ETV Bharat / bharat

ಈ ವಾರದ ನಿಮ್ಮ ಭವಿಷ್ಯ: ಈ ರಾಶಿಯವರಿಗೆ ಒಲಿದಿದೆ ಅದೃಷ್ಟ!

author img

By

Published : Aug 15, 2021, 8:49 AM IST

ಈ ವಾರ ಯಾವ ರಾಶಿಯವರ ಭವಿಷ್ಯ ಹೇಗಿದೆ ಅಂತಾ ನೋಡಿ..

ವಾರದ ನಿಮ್ಮ ಭವಿಷ್ಯ
Weekly Horoscope

ಮೇಷ: ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ನೀವು ಹೊರ ಹೋಗಿ ಸಾಕಷ್ಟು ಪ್ರಯಾಣ ಮಾಡಲಿದ್ದೀರಿ. ಸಾಕಷ್ಟು ವಿಹಾರ ಹಾಗೂ ಪ್ರವಾಸಗಳನ್ನು ಮಾಡಲಿದ್ದೀರಿ. ವ್ಯವಹಾರದಲ್ಲಿಯೂ ಹೊಸ ವಿಚಾರಗಳು ನಿಮಗೆ ಹೊಳೆಯಲಿವೆ. ನೀವು ಸುತ್ತಲಿನ ಜನರಿಗೆ ಸಾಕಷ್ಟು ಉತ್ಸಾಹದಿಂದ ಸಹಾಯ ಮಾಡಲಿದ್ದೀರಿ. ಇದು ಇತರರ ದೃಷ್ಟಿಯಲ್ಲಿ ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಪ್ರೇಮಿಗಳು ಎಚ್ಚರಿಕೆಯಿಂದ ಮಾತನಾಡಬೇಕು. ಏಕೆಂದರೆ ಸಣ್ಣದಾದ ಮತ್ತು ತರವಲ್ಲದ ಯಾವುದಾದರೂ ಮಾತು ಪರಿಸ್ಥಿತಿಯನ್ನು ಬಿಗಡಾಯಿಸಲಿದ್ದು, ಕಲಹಕ್ಕೆ ಕಾರಣವಾಗಬಹುದು. ಆದರೂ, ಕುಟುಂಬದಲ್ಲಿ ಯಾರಾದರೂ ಹಿರಿಯರ ಆರೋಗ್ಯದಲ್ಲಿ ಕುಸಿತ ಉಂಟಾಗಲಿದ್ದು, ಇದು ನಿಮ್ಮ ಆತಂಕಕ್ಕೆ ಕಾರಣವಾಗಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ.

ವೃಷಭ: ನೀವು ಸವಾಲಿನ ಸುಳಿಯಲ್ಲಿ ಇರುವಂತೆ ನಿಮಗೆ ಭಾಸವಾಗಬಹುದು. ಇಂದು ನಿಮಗೆ ಆತಂಕ ಕಾಡಬಹುದು. ಇದರಿಂದ ಹೊರಬರಲು ನಿಮಗೆ ಸ್ವಲ್ಪ ಸಮಯ ಬೇಕಾಗಬಹುದು. ಇದು ನಿಮ್ಮ ಕೆಲಸದ ಗತಿಯನ್ನು ನಿಧಾನಿಸಬಹುದು. ಹೀಗಾಗಿ ಆತಂಕವನ್ನು ನಿವಾರಿಸಲು ಯತ್ನಿಸಿ. ಉದ್ಯೋಗದಲ್ಲಿರುವವರು ಹೆಚ್ಚು ಜಾಗರೂಕತೆಯಿಂದ ಕೆಲಸ ಮಾಡಬೇಕಾದೀತು. ಏಕೆಂದರೆ ಆತುರದಲ್ಲಿ ನೀವು ಏನಾದರೂ ತಪ್ಪುಗಳನ್ನು ಮಾಡುವ ಸಂಭವವಿದೆ. ನಿಮ್ಮ ಹಿರಿಯರು ನಿಮ್ಮ ಕೆಲಸದ ಮೇಲೆ ಕಣ್ಣಿಡುತ್ತಾರೆ. ನೀವು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ನಿಮ್ಮ ಪ್ರಣಯ ಬದುಕಿಗೆ ಇದು ಉತ್ತಮ ವಾರ. ನೀವು ಒಂದಷ್ಟು ಪ್ರಣಯಭರಿತ ಕ್ಷಣಗಳನ್ನು ಅನುಭವಿಸಲಿದ್ದೀರಿ. ವಾರಾಂತ್ಯವನ್ನು ನಿಮ್ಮ ಪ್ರೇಮ ಸಂಗಾತಿಯೊಂದಿಗೆ ನೀವು ಕಳೆಯಲಿದ್ದೀರಿ. ನಿಮ್ಮ ವೈವಾಹಿಕ ಜೀವನದಲ್ಲಿ ಸಾಕಷ್ಟು ಸಂತೃಪ್ತಿ ಸಿಗಲಿದೆ. ನೀವು ಸವಾಲುಗಳನ್ನು ಸಾಕಷ್ಟು ಸಾಮರ್ಥ್ಯದಿಂದ ಎದುರಿಸಲಿದ್ದೀರಿ ಮತ್ತು ವಾರಾಂತ್ಯವು ನಿಮ್ಮ ಪಾಲಿಗೆ ಚೆನ್ನಾಗಿರಲಿದೆ.

ಮಿಥುನ : ಈ ವಾರದಲ್ಲಿ ನೀವು ಆಶಾದಾಯಕ ಬೆಳವಣಿಗೆಗಳನ್ನು ಕಾಣಲಿದ್ದೀರಿ. ವಾರದ ಆರಂಭದಲ್ಲಿ ನೀವು ಹೊಸ ವ್ಯವಹಾರವನ್ನು ನಡೆಸಲಿದ್ದೀರಿ. ಇದು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದ್ದು, ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವೆಚ್ಚಗಳು ಎಂದಿನಂತೆ ಮುಂದುವರಿಯಲಿವೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೊಸ ಸಾಧನವನ್ನು ನೀವು ಖರೀದಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರ ಜೊತೆ ಹಾಸ್ಯಭರಿತ ವೀಡಿಯೊಗಳನ್ನು ನೋಡಲಿದ್ದೀರಿ ಹಾಗೂ ಅವರೊಂದಿಗೆ ಒಳ್ಳೆಯ ಸಮಯವನ್ನು ಕಳೆಯಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಈ ವಾರದಲ್ಲಿ ವ್ಯಾಪಾರೋದ್ಯಮಿಗಳು ಉತ್ತಮ ಸಮಯವನ್ನು ಆನಂದಿಸಲಿದ್ದಾರೆ. ನಿಮ್ಮ ಪ್ರೇಮದ ಬದುಕಿನಲ್ಲಿ ನೀವು ಶಾಂತಿ ಹಾಗೂ ಸಾಮರಸ್ಯವನ್ನು ಆನಂದಿಸಲಿದ್ದೀರಿ ಹಾಗೂ ನಿಮ್ಮ ಪ್ರೇಮ ಸಂಗಾತಿಯು ನಿಮಗೆ ಒಳ್ಳೆಯ ವಸ್ತ್ರ ಅಥವಾ ಆಭರಣ ನೀಡಬಹುದು. ವೈವಾಹಿಕ ಜೋಡಿಗಳಿಗೂ ಇದು ಉತ್ತಮ ಕಾಲ ಹಾಗೂ ಕುಟುಂಬದಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಕುಟುಂಬದ ಎಳೆಯ ಸದಸ್ಯರಿಗೆ ಇದು ಉತ್ತಮ ಕಾಲ ಹಾಗೂ ನಿಮ್ಮ ಕೆಲಸದಲ್ಲಿ ನೀವು ಪ್ರಗತಿ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಶಿಕ್ಷಣದಲ್ಲಿ ಇರುವ ಅಡೆತಡೆಗಳು ನಿವಾರಣೆಯಾಗಿದ್ದು, ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರವಲ್ಲ.

ಕರ್ಕಾಟಕ: ವಾರದ ಆರಂಭದಲ್ಲಿ ನಿಮ್ಮ ಪ್ರೇಮ ಸಂಗಾತಿಗೆ ನಿಮ್ಮ ಕುರಿತು ಅತೃಪ್ತಿ ಇದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಏಕೆಂದರೆ ನೀವು ನಿಮ್ಮ ವೃತ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೀರಿ. ಹೀಗಾಗಿ ನೀವು ನಿಮ್ಮ ಕುಟುಂಬದ ಸದಸ್ಯರಿಗೆ ಸಾಕಷ್ಟು ಸಮಯವನ್ನು ನೀಡುತ್ತಿಲ್ಲ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಸಂಬಂಧದಲ್ಲಿ ಅಂತರ ಹೆಚ್ಚಿದೆ ಎಂದು ನಿಮಗೆ ಭಾಸವಾಗಬಹುದು. ವಾರದ ಮಧ್ಯ ಭಾಗದಲ್ಲಿ, ನೀವು ನಿಮ್ಮ ಜೀವನ ಸಂಗಾತಿಯತ್ತ ಒಲವನ್ನು ಬೆಳೆಸಿಕೊಳ್ಳುತ್ತೀರಿ. ನೀವು ಯಾವಾಗಲೂ ಇತರರಿಗೆ ಸಹಾಯ ಮಾಡುತ್ತೀರಿ. ಅವರು ಯಾವಾಗಲೂ ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ವಾರದ ಮಧ್ಯಭಾಗದಲ್ಲಿ, ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಏರುಪೇರು ಅನುಭವಿಸಲಿದ್ದೀರಿ. ಈ ವಾರದಲ್ಲಿ ನಿಮಗೆ ಆಯಾಸ ಮತ್ತು ಒತ್ತಡ ಉಂಟಾಗಬಹುದು. ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರಾಂತ್ಯದಲ್ಲಿ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗಲಿದೆ. ನೀವು ಹೊಸ ಗೆಳೆಯನನ್ನು ಪಡೆಯಲಿದ್ದೀರಿ. ಇದು ನಿಮ್ಮಲ್ಲಿ ಸಂತೃಪ್ತಿ ಮತ್ತು ಸುಭದ್ರತೆಯ ಭಾವನೆಯನ್ನು ಹುಟ್ಟು ಹಾಕಲಿದೆ. ನಿಮ್ಮ ಹಣಕಾಸು ಸ್ಥಿತಿ ಚೆನ್ನಾಗಿರಲಿದೆ. ಆದರೆ ಈ ವಾರದಲ್ಲಿ ಯಾರಿಗೂ ಸಾಲ ನೀಡಬೇಡಿ.

ಸಿಂಹ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ವಾರದ ಪ್ರಾರಂಭದಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ಈ ಪ್ರವಾಸದಲ್ಲಿ ನೀವು ಹೊಸ ಗೆಳೆಯರನ್ನು ಸಂಪಾದಿಸಬಹುದು. ಅವರು ಜೀವನಪರ್ಯಂತ ನಿಮ್ಮ ಗೆಳೆಯರಾಗಲಿದ್ದಾರೆ. ನಿಮ್ಮ ಕುಟುಂಬದ ಎಳೆಯ ಸದಸ್ಯರಿಂದ ನೀವು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯಲಿದ್ದೀರಿ. ನೀವು ನಿಮ್ಮ ಕುಟುಂಬದ ಸದಸ್ಯರ ಸಹಕಾರ ಪಡೆಯಲಿದ್ದೀರಿ. ವಿವಾಹಿತ ಜೋಡಿಗಳು ಒಂದಷ್ಟು ಏರುಪೇರನ್ನು ಅನುಭವಿಸಬಹುದು. ಪ್ರೇಮಿಗಳು ತಮ್ಮ ಪ್ರೇಮ ಸಂಗಾತಿಯ ಆಂತರಿಕ ಭಾವನೆಗಳನ್ನು ಅರಿತುಕೊಳ್ಳಲು ಯತ್ನಿಸಬೇಕು. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ಸಮಯವಾಗಿದೆ. ವ್ಯವಹಾರದಲ್ಲಿ ಒಂದಷ್ಟು ಹೊಸ ವಿಚಾರಗಳು ನಿಮ್ಮ ಮನಸ್ಸಿಗೆ ಬರಲಿದ್ದು, ಇದನ್ನು ನೀವು ಬಳಸಿ ಲಾಭ ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಸಾಧಾರಣ ಕಾಲ. ನಿಮ್ಮ ಕಠಿಣ ಶ್ರಮವನ್ನು ನೀವು ಮುಂದುವರಿಸಬೇಕು ಮತ್ತು ಗಮನವನ್ನು ಕೇಂದ್ರೀಕರಿಸಿ ಹಾಗೂ ಬದ್ಧತೆಯನ್ನು ತೋರಿಸಿ. ನೀವು ಒಳ್ಳೆಯ ಮತ್ತು ರುಚಿಕರ ಆಹಾರವನ್ನು ಆಸ್ವಾದಿಸಬೇಕು. ನೀವು ನಿಮ್ಮ ಕುಟುಂಬದಲ್ಲಿ ಏನಾದರೂ ಒಂದು ಕಾರ್ಯಕ್ರಮವನ್ನು ಆಯೋಜಿಸಲಿದ್ದೀರಿ.

ಕನ್ಯಾ: ಇದು ನಿಮ್ಮ ಪಾಲಿಗೆ ಒಳ್ಳೆಯ ವಾರ. ಆದರೆ ವಾರದ ಆರಂಭವು ಅಷ್ಟೊಂದು ಶುಭಕರವಲ್ಲ. ಯಾವುದಾದರೂ ವಿಚಾರದಲ್ಲಿ ನಿಮಗೆ ಚಿಂತೆ ಕಾಡಬಹುದು. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ಅಧ್ಯಯನದ ಮೇಲೆ ಹೆಚ್ಚು ಗಮನ ನೀಡುವುದಿಲ್ಲ ಹಾಗೂ ನಿಮ್ಮ ವಿರೋಧಿಗಳು ನಿಮಗೆ ತೊಂದರೆ ನೀಡಲಿದ್ದಾರೆ. ನಿಮ್ಮ ಖರ್ಚು ವೆಚ್ಚಗಳಲ್ಲಿ ಒಮ್ಮೆಲೆ ಹೆಚ್ಚಳ ಉಂಟಾಗಲಿದ್ದು, ಇದು ನಿಮ್ಮನ್ನು ಕಷ್ಟಕ್ಕೆ ತಳ್ಳಬಹುದು. ನಿಮ್ಮ ಆದಾಯದಲ್ಲಿ ಇಳಿಕೆ ಉಂಟಾಗಬಹುದು. ಇದು ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಅದೃಷ್ಟವು ನಿಮ್ಮ ಪರವಾಗಿ ಇರಲಿದೆ. ಹೀಗಾಗಿ ಯಾರಾದರೂ ಒಬ್ಬ ವ್ಯಕ್ತಿ ನಿಮ್ಮ ನೆರವಿಗೆ ಬರಲಿದ್ದಾರೆ. ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಅನುಬಂಧವು ಸುಧಾರಿಸಲಿದೆ. ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಬೆಂಬಲಿಸಲಿದ್ದಾರೆ. ಪ್ರಣಯ ಪಕ್ಷಿಗಳಿಗೂ ಇದು ಸಕಾಲ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಜೊತೆ ನಿಲ್ಲಲಿದ್ದಾರೆ. ಪ್ರವಾಸಕ್ಕೆ ಹೋಗಲು ಇದು ಸೂಕ್ತ ಕಾಲವಲ್ಲ.

ತುಲಾ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನೀವು ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು. ಏಕೆಂದರೆ ಕೆಲವು ಸವಾಲುಗಳು ಹೇಗಿರುತ್ತವೆ ಎಂದರೆ ನೀವೇ ಅವುಗಳನ್ನು ಎದುರಿಸಬೇಕಾಗುತ್ತದೆ. ನೀವು ಧೈರ್ಯ ತೋರಬೇಕು. ನಿಮ್ಮ ಕೆಲಸವು ಸರಿಯಾಗಿಯೇ ಮುಂದುವರಿಯಲಿದೆ. ಆದರೆ ಯಾರಾದರೂ ವ್ಯಕ್ತಿಗಳು ನಿಮ್ಮ ವಿರುದ್ಧ ಸುಳ್ಳು ಆರೋಪ ಮಾಡಬಹುದು. ಹೀಗಾಗಿ ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ನಿಮ್ಮ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ನಿಮ್ಮ ಖರ್ಚುವೆಚ್ಚಗಳು ನಿಮ್ಮ ಕೈಮೀರಿ ಹೋಗಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೂ ಹಣಕಾಸಿನ ಸೂಕ್ತ ನಿರ್ವಹಣೆ ಅಗತ್ಯ. ನಿಮ್ಮ ಆರೋಗ್ಯಕ್ಕೂ ಹಾನಿ ಉಂಟಾಗಬಹುದು. ನಿಮ್ಮ ಅಶಿಸ್ತಿನ ದಿನಚರಿ ಇದಕ್ಕೆ ಕಾರಣವೆನಿಸಬಹುದು. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ, ಇದು ತುಂಬಾ ಪ್ರಮುಖ ವಾರ. ನೀವು ನಿಮ್ಮ ಪ್ರೇಮ ಸಂಗಾತಿಯ ಜೊತೆಗೆ ಸಂಬಂಧವನ್ನು ವೃದ್ಧಿಸಲು ಪ್ರಯತ್ನಿಸಲಿದ್ದೀರಿ.

ವೃಶ್ಚಿಕ: ಈ ವಾರ ನಿಮಗೆ ಮಿಶ್ರಫಲ ದೊರೆಯಲಿದೆ. ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಅರಿತುಕೊಳ್ಳಲು ಮತ್ತು ಅವುಗಳನ್ನು ಸರಿಪಡಿಸಲು ನಿಮ್ಮ ಕೆಲಸ ಮತ್ತು ಚಟುವಟಿಕೆಗಳನ್ನು ನೀವು ನಿಯಂತ್ರಿಸಬೇಕು. ಇದು ನಿಮಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ಕೆಲಕಾಲ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಗಳಿಕೆ ಚೆನ್ನಾಗಿರಲಿದೆ. ನೀವು ನಿಮ್ಮ ಕೆಲಸದಲ್ಲಿ ಉತ್ತಮ ಗಳಿಕೆ ಮಾಡಲಿದ್ದೀರಿ. ನಿಮ್ಮ ಗೆಳೆಯರ ಜೊತೆ ಸಮಯ ಕಳೆಯಲಿದ್ದು, ಇದು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ನಿಮ್ಮ ಉದ್ಯೋಗದಲ್ಲಿ ಒಳ್ಳೆಯ ಬೆಳವಣಿಗೆಗಳು ಉಂಟಾಗಲಿವೆ. ನಿಮ್ಮ ಕಠಿಣ ಶ್ರಮವೇ ನಿಮ್ಮ ಪರವಾಗಿ ಮಾತನಾಡಲಿದೆ. ಉದ್ಯೋಗದಲ್ಲಿರುವವರು ಉತ್ತಮ ಸಮಯವನ್ನು ಆನಂದಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ದೊಡ್ಡ ಲಾಭ ಮಾಡಬಹುದು. ವೈವಾಹಿಕ ಜೀವನ ನಡೆಸುವವರು ತಮ್ಮ ಜೀವನ ಸಂಗಾತಿಯಿಂದ ಕೆಲವೊಂದು ಪ್ರಯೋಜನಗಳನ್ನು ಪಡೆಯಬಹುದು. ಪ್ರಣಯ ಜೋಡಿಗಳು ಸಹ ತಮ್ಮ ಸಂಗಾತಿಯ ಜೊತೆ ಉತ್ತಮ ಅನುಬಂಧವನ್ನು ಆನಂದಿಸಲಿದ್ದಾರೆ. ನೀವು ಪ್ರವಾಸಕ್ಕೆ ಹೋಗಲು ಇಚ್ಛಿಸುವುದಾದರೆ, ವಾರದ ಕೊನೆಯ ದಿನಗಳಲ್ಲಿ ಹೋಗುವುದು ಒಳ್ಳೆಯದು.

ಧನು: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿದ್ದು, ಇದು ನಿಮ್ಮ ಆದಾಯವನ್ನು ಹೆಚ್ಚಿಸಲಿದೆ. ನಿಮ್ಮ ಖರ್ಚುವೆಚ್ಚದಲ್ಲಿ ಇಳಿಕೆ ಉಂಟಾಗಲಿದೆ. ಇದು ನಿಮಗೆ ಸಾಕಷ್ಟು ನಿರಾಳತೆಯನ್ನು ನೀಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಹಾಕುವ ಶ್ರಮವು ಯಶಸ್ವಿಯಾಗಲಿದೆ. ಉದ್ಯೋಗದಲ್ಲಿರುವವರಿಗೆ ವರ್ಗಾವಣೆಯಾಗುವ ಸಂಭವವಿದೆ ಹಾಗೂ ಹೊಸ ಸ್ಥಳದಲ್ಲಿ ನೆಲೆಗೊಳ್ಳಲು ನಿಮಗೆ ಕಷ್ಟಕರವಾದೀತು. ವಿವಾಹಿತ ಜೋಡಿಗಳಿಗೆ ಇದು ಉತ್ತಮ ಸಮಯವಾಗಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗಬಹುದು. ಪ್ರಣಯ ಹಕ್ಕಿಗಳು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಒರಟು ಮಾತು ನಿಮ್ಮ ಪ್ರಣಯ ಸಂಗಾತಿಗೆ ನೋವುಂಟು ಮಾಡಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ವಾರದ ಕೊನೆಯ ಕೆಲವು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಕರ: ಈ ವಾರವು ನಿಮಗೆ ಅತ್ಯುತ್ತಮ ಫಲ ತಂದುಕೊಡಲಿದೆ. ನಿಮ್ಮಲ್ಲಿ ದೇಶಪ್ರೇಮ ಜಾಗೃತಗೊಳ್ಳಲಿದೆ ಹಾಗೂ ನೀವು ಮುಕ್ತ ಮನಸ್ಸಿನಿಂದ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ಕೆಲಸದಲ್ಲಿರುವವರು ಸಂಪೂರ್ಣವಾಗಿ ತಮ್ಮ ಕೆಲಸದ ಮೇಲೆ ಗಮನ ಹರಿಸಲಿದ್ದಾರೆ ಹಾಗೂ ಪ್ರಾಮಾಣಿಕ ಉದ್ಯೋಗಿ ಮತ್ತು ಜವಾಬ್ದಾರಿಯುತ ನಾಗರಿಕನಂತೆ ವರ್ತಿಸಲಿದ್ದಾರೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಅಲ್ಲದೆ, ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮನ್ನು ಇಷ್ಟಪಡಲಿದ್ದಾರೆ. ಇನ್ನೊಂದೆಡೆ, ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆದರೆ ನೀವು ಒಟ್ಟಿಗೆ ಕುಳಿತು ಶಾಂತಿಯುತವಾಗಿ ಮಾತನಾಡಿದರೆ, ಸಮಸ್ಯೆಗೆ ಪರಿಹಾರ ಸಿಗಬಹುದು. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ಪರಸ್ಪರ ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು ಮತ್ತು ಮಾತುಕತೆಯ ಮೂಲಕ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಬೇಕು. ನೀವು ವಿಹಾರಕ್ಕೆ ಹೋಗಬಹುದು. ನೀವು ವಾರದ ಮಧ್ಯಭಾಗದಲ್ಲಿ ಪ್ರಯಾಣಿಸಿದರೆ ಲಾಭ ಗಳಿಸಲಿದ್ದೀರಿ.

ಕುಂಭ: ಸ್ವಾತಂತ್ರ್ಯೋತ್ಸವದ ಜೊತೆಗೆ ಪ್ರಾರಂಭವಾಗುವ ಈ ವಾರದಲ್ಲಿ ನೀವು ಹೆಚ್ಚಿನ ಸ್ವಾತಂತ್ರ್ಯ ಪಡೆಯಲಿದ್ದೀರಿ. ನೀವು ನಿಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದು, ನಿಮ್ಮ ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ. ಇದು ನಿಮ್ಮ ಬದುಕಿನ ಇತರ ಅಂಶಗಳ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಉದ್ಯೋಗ ಸ್ಥಿತಿಯು ಸುಧಾರಣೆಗೊಳ್ಳಲಿದೆ. ನೀವು ನಿಮ್ಮ ಬಾಸ್‌ನ ಮೆಚ್ಚುಗೆ ಗಳಿಸಲಿದ್ದೀರಿ. ನಿಮ್ಮ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತವಾಗಲಿದೆ. ಈ ಸಮಯವು ವ್ಯಾಪಾರೋದ್ಯಮಿಗಳಿಗೆ ಅತ್ಯುತ್ತಮವಾದದ್ದು. ನಿಮ್ಮ ಮಾರ್ಗದರ್ಶನವನ್ನು ಪಾಲಿಸುವವರು ಮತ್ತು ನಿಮ್ಮ ಜೊತೆಗೆ ಕೆಲಸ ಮಾಡುವವರು ಬದುಕಿನಲ್ಲಿ ಮುಂದೆ ಸಾಗಲಿದ್ದಾರೆ. ನಿಮ್ಮ ಕೌಟುಂಬಿಕ ಜೀವನವು ಚೆನ್ನಾಗಿರಲಿದೆ ಹಾಗೂ ಸಂತೋಷದಾಯವಾಗಿರಲಿದೆ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಉತ್ತಮವಾಗಿ ಆನಂದಿಸಲಿದ್ದಾರೆ. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಪ್ರಣಯ ಸಂಗಾತಿಗೆ ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು. ನಿಮಗೆ ಒಪ್ಪಿಗೆ ಇದ್ದಲ್ಲಿ ನೀವು ಮದುವೆಯ ಪ್ರಸ್ತಾಪವನ್ನು ಸಹ ಮುಂದಿಡಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮೀನ: ಈ ವಾರದಲ್ಲಿ ನೀವು ಸಾಧಾರಣ ಫಲಿತಾಂಶ ಪಡೆಯಲಿದ್ದೀರಿ. ಚಿಂತೆ ಮತ್ತು ಆತಂಕದಿಂದ ದೂರವಿರಿ. ನಿಮ್ಮಲ್ಲಿಯೇ ನಂಬಿಕೆ ಇರಿಸಿ. ನೀವು ನಿಮ್ಮ ಮೇಲೆ ನಂಬಿಕೆ ಇರಿಸಿದರೆ ಮಾತ್ರವೇ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇದು ಯಶಸ್ಸಿನ ಮೂಲ ಮಂತ್ರವೂ ಹೌದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನೀವು ಅನಗತ್ಯವಾಗಿ ಪ್ರಯಾಣಿಸಬೇಕಾದೀತು. ಇದು ಅನಗತ್ಯ ಒತ್ತಡಕ್ಕೆ ಕಾರಣವಾಗಬಹುದು. ನಿಮ್ಮ ಆರೋಗ್ಯಕ್ಕೂ ಹಾನಿ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿರುವವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯಬಹುದು. ಇದು ನಿಮಗೆ ಮನ್ನಣೆ ತಂದುಕೊಡಲಿದ್ದು, ನಿಮ್ಮ ಬಾಸ್‌ ಸಹ ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಮ್ಮ ಕೆಲವೊಂದು ತಪ್ಪುಗಳು ನಿಮಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹಾಕಬಹುದು. ನೀವು ನಿಮ್ಮ ಮಹಿಳಾ ಸಹೋದ್ಯೋಗಿಯೊಂದಿಗೆ ಚೆನ್ನಾಗಿ ವರ್ತಿಸಿದರೆ ನಿಮಗೆ ಯಶಸ್ಸು ದೊರೆಯುತ್ತದೆ. ನಿಮ್ಮ ವಿರೋಧಿಗಳನ್ನು ಮಟ್ಟ ಹಾಕಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಪ್ರಣಯ ಸಂಗಾತಿಯು ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ ಮತ್ತು ನಿಮ್ಮ ಬಂಧವನ್ನು ಗಟ್ಟಿಗೊಳಿಸಲು ಯತ್ನಿಸಿ. ವಿವಾಹಿತ ಜೋಡಿಗಳು ಮಧುರ ಕ್ಷಣಗಳನ್ನು ಆನಂದಿಸಲಿದ್ದಾರೆ. ಆದರೂ, ಸಣ್ಣಪುಟ್ಟ ವಾಗ್ವಾದಗಳು ಉಂಟಾಗಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.