ETV Bharat / bharat

ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಉಚಿತ: ಮನೀಶ್ ಸಿಸೋಡಿಯಾ

author img

By

Published : Mar 9, 2021, 1:43 PM IST

69,000 ಕೋಟಿ ರೂ.ಗಳ ಬಜೆಟ್ ಮಂಡಿಸಿದ ದೆಹಲಿ ಡಿಸಿಎಂ ಹಾಗೂ ವಿತ್ತ ಸಚಿವ ಮನೀಶ್​ ಸಿಸೋಡಿಯಾ, ಉಚಿತ ಲಸಿಕೆಗಾಗಿ 50 ಕೋಟಿ ರೂ. ಮೀಸಲಿಟ್ಟಿದ್ದೇವೆ.

vaccines will be available free of cost for people of Delhi
ಮನೀಶ್ ಸಿಸೋಡಿಯಾ

ನವದೆಹಲಿ: ರಾಷ್ಟ್ರ ರಾಜಧಾನಿ ಎಲ್ಲ ಜನರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

69,000 ಕೋಟಿ ರೂ.ಗಳ ಬಜೆಟ್ ಮಂಡಿಸಿದ ದೆಹಲಿ ಡಿಸಿಎಂ ಹಾಗೂ ವಿತ್ತ ಸಚಿವ ಮನೀಶ್​ ಸಿಸೋಡಿಯಾ, ಆರೋಗ್ಯ ಕ್ಷೇತ್ರಕ್ಕೆ 9,934 ಕೋಟಿ ರೂ. ಅನುದಾನ ನೀಡಿರುವುದಾಗಿ ಘೋಷಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿಸೋಡಿಯಾ, ಉಚಿತ ಲಸಿಕೆಗಾಗಿ ನಾವು ಬಜೆಟ್​ನಲ್ಲಿ 'ಆಮ್ ಆದ್ಮಿ ನಿಶುಲ್ಕ್ ಕೋವಿಡ್ ಲಸಿಕೆ ಯೋಜನೆ' ಅಡಿಯಲ್ಲಿ 50 ಕೋಟಿ ರೂ. ಮೀಸಲಿಟ್ಟಿದ್ದೇವೆ. ದಿನದ ವ್ಯಾಕ್ಸಿನೇಷನ್ ಪ್ರಮಾಣವನ್ನು 45,000 ದಿಂದ 60,000ಕ್ಕೆ ಹೆಚ್ಚಿಸಲಾಗುವುದು. ಮುಂದಿನ ಹಂತದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕೊರೊನಾಬ್ಬರ: ಮುಂಬೈನಲ್ಲಿ ಭಾಗಶಃ ಲಾಕ್​ಡೌನ್​ ಹೇರಲಿದೆಯಂತೆ ಮಹಾ ಸರ್ಕಾರ

ಒಬ್ಬ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ 250 ರೂ. ಕೊಟ್ಟು ಲಸಿಕೆ ಹಾಕಿಸಿಕೊಳ್ಳಬೇಕು. ಅದೆಷ್ಟೋ ಬಡ ಜನರು ಈ ಹಣದಲ್ಲಿ ಪಡಿತರ ಪಡೆಯಬೇಕೇ? ಅಥವಾ ಲಸಿಕೆ ಹಾಕಿಸಿಕೊಳ್ಳಬೇಕೆ ಎಂದು ಯೋಚಿಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳು ಸಂದುತ್ತಿರುವ ಈ ವೇಳೆ ನಾಗರಿಕರ ಮನಸ್ಸಿನಲ್ಲಿ ಈ ಪ್ರಶ್ನೆ ಉದ್ಭವಿಸಬಾರದು. ಹೀಗಾಗಿ ಉಚಿತ ವ್ಯಾಕ್ಸಿನೇಷನ್​ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಿಸೋಡಿಯಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.