ETV Bharat / bharat

ಡೋಂಟ್​ವರಿ BF 7 ಭಾರತಕ್ಕೆ ಅಪಾಯಕಾರಿಯಲ್ಲ: ವಿಜ್ಞಾನಿ ರಾಕೇಶ್ ಮಿಶ್ರಾ ಅಭಯ

author img

By

Published : Dec 24, 2022, 9:03 AM IST

ಕೊರೊನಾವೈರಸ್‌ನ BF 7 ರೂಪಾಂತರವು ಭಾರತಕ್ಕೆ ಆತಂಕಕಾರಿಯಲ್ಲ ಎಂದು ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ ಭರವಸೆ ನೀಡಿದ್ದಾರೆ.

ಡೋಂಟ್​ವರಿ  BF 7 ಭಾರತಕ್ಕೆ ಅಪಾಯಕಾರಿಯಲ್ಲ:  ವಿಜ್ಞಾನಿ ರಾಕೇಶ್ ಮಿಶ್ರಾ ಅಭಯ
ಡೋಂಟ್​ವರಿ BF 7 ಭಾರತಕ್ಕೆ ಅಪಾಯಕಾರಿಯಲ್ಲ: ವಿಜ್ಞಾನಿ ರಾಕೇಶ್ ಮಿಶ್ರಾ ಅಭಯ

ಹೈದರಾಬಾದ್: ಕೊರೊನಾವೈರಸ್‌ನ ಬಿಎಫ್ 7 ರೂಪಾಂತರದ ಬಗ್ಗೆ ಭಯ ಬೇಡ ಎಂದು ಪ್ರಮುಖ ವಿಜ್ಞಾನಿಯೊಬ್ಬರು ವಿಶ್ವಾಸ ತುಂಬಿದ್ದಾರೆ. ಇದು ಓಮಿಕ್ರಾನ್ ಸ್ಟ್ರೈನ್‌ನ ರೂಪಾಂತರವಾಗಿದ್ದು, ಅದು ಭಾರತದ ಜನರ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಹಾಗಾಗಿ ನೀವೆಲ್ಲ ಹೆಚ್ಚು ಚಿಂತಿಸಬೇಕಾಗಿಲ್ಲ ಎಂದು ಶುಕ್ರವಾರ ಮಿಶ್ರಾ ಹೇಳಿದ್ದಾರೆ.

ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ ಟಿಐಜಿಎಸ್ ನಿರ್ದೇಶಕ ರಾಕೇಶ್ ಮಿಶ್ರಾ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದರ ಜತೆ ಮಾತನಾಡಿ, ಫೇಸ್ ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಜನಸಂದಣಿಯಿಂದ ದೂರು ಇರುವುದು ಸೂಕ್ತ ಎಂದು ಎಚ್ಚರಿಸಿದ್ದಾರೆ. ನೆರೆಯ ದೇಶವು ಭಾರತ ಎದುರಿಸಿದ ಸೋಂಕಿನ ವಿವಿಧ ಅಲೆಗಳನ್ನು ಎದುರಿಸಿಲ್ಲ ಹೀಗಾಗಿ ಚೀನಾದಲ್ಲಿ ಬಿಎಫ್​​ 7 ಅಲೆ ಜೋರಾಗಿದ್ದು, ಭಾರಿ ಪ್ರಮಾಣದ ಸೋಂಕಿಗೆ ಸಾಕ್ಷಿಯಾಗಿದೆ ಎಂದು CSIR-ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರದ ಮಾಜಿ ನಿರ್ದೇಶಕರು ಹೇಳಿದ್ದಾರೆ.

ಇದು Omicron ನ ಉಪ-ರೂಪವಾಗಿದ್ದು, ಕೆಲವು ಸಣ್ಣ ಬದಲಾವಣೆಗಳನ್ನು ಹೊರತುಪಡಿಸಿ ಮುಖ್ಯ ವೈಶಿಷ್ಟ್ಯಗಳು Omicron ನಂತೆ ಇರುತ್ತದೆ. ಯಾವುದೇ ದೊಡ್ಡ ವ್ಯತ್ಯಾಸವಿಲ್ಲ. ನಮ್ಮಲ್ಲಿ ಹೆಚ್ಚಿನವರು Omicron ತರಂಗದ ಪ್ರಭಾವವನ್ನು ಎದುರಿಸಿದ್ದೇವೆ. ಹೀಗಾಗಿ ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಮೂಲವಾಗಿ ಇದು ಅದೇ ವೈರಸ್ ಆಗಿದ್ದು ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ಮಿಶ್ರಾ ಹೇಳಿದ್ದಾರೆ.

ಚೀನಾ ತನ್ನ ಶೂನ್ಯ-ಕೋವಿಡ್ ನೀತಿಯಿಂದ ಸೋಂಕು ಉಲ್ಬಣ ಪರಿಸ್ಥಿತಿಯನ್ನ ಅನುಭವಿಸುತ್ತಿದೆ ಎಂದು ವಿಜ್ಞಾನಿ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ಭಾರತೀಯರು ಹೈಬ್ರಿಡ್ ಪ್ರತಿರಕ್ಷೆಯನ್ನು ಪಡೆದುಕೊಂಡಿದ್ದು, ಲಸಿಕೆಗಳ ಮೂಲಕ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಲಸಿಕೆಗಳು ವಿಭಿನ್ನ ಓಮಿಕ್ರಾನ್ ರೂಪಾಂತರಗಳನ್ನು ತಡೆಗಟ್ಟಲು ಅಥವಾ ತಡೆಯಲು ಉತ್ತಮವಾಗಿವೆ ಎಂದಿದ್ದಾರೆ.

ಇದನ್ನು ಓದಿ:ಕೋವಿಡ್​ ನಿಯಂತ್ರಣಕ್ಕೆ ಎಲ್ಲ ಕ್ರಮ.. ಔಷಧ ಸಾಗಣೆಗೆ ಡ್ರೋನ್​ಗಳ ಬಳಕೆ; ಜ್ಯೋತಿರಾದಿತ್ಯ ಸಿಂದಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.