ETV Bharat / bharat

ಜ್ಞಾನವಾಪಿ ಮಸೀದಿ ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ನ್ಯಾ.ರವಿಕುಮಾರ್​ ದಿವಾಕರ್​ ವರ್ಗಾವಣೆ

author img

By

Published : Jun 21, 2022, 8:52 AM IST

ಅಲಹಾಬಾದ್ ಹೈಕೋರ್ಟ್‌ನಿಂದ ವರ್ಗಾವಣೆಗೊಂಡ 121 ಸಿವಿಲ್ ನ್ಯಾಯಾಧೀಶರಲ್ಲಿ ರವಿಕುಮಾರ್ ದಿವಾಕರ್ ಅವರೂ ಸೇರಿದ್ದಾರೆ. ದಿವಾಕರ್ ವರ್ಗಾವಣೆಯನ್ನು ಮಾಮೂಲಿ ಎಂದಿರುವ ಮೂಲಗಳು, ಅವರು ವಿಚಾರಣೆ ನಡೆಸುತ್ತಿರುವ ಸೂಕ್ಷ್ಮ ಜ್ಞಾನವಾಪಿ ಪ್ರಕರಣಕ್ಕೂ ಈ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿವೆ.

Gyanvapi Masjid
ಜ್ಞಾನವಾಪಿ ಮಸೀ

ವಾರಾಣಸಿ: ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದ ವಾರಾಣಸಿ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರನ್ನು ಬರೇಲಿಗೆ ವರ್ಗಾವಣೆ ಮಾಡಲಾಗಿದೆ. ಸೋಮವಾರ ಸಂಜೆ ಅಲಹಾಬಾದ್ ಹೈಕೋರ್ಟ್‌ನಿಂದ ವರ್ಗಾವಣೆಗೊಂಡ 121 ಸಿವಿಲ್ ನ್ಯಾಯಾಧೀಶರಲ್ಲಿ ಇವರೂ ಸೇರಿದ್ದಾರೆ. ವರ್ಗಾವಣೆಗೊಂಡ ನ್ಯಾಯಾಧೀಶರು ಜುಲೈ 4 ರೊಳಗೆ ಅಧಿಕಾರ ವಹಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ದಿವಾಕರ್ ವರ್ಗಾವಣೆಯನ್ನು ಮಾಮೂಲಿ ಎಂದಿರುವ ಮೂಲಗಳು, ಅವರು ವಿಚಾರಣೆ ನಡೆಸುತ್ತಿರುವ ಸೂಕ್ಷ್ಮ ಜ್ಞಾನವಾಪಿ ಪ್ರಕರಣಕ್ಕೂ ಈ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿವೆ. ಪ್ರಕರಣದ ವಿಚಾರಣೆ ವೇಳೆ ದಿವಾಕರ್ ಕೂಡ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು. ಉತ್ತರ ಪ್ರದೇಶ ಸರ್ಕಾರ ಅವರ ಭದ್ರತೆಯನ್ನು ಮೇಲ್ದರ್ಜೆಗೂ ಏರಿಸಿತ್ತು.

ಇದನ್ನೂ ಓದಿ : ಗ್ಯಾನವಾಪಿ ಮಸೀದಿ ವಿವಾದ: ಮೊದಲ ದಿನದ ಸರ್ವೇಯಲ್ಲಿ 3 ಕೊಠಡಿಗಳ ಚಿತ್ರೀಕರಣ, ನಾಳೆಯೂ ಮುಂದುವರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.