ETV Bharat / bharat

ಸಚಿವ ಹರಕ್​ ಸಿಂಗ್​ ರಾವತ್​ ಉಚ್ಛಾಟಿಸಿದ ಬಿಜೆಪಿ: ಇಂದು ಕಾಂಗ್ರೆಸ್​ ಸೇರ್ಪಡೆ ಸಾಧ್ಯತೆ

author img

By

Published : Jan 17, 2022, 7:21 AM IST

Updated : Jan 17, 2022, 8:11 AM IST

ಉತ್ತರಾಖಂಡ್​​ನಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಚುನವಾಣೆ ನಡೆಯಲಿದೆ. ಈ ಮದ್ಯೆ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಿಎಂ ಪುಷ್ಕರ್​ ಸಿಂಗ್​ ಧಾಮಿ, ರಾವತ್​ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಮೊದಲು ಕಾಂಗ್ರೆಸ್​ನಲ್ಲಿ ರಾವತ್​ 2017 ರ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದರು.

ಸಚಿವ ಹಾರಕ್​ ಸಿಂಗ್​ ರಾವತ್​ ಉಚ್ಛಾಟಿಸಿದ ಬಿಜೆಪಿ: ಇಂದು ಕಾಂಗ್ರೆಸ್​ ಸೇರ್ಪಡೆ ಸಾಧ್ಯತೆ
ಸಚಿವ ಹಾರಕ್​ ಸಿಂಗ್​ ರಾವತ್​ ಉಚ್ಛಾಟಿಸಿದ ಬಿಜೆಪಿ: ಇಂದು ಕಾಂಗ್ರೆಸ್​ ಸೇರ್ಪಡೆ ಸಾಧ್ಯತೆ

ಡೆಹರಾಡೂನ್​( ಉತ್ತರಾಖಂಡ್​): ಸಚಿವ ಹರಕ್ ಸಿಂಗ್ ರಾವತ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ. ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಹರಕ್​ ಸಿಂಗ್​​​ ಇಂದು ಕಾಂಗ್ರೆಸ್‌ಗೆ ಮರು ಸೇರ್ಪಡೆಯಾಗಬಹುದು ಎನ್ನಲಾಗಿದೆ.

ಉತ್ತರಾಖಂಡ್​​ನಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಚುನವಾಣೆ ನಡೆಯಲಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಿಎಂ ಪುಷ್ಕರ್​ ಸಿಂಗ್​ ಧಾಮಿ, ರಾವತ್​ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಮೊದಲು ರಾವತ್​ ಕಾಂಗ್ರೆಸ್​​ನಲ್ಲಿದ್ದರು. 2017 ರ ಚುನಾವಣೆಯಲ್ಲಿ ಇವರು​ ಬಿಜೆಪಿ ಸೇರ್ಪಡೆಗೊಂಡಿದ್ದರು.

ಕೆಲ ದಿನಗಳಿಂದ ಅವರು ಬಿಜೆಪಿ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ರು. ಅಷ್ಟೇ ಅಲ್ಲ ಬಿಜೆಪಿ ವಿರುದ್ಧ ಸಾರ್ವಜನಿಕವಾಗಿಯೇ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಚುನಾವಣೆಯಲ್ಲಿ ಅವರು ತಮಗೆ ಮತ್ತು ತಮ್ಮ ಸೊಸೆಗೂ ಟಿಕೆಟ್ ನೀಡುವಂತೆ ಕೇಳಿದ್ದರು. ಆದರೆ ಬಿಜೆಪಿ ಹೈಕಮಾಂಡ್​ ಅವರ ಬೇಡಿಕೆ ತಿರಸ್ಕರಿತ್ತು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್​ ನೀಡಲಾಗುವುದು ಎಂದು ಪಕ್ಷ ಸ್ಪಷ್ಟ ಪಡಿಸಿತ್ತು.

ಅಷ್ಟೇ ಅಲ್ಲ ಒಂದು ಕುಟುಂಬಕ್ಕೆ ಒಂದೇ ಟಿಕೆಟ್​ ಎಂಬ ನಿಯಮವನ್ನು ಬಿಜೆಪಿ ಜಾರಿಗೊಳಿಸಿದೆ. ಇದು ರಾವತ್​ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿಯೇ ಅವರು, ಡೆಹರಾಡೂನ್​​ನಲ್ಲಿ ನಡೆದ ಅಭ್ಯರ್ಥಿಗಳ ಆಯ್ಕೆ ಸಭೆಗೆ ಗೈರಾಗಿದ್ದರು. ಅಷ್ಟೇ ಏಕೆ ಭಾನುವಾರ ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಲ್ಲದೇ ಇಂದು ಕಾಂಗ್ರೆಸ್​ ಪಕ್ಷ ಸೇರುವ ಸುಳಿವು ನೀಡಿದ್ದರು. ಇದರಿಂದಾಗಿ ಬಿಜೆಪಿ ಸಚಿವ ಹಾರಕ್​ ಸಿಂಗ್​ ರಾವತ್​ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ:ಪುರಿ ನಿಶ್ಚಲಾನಂದ ಸರಸ್ವತಿ ಭೇಟಿಯಾದ ಉಮಾ ಭಾರತಿ

Last Updated : Jan 17, 2022, 8:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.