ETV Bharat / bharat

ನೌಕಾಪಡೆ ಸಿಬ್ಬಂದಿ ಮುಖ್ಯಸ್ಥರಾಗಿ ಉಪ ಅಡ್ಮಿರಲ್ ಸೂರಜ್ ಬೆರ್ರಿ ಅಧಿಕಾರ ಸ್ವೀಕಾರ

author img

By

Published : Apr 2, 2023, 1:35 PM IST

ಭಾರತೀಯ ನೌಕಾಪಡೆ ಸಿಬ್ಬಂದಿ ಮುಖ್ಯಸ್ಥರಾಗಿ ಉಪ ಅಡ್ಮಿರಲ್ ಸೂರಜ್ ಬೆರ್ರಿ ಅಧಿಕಾರ ಸ್ವೀಕರಿಸಿದ್ದಾರೆ.

vice-admiral-suraj-berry-takes-charge-as-new-indian-navy-personnel-chief
ನೌಕಾಪಡೆ ಸಿಬ್ಬಂದಿ ಮುಖ್ಯಸ್ಥರಾಗಿ ಉಪ ಅಡ್ಮಿರಲ್ ಸೂರಜ್ ಬೆರ್ರಿ ಅಧಿಕಾರ ಸ್ವೀಕಾರ

ನವದೆಹಲಿ: ಭಾರತೀಯ ನೌಕಪಡೆ ಉಪ ಅಡ್ಮಿರಲ್ ಸೂರಜ್ ಬೆರ್ರಿ ಅವರನ್ನು ನೌಕಾಪಡೆ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಶನಿವಾರ ಅಧಿಕಾರ ವಹಿಸಿಕೊಂಡರು. ಸೂರಜ್​ ಬೆರ್ರಿ ಸುಮಾರು ನಾಲ್ಕು ವರ್ಷಗಳ ಕಾಲ ವಿಮಾನವಾಹಕ ನೌಕೆ ಐಎನ್​ಎಸ್​ ವಿಕ್ರಮಾದಿತ್ಯದ ಕಮಾಂಡಿಂಗ್ ಆಫೀಸರ್ ಆಗಿದ್ದರು.

ನೌಕಾ ಸಿಬ್ಬಂದಿ ಕೋರ್ಸ್‌ನಲ್ಲಿ ಇಂಟರ್​ ನ್ಯಾಷನಲ್ ಸೆಕ್ಯುರಿಟಿ ಸ್ಟಡೀಸ್‌ನಲ್ಲಿ ಸೂರಜ್ ಬೆರ್ರಿ ಪದವಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ವೆಪನ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ರಕ್ಷಣಾ ಮತ್ತು ಕಾರ್ಯತಂತ್ರದ ಅಧ್ಯಯನದಲ್ಲಿ ಎರಡನೇ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. 1987ರ ಜನವರಿ 1ರಂದು ಧ್ವಜ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಗನ್​ ಮತ್ತು ಕ್ಷಿಪಣಿ ಯುದ್ಧದಲ್ಲಿ ಪರಿಣಿತರಾಗಿದ್ದಾರೆ.

ಇದನ್ನೂ ಓದಿ: ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ನೌಕಾಪಡೆ ಮುಖ್ಯಸ್ಥರಿಗೆ ಕೋವಿಡ್ ಸೋಂಕು ಪತ್ತೆ

ವಿಕ್ರಮಾದಿತ್ಯದ ಕಮಾಂಡಿಂಗ್ ಆಫೀಸರ್ ಮಾತ್ರವಲ್ಲದೇ, ಕ್ಷಿಪಣಿ ನೌಕೆ ಐಎನ್​ಎಸ್​ ನಿರ್ಭಿಕ್, ಕ್ಷಿಪಣಿ ಕಾರ್ವೆಟ್ ಐಎನ್ಎಸ್​​ ಕಾರ್ಮುಕ್, ಸ್ಟೆಲ್ತ್ ಫ್ರಿಗೇಟ್ ಐಎನ್​ಐ ತಲ್ವಾರ್ ನೌಕೆಗಳ ಕಮಾಂಡಿಂಗ್ ಆಫೀಸರ್ ಆಗಿಯೂ ಸೇವೆ ಸಲ್ಲಿಸಿದ್ದರು. ಸಿಬ್ಬಂದಿ ಮತ್ತು ಕಾರ್ಯಾಚರಣಾ ನೇಮಕಾತಿಗಳು ಎಫ್​ಓಸಿ-ಇನ್-ಸಿ ವೆಸ್ಟರ್ನ್ ಕಮಾಂಡ್‌ಗೆ ಫ್ಲಾಗ್ ಲೆಫ್ಟಿನೆಂಟ್ ಆಗಿದ್ದರು. ಮೊಬೈಲ್ ಕ್ಷಿಪಣಿ ಕೋಸ್ಟಲ್​ ಬ್ಯಾಟರಿಯ ಕಾರ್ಯಾಚರಣೆ ಅಧಿಕಾರಿ ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನರ್‌ಗೆ ರಕ್ಷಣಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಲ್ಲಿ ಸುನಾಮಿ ಪರಿಹಾರ ಕಾರ್ಯಾಚರಣೆಗಳ ಸಮಯದಲ್ಲಿ ಸೇವೆಗಳಿಗಾಗಿ 2006ರಲ್ಲಿ ಅವರಿಗೆ ವಿಶಿಷ್ಟ ಸೇವಾ ಪದಕ ಪಡೆದಿದ್ದಾರೆ. 2015ರಲ್ಲಿ ನವೋ ಸೇನಾ ಪದಕ ಮತ್ತು 2020ರಲ್ಲಿ ಅತಿ ವಿಶಿಷ್ಟ ಸೇವಾ ಪದಕಕ್ಕೂ ಸೂರಜ್​ ಬೆರ್ರಿ ಭಾಜನರಾಗಿದ್ದಾರೆ. ಎರಡು ಸಂದರ್ಭಗಳಲ್ಲಿ ನೌಕಾಪಡೆಯ ಮುಖ್ಯಸ್ಥರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ನೌಕಾ ಪಡೆ ಕಾರ್ಯಾಚರಣೆ ಡಿಜಿಯಾಗಿ ರಿಯರ್ ಅಡ್ಮಿರಲ್ ಅತುಲ್ ಆನಂದ್​ಗೆ ಪದೋನ್ನತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.