಾಗಾಗಿ ಕೆಲವು ನ್ಯೂನತೆಗಳಿಂದಾಗಿ ಸುವೇಂದು ಅಧಿಕಾರಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ ಎಂದು ಸ್ಪೀಕರ್ ಬಿಮನ್ ಬ್ಯಾನರ್ಜಿ ಕೆಲವು ಕಾರಣಗಳನ್ನು ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

West Bengal Assembly Speaker rejects resignation of Suvendu Adhikari
ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ

ರಾಜೀನಾಮೆಯಲ್ಲಿ ದಿನಾಂಕವನ್ನು ಸ್ಪಷ್ಟಪಡಿಸಲಾಗಿಲ್ಲ. ಹಾಗಾಗಿ ರಾಜೀನಾಮೆ ಅಂಗೀಕಾರ ಆಗುವವರಿಗೂ ಅವರು ತೃಣಮೂಲ ಶಾಸಕರಾಗಿ ಉಳಿಯುತ್ತಾರೆ ಎಂದಿದ್ದಾರೆ. ಇದೇ ವೇಳೆ ಡಿಸೆಂಬರ್ 21 ರಂದು ನಡೆಯುವ ಅಧಿವೇಶಕ್ಕೆ ಹಾಜರಾಗುವಂತೆಯೂ ಸ್ಪೀಕರ್ ಅಧಿಕಾರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ದೀದಿಗೆ ಹಿನ್ನಡೆ: ರಾಜೀನಾಮೆ ಕೊಟ್ಟ ಸುವೇಂದು ಅಧಿಕಾರಿ ಕಮಲ ಹಿಡೀತಾರಾ?

ಈ ಹಿಂದೆ ಅಧಿಕಾರಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಪತ್ರ ಬರೆದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮುನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದರು. ಸುವೇಂದು ಅವರ ರಾಜೀನಾಮೆಯ ಬಳಿಕವೂ ತೃಣಮೂಲ ಕಾಂಗ್ರೆಸ್​ನಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ.

ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದಲ್ಲಿ ಮುಂದುವರೆಯುತ್ತಿರುವ ರಾಜೀನಾಮೆ ಪರ್ವದಿಂದ ಕೊಂಚ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.