ETV Bharat / bharat

ಲೈಂಗಿಕ ದೌರ್ಜನ್ಯ ಆರೋಪ: ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಎಫ್ಐಆರ್ ದಾಖಲು

author img

By

Published : Oct 16, 2021, 1:14 PM IST

ಅಕ್ಟೋಬರ್ 14 ರಂದು ರಾಜ್ ಕುಂದ್ರಾ ಮತ್ತು ಶಿಲ್ಪ ಶೆಟ್ಟಿ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿರುವ ಶೆರ್ಲಿನ್ ಚೋಪ್ರಾ, ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ

ಹೈದರಾಬಾದ್: ನಟಿ ಶೆರ್ಲಿನ್ ಚೋಪ್ರಾ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ಹೇಳಿಕೆ ನೀಡಿದ ಬೆನ್ನಲ್ಲೇ ದಂಪತಿಗಳ ವಿರುದ್ಧ ಶೆರ್ಲಿನ್ ಕೆಲವು ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ.

ಅಕ್ಟೋಬರ್ 14 ರಂದು ಕುಂದ್ರಾ ಮತ್ತು ಶೆಟ್ಟಿ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿರುವ ಚೋಪ್ರಾ, ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನಲ್ಲಿ ಶಿಲ್ಪಾ ಶೆಟ್ಟಿ ನನಗೆ ಕುಂದ್ರಾ ಜೊತೆ ಒಪ್ಪಂದಕ್ಕೆ ಸಹಿ ಹಾಕುವಂತೆ ಆಮಿಷವೊಡ್ಡಿದ್ದಳು. ಭೂಗತ ಸಂಪರ್ಕ ಹೊಂದಿರುವ ಕುಂದ್ರಾ, ತನ್ನ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ. ಮೂರು ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಇದುವರೆಗೂ ಹಣ ಪಾವತಿಸಿಲ್ಲ ಎಂದು ಶೆರ್ಲಿನ್ ಹೇಳಿದ್ದಾರೆ.

ಮಾಧ್ಯಮದ ಮುಂದೆ ಮಾತನಾಡಿದ ನಟಿ ಶೆರ್ಲಿನ್ ಚೋಪ್ರಾ

ಅಶ್ಲೀಲ ಚಿತ್ರ ನಿರ್ಮಾಣ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಉದ್ಯಮಿ ರಾಜ್​ ಕುಂದ್ರಾ ಸೇರಿದಂತೆ ಅನೇಕರನ್ನು ಮುಂಬೈ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಜುಲೈ 19ರಂದು ಬಂಧಿಸಿದ್ದರು. ಆದಾದ ನಂತರ ಸೆಪ್ಟೆಂಬರ್ 20 ರಂದು 50 ಸಾವಿರ ರೂ ಮೊತ್ತದ ಶೂರಿಟಿ ಬಾಂಡ್​ ನೀಡಲು ಸೂಚನೆ ನೀಡಿ, ಮುಂಬೈ ಕೋರ್ಟ್‌ ರಾಜ್​ ಕುಂದ್ರಾಗೆ ಜಾಮೀನು ಮಂಜೂರು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.