ETV Bharat / bharat

WBSSC ನೇಮಕಾತಿ ಹಗರಣ: ಬಂಗಾಳದ ಶಿಕ್ಷಕಿ ಆತ್ಮಹತ್ಯೆ

author img

By

Published : Dec 5, 2022, 5:59 PM IST

ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (WBSSC) ದಾಖಲೆಗಳ ಪ್ರಕಾರ, ಮೊಂಡಲ್ ಪರುವಾ 2014 ರಲ್ಲಿ ಬುರುಂಡಾ ಗ್ರಾಮದ ನಿವಾಸಿಯನ್ನು ವಿವಾಹವಾಗಿದ್ದರು. ನಂತರ ಅವರು 2016 ರಲ್ಲಿ 9 ಮತ್ತು 10 ನೇ ತರಗತಿಗೆ ಶಿಕ್ಷಕರಾಗಿ ಆಯ್ಕೆಯಾಗಿದ್ದರು. ಅದಾಗಿ 2019 ರಲ್ಲಿ ಅವರು ನಂದಿಗ್ರಾಮ್‌ನ ದೇಬಿಪುರ್ ಮಿಲನ್ ವಿದ್ಯಾಪೀಠ ಶಾಲೆಗೆ ಬಂಗಾಳಿ ಶಿಕ್ಷಕಿಯಾಗಿ ಸೇರ್ಪಡೆ ಆಗಿದ್ದರು ಎಂದು ತಿಳಿದು ಬಂದಿದೆ.

WBSSC recruitment scam: Bengal teacher commits suicide
WBSSC ನೇಮಕಾತಿ ಹಗರಣ: ಬಂಗಾಳದ ಶಿಕ್ಷಕಿ ಆತ್ಮಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ನಂದಿಗ್ರಾಮದ ಸರ್ಕಾರಿ ಶಾಲೆಯೊಂದರ ಶಿಕ್ಷಕಿ, ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಂಪರಾಣಿ ಮೊಂಡಲ್ ಪರುವಾ (30) ಮೃತ ಶಿಕ್ಷಕಿ. ಇವರ ಮೃತ ದೇಹ ಭಾನುವಾರ ತಡರಾತ್ರಿ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ವರದಿಯಾಗಿದೆ.

ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿವಿಧ ನ್ಯಾಯಾಲಯದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಅನರ್ಹ ಶಿಕ್ಷಕರ ಹೆಸರುಗಳನ್ನು ಒಳಗೊಂಡಿರುವ ಪಟ್ಟಿಯು ಇತ್ತೀಚೆಗೆ ವೈರಲ್ ಆಗಿತ್ತು. ಈ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಗಮನಿಸಿದ ಶಿಕ್ಷಕಿ ತುಂಪರಾಣಿಯು ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಇದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ. ಈ ನಡುವೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (WBSSC) ದಾಖಲೆಗಳ ಪ್ರಕಾರ, ಮೊಂಡಲ್ ಪರುವಾ 2014 ರಲ್ಲಿ ಬುರುಂಡಾ ಗ್ರಾಮದ ನಿವಾಸಿಯೊಬ್ಬರನ್ನು ವಿವಾಹವಾಗಿದ್ದರು. ನಂತರ ಅವರು 2016 ರಲ್ಲಿ 9 ಮತ್ತು 10 ನೇ ತರಗತಿಗೆ ಶಿಕ್ಷಕರಾಗಿ ಆಯ್ಕೆಯಾದರು. ಅದಾಗಿ 2019 ರಲ್ಲಿ ಅವರು ನಂದಿಗ್ರಾಮ್‌ನ ದೇಬಿಪುರ್ ಮಿಲನ್ ವಿದ್ಯಾಪೀಠ ಶಾಲೆಗೆ ಬಂಗಾಳಿ ಶಿಕ್ಷಕಿಯಾಗಿ ಸೇರಿದ್ದರು ಎಂದು ತಿಳಿಸಿದೆ.

WBSSC ತನ್ನ ವೆಬ್​​ಸೈಟ್​ನಲ್ಲಿ 186 ಅಭ್ಯರ್ಥಿಗಳ ಹೆಸರುಗಳನ್ನು ತಪ್ಪಾಗಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಶಿಕ್ಷಕಿಯ ಹೆಸರು ಸಹ ಕಾಣಿಸಿಕೊಂಡಿತ್ತು. ಇದರಿಂದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ನಡುವೆ ತಪ್ಪಾಗಿ ಶಿಫಾರಸು ಮಾಡಲಾದ ಪಟ್ಟಿಯನ್ನು ವೆಬ್​​ಸೈಟ್​ನಿಂದ ಕೈಬಿಡಲಾಗಿದೆ.

ಇದನ್ನೂ ಓದಿ:ನಿಶ್ಚಿತಾರ್ಥ ಮಂಟಪದಲ್ಲೇ ರಂಪಾಟ ಮಾಡಿದ ಯುವತಿ.. ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.