ETV Bharat / bharat

Weekly horoscope: ವಾರದ ರಾಶಿ-ಭವಿಷ್ಯ: ಈ ರಾಶಿಯವರು ವಾರದಲ್ಲಿ ಸಾಕಷ್ಟು ಏರುಪೇರು ಕಾಣಬಹುದು, ತುಸು ಎಚ್ಚರ ವಹಿಸಿ

author img

By

Published : Jul 9, 2023, 5:05 AM IST

ವಾರದ ರಾಶಿ ಮತ್ತು ಭವಿಷ್ಯ ಹೀಗಿದೆ...

Weekly horoscope and prediction
Weekly horoscope and prediction

ಮೇಷ: ಈ ವಾರ ನಿಮಗೆ ಸಾಮಾನ್ಯವಾಗಿ ಅನುಕೂಲಕರ ಎನಿಸಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನಕ್ಕೆ ಮೆರುಗು ನೀಡಲು ತಮ್ಮೆಲ್ಲ ಪ್ರಯತ್ನ ಮಾಡಲಿದ್ದಾರೆ. ಜೀವನ ಸಂಗಾತಿಯು ಮಾಡಿದ ಕೆಲಸದಲ್ಲಿ ಲಾಭ ದೊರೆಯಲಿದೆ. ಅಲ್ಲದೆ ಅವರು ಪ್ರಗತಿಯನ್ನು ಸಾಧಿಸಲಿದ್ದಾರೆ. ಪ್ರೇಮ ಜೀವನದಲ್ಲಿ ಪ್ರಣಯವು ನೆಲೆಸಲಿದ್ದು ಬದುಕು ಆನಂದಮಯ ಎನಿಸಲಿದೆ. ವಾರದ ಆರಂಭದಲ್ಲಿ ಸಾಕಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ನೀವು ಹಿನ್ನೆಲೆಗೆ ಸರಿಯಬೇಕು. ಆದಾಯಕ್ಕೆ ಹೋಲಿಸಿದರೆ ಅಧಿಕ ವೆಚ್ಚ ಉಂಟಾಗುವ ಕಾರಣ ಆರ್ಥಿಕ ಸ್ಥಿತಿ ಹದಗೆಡಬಹುದು. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಆದರೂ ನೀವು ಧೈರ್ಯಗುಂದುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಯತ್ನಿಸಲಿದ್ದೀರಿ. ಒಡಹುಟ್ಟಿದವರ ನೆರವು ದೊರೆಯಲಿದೆ. ಆದರೆ ಅವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಈ ವಾರ ಉದ್ಯೋಗಿಗಳಿಗೆ ಅನುಕೂಲಕರ ಎನಿಸಲಿದೆ.

ವೃಷಭ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ಕಂಡುಬರಬಹುದು. ಮನೆಯಲ್ಲಿ ಕೆಲವೊಂದು ಕಾರ್ಯಕ್ರಮಗಳು ನಡೆಯಬಹುದು. ನೀವು ಮನೆಯಲ್ಲಿ ನಿರ್ಮಾಣ ಕೆಲಸವನ್ನು ಮಾಡಿಸಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಪ್ರೀತಿಯು ವೃದ್ದಿಸಲಿದೆ. ಪ್ರೇಮದ ಕುರಿತು ಮಾತನಾಡುವುದಾದರೆ, ನಿಮ್ಮ ಪ್ರೀತಿಯನ್ನು ನೀವು ಗೆಳೆಯರ ಜೊತೆಗೆ ಹಂಚಿಕೊಳ್ಳಲಿದ್ದೀರಿ ಹಾಗೂ ನಿಮ್ಮ ಪ್ರೇಮ ಜೀವನವನ್ನು ಆನಂದಿಸಲಿದ್ದೀರಿ. ಅವರೊಂದಿಗೆ ನೀವು ಸಣ್ಣ ಮಟ್ಟದ ಪ್ರವಾಸಕ್ಕೆ ಹೋಗಬಹುದು. ಎಲ್ಲಿಂದಾದರೂ ಹಠಾತ್‌ ಆಗಿ ನಿಮಗೆ ಹಣ ದೊರೆಯಬಹುದು. ಇದು ನಿಮ್ಮ ಹಣಕಾಸಿನ ಸವಾಲುಗಳನ್ನು ನಿವಾರಿಸಲಿದೆ. ಉದ್ಯೋಗಿಗಳ ಕುರಿತು ಮಾತನಾಡುವುದಾದರೆ, ಈ ವಾರವನ್ನು ನೀವು ವೇಗವಾಗಿ ಕಳೆಯಲಿದ್ದೀರಿ. ನಿಮ್ಮ ಕೆಲಸವನ್ನು ಸಕಾಲದಲ್ಲಿ ಮುಗಿಸಲು ನೀವು ಸಾಕಷ್ಟು ಪ್ರಯತ್ನ ಮಾಡಬೇಕಾಗಬಹುದು. ವ್ಯಾಪಾರಿಗಳಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಈ ವಾರದಲ್ಲಿ ನಿಮ್ಮ ವೆಚ್ಚಗಳಲ್ಲಿ ವಿಪರೀತ ಹೆಚ್ಚಳ ಉಂಟಾಗಲಿದೆ. ಕೆಲಸದ ಸುಧಾರಣೆಗಾಗಿ ನೀವು ಒಂದಷ್ಟು ಹಣ ಖರ್ಚು ಮಾಡಬಹುದು.

ಮಿಥುನ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಾಮರಸ್ಯದಿಂದ ಸಮಯ ಕಳೆಯಲಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಗಾಗಿ ಶಾಪಿಂಗ್‌ ಮಾಡಲಿದ್ದೀರಿ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಸಂಬಂಧದಲ್ಲಿರುವ ಸಮಸ್ಯೆಗಳನ್ನು ನೀವು ಈ ವಾರದಲ್ಲಿ ನಿವಾರಿಸಲಿದ್ದೀರಿ. ಈ ವಾರವು ಗೆಳೆಯರೊಂದಿಗೆ ಮೋಜು ಅನುಭವಿಸುವುದರೊಂದಿಗೆ ಪ್ರಾರಂಭಗೊಳ್ಳಲಿದೆ. ನಿಮ್ಮ ಕೆಲಸದಲ್ಲಿ ನಿಮ್ಮ ಗೆಳೆಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ಅಲ್ಲದೆ ಅವರ ಸಮಸ್ಯೆಯನ್ನು ಬಗೆಹರಿಸುತ್ತಾ ಸಮಯವನ್ನು ಕಳೆಯಲಿದ್ದೀರಿ. ಪ್ರಯಾಣಿಸುವ ಮೂಲಕ ಸಂತಸ ಮತ್ತು ತಾಜಾತನವನ್ನು ಪಡೆಯಲಿದ್ದೀರಿ. ಈ ವಾರ ಉದ್ಯೋಗಿಗಳಿಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ವೇತನ ಹೆಚ್ಚಳದ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಕಡೆಯಿಂದ ಯಾವುದೇ ತಪ್ಪನ್ನು ಮಾಡಬೇಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಯಾರಾದರೂ ಪ್ರಭಾವಿ ವ್ಯಕ್ತಿಯ ನೆರವನ್ನು ಪಡೆಯಲಿದ್ದಾರೆ. ಹೀಗಾಗಿ ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಉಂಟಾಗಬಹುದು.

ಕರ್ಕಾಟಕ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ಅವರ ಜೀವನ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಕಾರಣ ಒಂದಷ್ಟು ಚಿಂತೆ ಅವರನ್ನು ಕಾಡಬಹುದು. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ಈ ವಾರದಲ್ಲಿ ಸಂಬಂಧದಲ್ಲಿ ಪ್ರೇಮ ಮತ್ತು ಆಕರ್ಷಣೆಯು ಹೆಚ್ಚಲಿದೆ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸದಲ್ಲಿ ಅಭದ್ರತಾ ಭಾವನೆ ಕಾಡಲಿದೆ. ಏನಾದರೂ ವೈರುಧ್ಯದ ಕಾರಣ ನೀವು ಕೆಲಸವನ್ನು ಕಳೆದುಕೊಳ್ಳಬಹುದು ಎಂದು ನೀವು ಯೋಚಿಸಬಹುದು. ಆದರೆ ಚಿಂತಿಸಬೇಡಿ. ಇದು ಕ್ಷಣಿಕವಷ್ಟೇ. ನಿಮ್ಮ ಕೆಲಸಕ್ಕೆ ನೀವು ಗಮನ ನೀಡಿ. ನೀವು ಯಶಸ್ಸನ್ನು ಪಡೆಯುವುದರಿಂದ ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಉದ್ಯೋಗವು ಚೆನ್ನಾಗಿ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ನೀವು ಅನಿರೀಕ್ಷಿತ ಪ್ರಯೋಜನವನ್ನು ಪಡೆಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಜಾಣ್ಮೆಯನ್ನು ಬಳಸಿ ನೀವು ಕೆಲವೊಂದು ಹೊಸ ಯೋಜನೆಗಳನ್ನು ರೂಪಿಸಲಿದ್ದೀರಿ. ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿ ಉಂಟಾಗಲಿದೆ.

ಸಿಂಹ: ಈ ವಾರದ ಆರಂಭವು ಸ್ವಲ್ಪ ದುರ್ಬಲ ಎನಿಸಲಿದೆ. ಆದರೆ ಕಾಲ ಕಳೆದಂತೆ ಪರಿಸ್ಥಿತಿಯು ನಿಮ್ಮ ಪರವಾಗಿ ವಾಲಲಿದೆ. ದೀರ್ಘ ಪ್ರಯಾಣ ಮಾಡಲು ನಿಮಗೆ ಅವಕಾಶ ದೊರೆಯಬಹುದು. ಒಂದಷ್ಟು ಮಟ್ಟಿಗೆ ಮಾನಸಿಕ ಒತ್ತಡ ತಗ್ಗಲಿದೆ. ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ನೆಲೆಸಲಿದ್ದು ಇತರರಿಗೆ ಸಂತಸವನ್ನು ನೀಡಲಿದ್ದೀರಿ. ಈ ಸಮಯವು ನಿಮ್ಮ ಪ್ರೇಮ ಜೀವನದಲ್ಲಿ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಪ್ರೇಮಿಯ ಜೊತೆಗೆ ಅನುರಾಗದಿಂದ ಮಾತನಾಡಲಿದ್ದೀರಿ. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಇನ್ನಷ್ಟು ಪಕ್ವತೆ ಕಾಣಿಸಿಕೊಳ್ಳಲಿದೆ. ವಿವಾಹದ ಕುರಿತು ನೀವು ಮಾತನಾಡುವುದಾದರೆ, ನಿಮ್ಮ ಸಂಗಾತಿಯು ಖಂಡಿತವಾಗಿಯೂ ಅದನ್ನು ನಿರಾಕರಿಸುವುದಿಲ್ಲ. ಹೀಗೆ, ನಿಮ್ಮ ಸಂಗಾತಿಯಿಂದ ಮದುವೆಗೆ ಅಂಗೀಕಾರ ಪಡೆಯಲು ಇದು ಸಕಾಲ. ಸಂಬಂಧದಲ್ಲಿ ಪ್ರೇಮ ಮತ್ತು ಆಕರ್ಷಣೆ ನೆಲೆಸುವ ಜೊತೆಗೆ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಕುರಿತು ಎಚ್ಚರಿಕೆ ವಹಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಒಳ್ಳೆಯದು.

ಕನ್ಯಾ: ಈ ವಾರ ನಿಮಗೆ ತುಸು ಭಿನ್ನ ಫಲಿತಾಂಶ ದೊರೆಯಲಿದೆ. ಇಡೀ ವಾರದಲ್ಲಿ ಅನ್ಯೋನ್ಯ ಸಂಬಂಧದಲ್ಲಿ ನೀವು ಕಾಲ ಕಳೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯತ್ತ ಪ್ರಬಲ ಆಕರ್ಷಣೆಯನ್ನು ತೋರಲಿದ್ದಾರೆ. ಅಲ್ಲದೆ ಪರಸ್ಪರ ಅನ್ಯೋನ್ಯತೆಯನ್ನು ತೋರಲಿದ್ದಾರೆ. ಆದರೂ ಇದರಿಂದಾಗಿ ಕೆಲವೊಮ್ಮೆ ನಿಮ್ಮ ಜೀವನ ಸಂಗಾತಿಯ ಕೋಪಕ್ಕೆ ನೀವು ಬಲಿಯಾಗಬಹುದು. ಹೊರಗಿನ ವ್ಯಕ್ತಿಯೊಂದಿಗೆ ಪ್ರೇಮ ಪಾಶದಲ್ಲಿ ಸಿಲುಕಬೇಡಿ. ಇದು ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒತ್ತಡ ಉಂಟು ಮಾಡಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಧಾರಣ ವಾರ ಎನಿಸಲಿದೆ. ನಿಮ್ಮ ಪ್ರೇಮಿಯ ಅಸಹನೆಯನ್ನು ನೀವು ಎದುರಿಸಬಹುದು. ಉದ್ಯೋಗಿಗಳು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜಂಜಾಟವನ್ನು ಎದುರಿಸಬೇಕಾದೀತು. ಆದರೆ ನಿಮ್ಮ ಆದಾಯವು ನಿಮಗೆ ಯಶಸ್ಸನ್ನು ತಂದು ಕೊಡಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಚಿಂತೆ ಎದುರಿಸಬಹುದು. ಇದರ ಪರಿಣಾಮವನ್ನು ನಿಮ್ಮ ಆರೋಗ್ಯದಲ್ಲಿ ಕಾಣಬಹುದು. ಹೀಗಾಗಿ, ಸದ್ಯಕ್ಕೆ ನಿಮ್ಮ ಕಡೆಯಿಂದ ಯಾವುದೇ ದೊಡ್ಡ ಅಪಾಯವನ್ನು ಮೈಗೆಳೆದುಕೊಳ್ಳಬೇಡಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು.

ತುಲಾ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ಏನಾದರೂ ವಿಷಯದ ಕುರಿತು ನೀವು ಒತ್ತಡ ಎದುರಿಸಬಹುದು. ಆದರೆ ವಾರದ ನಡುವಿನ ದಿನಗಳಿಂದ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಜೀವನದಲ್ಲಿ ಸಂತಸ ಕಾಣಲಿದ್ದಾರೆ. ನಿಮ್ಮ ಪ್ರೇಮ ಜೀವನದಲ್ಲಿ ಪ್ರಣಯವು ಹೆಚ್ಚಲಿದೆ. ಸ್ವಲ್ಪ ವಾಗ್ವಾದ ಉಂಟಾಗಬಹುದು. ಅದರೂ ಸಂಬಂಧವು ಚೆನ್ನಾಗಿರಲಿದೆ. ಈ ವಾರವು ನಿಮಗೆ ಸಾಕಷ್ಟು ಹಣವನ್ನು ತಂದು ಕೊಡಲಿದೆ. ಬ್ಯಾಂಕಿನ ಸಾಲ ಮರುಪಾವತಿ ಮಾಡುವಲ್ಲಿ ನೀವು ಯಶಸ್ಸು ಸಾಧಿಸಲಿದ್ದೀರಿ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಅದೃಷ್ಟದ ಬಲದಿಂದ ನಿಮಗೆ ಭಡ್ತಿ ದೊರೆಯಲಿದೆ. ನಿಮ್ಮ ವ್ಯಾಪ್ತಿಯಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರು ಸಾಕಷ್ಟು ಏರುಪೇರನ್ನು ಎದುರಿಸಬಹುದು. ಆದರೂ ನಿಮ್ಮ ಅಧ್ಯಯನಕ್ಕೆ ಸಾಕಷ್ಟು ಸಮಯವನ್ನು ನೀಡಲು ನಿಮಗೆ ಸಾಧ್ಯವಾಗಲಿದೆ. ಆರೋಗ್ಯದ ಕುರಿತು ಹೇಳುವುದಾದರೆ, ಸ್ವಲ್ಪ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು.

ವೃಶ್ಚಿಕ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಮಗುವಿನ ಕುರಿತ ಚಿಂತೆ ನಿಮಗೆ ಕಾಡಬಹುದು. ಆದರೆ ನಿಮ್ಮ ಜೀವನ ಸಂಗಾತಿಯ ಮನವೊಲಿಕೆಯ ಕಾರಣ ನಿಮ್ಮ ಚಿಂತೆ ದೂರಗೊಳ್ಳಲಿದೆ. ಜೀವನ ಸಂಗಾತಿಯ ಜೊತೆಗಿನ ಸಂಬಂಧವು ಸಾಕಷ್ಟು ಅನುಕೂಲಕರವಾಗಿರಲಿದೆ. ಇದರಿಂದಾಗಿ ಮನೆಯ ವಾತಾವರಣವು ಧನಾತ್ಮಕವಾಗಿರಲಿದೆ. ಮನೆಯಲ್ಲಿ ಏನಾದರೂ ಕಾರ್ಯಕ್ರಮಗಳಿಗೆ ಪೂರ್ವಸಿದ್ಧತೆ ನಡೆಯಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಅನುಕೂಲಕರ. ಪರಸ್ಪರರ ಮನಸ್ಸಿನಲ್ಲಿ ಇರುವ ತಪ್ಪು ಗ್ರಹಿಕೆಯನ್ನು ದೂರ ಮಾಡಲಿದ್ದೀರಿ. ಕಚೇರಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮಗೆ ಅವಕಾಶ ದೊರೆಯಲಿದೆ. ಉದ್ಯೋಗಿಗಳ ಪಾಲಿಗೆ ಸಮಯವು ಚೆನ್ನಾಗಿದೆ. ಆದರೆ ಕಚೇರಿಯಲ್ಲಿ ಯಾರಾದರೂ ವ್ಯಕ್ತಿಯ ಜೊತೆಗೆ ದುರ್ವರ್ತನೆ ತೋರುವ ಕಾರಣ ನಿಮಗೆ ಸಮಸ್ಯೆ ಉಂಟಾಗಬಹುದು. ಹೀಗಾಗಿ ಸಾಕಷ್ಟು ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಸಾಮಾನ್ಯ ವಾರ ಎನಿಸಲಿದೆ. ನೀವು ಇನ್ನೂ ಹೆಚ್ಚಿನ ಶ್ರಮ ಪಡುವ ಅಗತ್ಯವಿದೆ. ಇದರಿಂದಾಗಿ ನಿಮ್ಮ ಯೋಜನೆಗಳು ಮುನ್ನಡೆ ಸಾಧಿಸಲಿವೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ವಾಣಿಜ್ಯ ಮತ್ತು ಐಟಿ ಅಧ್ಯಯನದಲ್ಲಿ ಅವರು ಉತ್ತಮ ಸಾಧನೆ ಮಾಡಲಿದ್ದಾರೆ.

ಧನು: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ನಿಮ್ಮ ಪ್ರೇಮ ಸಂಬಂಧದಲ್ಲಿ ಈ ಸಮಯವು ಸಾಕಷ್ಟು ಅನುಕೂಲಕರವಾಗಿದೆ. ಹೀಗಾಗಿ ನೀವಿಬ್ಬರೂ ಪ್ರತಿ ಸವಾಲನ್ನು ಯಶಸ್ವಿಯಾಗಿ ಎದುರಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಕಂಡು ಬರಬಹುದು. ನಿಮ್ಮ ಜೀವನ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಆದರೂ ನಿಮ್ಮ ಕುಟುಂಬದ ಮೇಲೆ ನೀವು ಗಮನ ಹರಿಸಲಿದ್ದೀರಿ. ಮನೆಯಲ್ಲಿ ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ನಿಮ್ಮ ಆದಾಯದಲ್ಲೂ ಹೆಚ್ಚಳ ಕಾಣಿಸಿಕೊಳ್ಳಲಿದ್ದು ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡಿರುವವರು ಯಶಸ್ಸನ್ನು ಗಳಿಸಲಿದ್ದಾರೆ. ಸರ್ಕಾರಿ ವಲಯದಿಂದ ದೊಡ್ಡ ಪ್ರಮಾಣದಲ್ಲಿ ಪ್ರಯೋಜನ ದೊರೆಯಲಿದೆ. ಹೀಗಾಗಿ ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಉದ್ಯೋಗದಲ್ಲಿರುವವರಿಗೆ ಈ ವಾರವು ದುರ್ಬಲವೆನಿಸಲಿದೆ. ನಿಮ್ಮ ಕೆಲಸದ ಕುರಿತು ನಿಮಗೆ ತೃಪ್ತಿ ದೊರೆಯದೆ ಇರಬಹುದು. ಹೀಗಾಗಿ ಕೆಲಸದಲ್ಲಿ ಒಂದಷ್ಟು ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ.

ಮಕರ: ಈ ವಾರವು ನಿಮಗೆ ಸಂತಸ ತರಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನವು ಸಂತಸದಿಂದ ಮುಂದೆ ಸಾಗಲಿದೆ. ನಿಮ್ಮ ಜೀವನ ಸಂಗಾತಿಯಲ್ಲಿ ಒಳ್ಳೆತನವನ್ನು ನೀವು ನೋಡಲಿದ್ದೀರಿ. ಪರಸ್ಪರರ ಹೃದಯದಲ್ಲಿ ನೀವು ಸ್ಥಾನವನ್ನು ಪಡೆಯಲಿದ್ದೀರಿ. ನೀವು ಪ್ರಣಯಭರಿತ ಸಂಬಂಧವನ್ನು ಕಾಣಲಿದ್ದೀರಿ. ಆದರೆ ಅತ್ತೆ ಮಾವಂದಿರ ಹಸ್ತಕ್ಷೇಪವು ನಿಮ್ಮ ಸಂಬಂಧದಲ್ಲಿ ಸಮಸ್ಯೆಯನ್ನುಂಟು ಮಾಡಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಜೀವನದಲ್ಲಿ ನೀವು ಸಾಕಷ್ಟು ಏರುಪೇರನ್ನು ಅನುಭವಿಸಬಹುದು. ನಿಮ್ಮ ಪ್ರೇಮ ಬದುಕಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ವಾರದ ಆರಂಭದಲ್ಲಿ ನೀವು ಗೆಳೆಯರೊಂದಿಗೆ ಹೊರಗೆ ಹೋಗುವ ಸಾಧ್ಯತೆ ಇದೆ. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಮನೆಯಲ್ಲಿ ಒಳ್ಳೆಯ ಆಹಾರವನ್ನು ಸವಿಯುವ ಅವಕಾಶವು ನಿಮಗೆ ದೊರೆಯಲಿದ್ದು ಇದನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ವೃತ್ತಿಪರ ಬದುಕು ಚೆನ್ನಾಗಿರಲಿದೆ. ನಿಮ್ಮ ಕೆಲಸವನ್ನು ನೀವು ಆನಂದಿಸಲಿದ್ದೀರಿ ಹಾಗೂ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಈ ಸಮಯವು ವ್ಯವಹಾರದ ದೃಷ್ಟಿಯಿಂದ ಒಳ್ಳೆಯದು. ವ್ಯಾವಹಾರಿಕ ಜಾಣ್ಮೆಯನ್ನು ಬಳಸಿ ಕೆಲಸದಲ್ಲಿ ನೀವು ಒಳ್ಳೆಯ ಪ್ರಗತಿಯನ್ನು ಸಾಧಿಸಲಿದ್ದೀರಿ.

ಕುಂಭ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕಿನ ಒತ್ತಡದಿಂದ ಹೊರ ಬರಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಪ್ರಣಯ ನೆಲೆಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಪ್ರೇಮಿಗೆ ಉತ್ತಮ ಸ್ಥಾನ ದೊರೆಯಲಿದ್ದು ತನ್ನ ಉದ್ಯೋಗದಲ್ಲಿ ಅವರು ಯಶಸ್ಸನ್ನು ಪಡೆಯಲಿದ್ದಾರೆ. ಕೌಟುಂಬಿಕ ಚಟುವಟಿಕೆಗಳಲ್ಲಿ ನೀವು ಸಮಯವನ್ನು ಕಳೆಯಲಿದ್ದೀರಿ. ವಾರದ ಮಧ್ಯದಲ್ಲಿ ನಿಮ್ಮ ಗೆಳೆಯರೊಂದಿಗೆ ನೀವು ತಿರುಗಾಡಲು ಹೋಗಬಹುದು. ವಾರದ ಕೊನೆಗೆ ನೀವು ಹೆಚ್ಚಿನ ಸಮಯವನ್ನು ನಿಮ್ಮ ಕುಟುಂಬದ ಸದಸ್ಯರ ಜೊತೆ ಕಳೆಯಲಿದ್ದೀರಿ. ಕೆಲಸದಲ್ಲಿನ ಪರಿಸ್ಥಿತಿಯು ಅನುಕೂಲಕರವಾಗಿದೆ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಒಳ್ಳೆಯದು. ವ್ಯವಹಾರ ಪಾಲುದಾರರೊಂದಿಗಿನ ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು.

ಮೀನ: ಈ ವಾರ ನಿಮಗೆ ಅದ್ಭುತ ಫಲಿತಾಂಶ ತಂದು ಕೊಡಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯು ಅವರ ಜಾಣ್ಮೆಯ ಮೂಲಕ ನಿಮಗೆ ಸಹಾಯ ಮಾಡಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ಈ ಬಾರಿ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಪ್ರಣಯ ನೆಲೆಸಲಿದೆ. ಆದರೆ ಸಣ್ಣಪುಟ್ಟ ಸಂಘರ್ಷ ಉಂಟಾಗಬಹುದು. ವಾರದ ಆರಂಭದಿಂದಲೇ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಪ್ರಮುಖ ಚಿಂತೆಗಳು ದೂರಗೊಳ್ಳಲಿವೆ. ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ನಿಮ್ಮ ಮನಸ್ಸಿಗೆ ಸಮಾಧಾನ ದೊರೆಯಲಿದೆ. ನಿಮ್ಮ ಖರ್ಚುವೆಚ್ಚವೂ ತಗ್ಗಲಿದೆ. ನಿಮ್ಮ ಇಚ್ಛೆಗಳನ್ನ ಈಡೇರಿಸುವಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಗುರಿಯನ್ನು ನೀವು ಸಾಧಿಸಲಿದ್ದೀರಿ. ಇದರಿಂದಾಗಿ ನಿಮ್ಮ ಮನಸ್ಸಿಗೆ ಸಂತಸ ಲಭಿಸಲಿದೆ. ಹೊಸ ಯೋಜನೆಗಳ ಮೇಲೆ ನೀವು ಕೆಲಸ ಮಾಡಬಹುದು. ಉದ್ಯೋಗದಲ್ಲಿರುವವರು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ನಿಮ್ಮ ಬಾಸ್‌ ನಿಮಗೆ ಕೆಲವೊಂದು ಹೊಸ ಕೆಲಸಗಳನ್ನು ನಿಯೋಜಿಸಬಹುದು. ಇದು ನಿಮ್ಮ ಪಾಲಿಗೆ ಸವಾಲನ್ನು ಒಡ್ಡಬಹುದು. ಅದರೆ ನಗುತ್ತಲೇ ಈ ಸವಾಲನ್ನು ನೀವು ಸ್ವೀಕರಿಸಿ ಪೂರ್ಣಗೊಳಿಸಬೇಕು. ಆಗ ನಿಮ್ಮ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ.

ಇದನ್ನೂ ಓದಿ: Water fasting: ಇಂಟರ್‌ಮಿಟೆಂಟ್ ಫಾಸ್ಟಿಂಗ್‌ OR ವಾಟರ್‌ ಫಾಸ್ಟಿಂಗ್: ದೇಹದ ತೂಕ ಇಳಿಸಲು ಯಾವುದು ಒಳ್ಳೆಯದು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.