ETV Bharat / bharat

ಸ್ವಾತಂತ್ರ್ಯೋತ್ಸವದಂದು ಉಗ್ರ ದಾಳಿ ರೂಪಿಸಿದ್ದವನ ಬಂಧನ.. ಸಂಚುಕೋರನಿಗೆ ಐಸಿಸ್​ ನಂಟು

author img

By

Published : Aug 10, 2022, 9:28 AM IST

ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಉಗ್ರ ದಾಳಿಗೆ ಸಂಚು - ಉತ್ತರಪ್ರದೇಶದಲ್ಲಿ ಐಸಿಸ್​ ಉಗ್ರನ ಸೆರೆ - ಆರ್​ಎಸ್​ಎಸ್​ ಪ್ರಮುಖರ ಹತ್ಯೆಗೂ ಸ್ಕೆಚ್​ - ಪಾಕಿಸ್ತಾನದ ನಂಟು ಹೊಂದಿದ್ದ ಉಗ್ರ ಸಬಾವುದ್ದೀನ್​ ಅಜ್ಮಿ

uttar-pradesh-police-arrested-isis-terrorist
ಸಂಚುಕೋರನಿಗೆ ಐಸಿಸ್​ ನಂಟು

ಲಖನೌ (ಉತ್ತರ ಪ್ರದೇಶ): 75ನೇ ಸ್ವಾತಂತ್ರ್ಯದ ದಿನದಂದು ದೇಶದಲ್ಲಿ ಉಗ್ರ ದಾಳಿ ನಡೆಸುವ ಸಂಚು ರೂಪಿಸಿದ್ದ ಅಸಾದುದ್ದೀನ್​ ಓವೈಸಿ ಪಕ್ಷದ ಸದಸ್ಯ, ಐಸಿಸ್​ ಉಗ್ರರ ನಂಟು ಹೊಂದಿದ್ದ ಭಯೋತ್ಪಾದಕನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಉದ್ಯೋದಲ್ಲಿ ಎಲೆಕ್ಟ್ರೀಷಿಯನ್​ ಆಗಿದ್ದ ಎಐಎಂಐಎಂ ಪಕ್ಷದ ಸಬಾವುದ್ದೀನ್​ ಅಜ್ಮಿ ಆಲಿಯಾಸ್​ ಬೈರಾಮ್​ ಖಾನ್​ ಬಂಧಿತ ಉಗ್ರ. ಈತ ಅಜಂಗಢ ಜಿಲ್ಲೆಯ ಅಮಿಲೋ ಪ್ರದೇಶದ ನಿವಾಸಿಯಾಗಿದ್ದಾನೆ. ಉಗ್ರ ಸಬಾವುದ್ದೀನ್ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರನ್ನು ಕೊಲೆ ಮಾಡುವ ಟಾಸ್ಕ್​ ನೀಡಲಾಗಿತ್ತು. ಹೀಗಾಗಿ ಆರ್‌ಎಸ್‌ಎಸ್ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ಮತ್ತು ಫೇಸ್‌ಬುಕ್ ಖಾತೆಯನ್ನು ರಚಿಸಿ ಅದರಿಂದ ನಾಯಕರ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದ.

ಮುಂಬೈನಲ್ಲಿ ಈ ಮೊದಲು ಎಲೆಕ್ಟ್ರೀಷಿಯನ್​ ಆಗಿದ್ದ ಉಗ್ರ ಅಜ್ಮಿ ಐಸಿಸ್​ ವಿಚಾರಧಾರೆಗಳಿಗೆ ಒಳಗಾಗಿ ಭಾರತದಲ್ಲಿ ಇಸ್ಲಾಮಿಕ್​ ಸ್ಟೇಟ್​, ಷರಿಯಾ ಕಾನೂನು ಜಾರಿ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿದ್ದ. ಜನರಿಗೆ ಹಲವು ಆಮಿಷವೊಡ್ಡಿ ಸಾಮಾಜಿಕ ಮಾಧ್ಯಮಗಳಲ್ಲಿ ಐಸಿಸ್ ಬಗ್ಗೆ ಪ್ರಚಾರ ಮಾಡಲು ಪ್ರೇರೇಪಿಸುತ್ತಿದ್ದ. ಈತನೂ ಹಲವಾರು ವಿಡಿಯೋಗಳನ್ನು ಮಾಡಿ ಹರಿಬಿಟ್ಟಿದ್ದ.

ಉಗ್ರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಆತನ ಮೊಬೈಲ್ ಪರಿಶೀಲಿಸಿದಾಗ ಭಯೋತ್ಪಾದನೆ ಸೃಷ್ಟಿಸಲು ಐಸಿಸ್​​ನ ಟೆಲಿಗ್ರಾಮ್ ಚಾನೆಲ್ "ಅಲ್-ಸಕ್ರ್ ಮೀಡಿಯಾ"ಗೆ ಸೇರಿಕೊಂಡಿದ್ದ ಎಂಬುದು ಬೆಳಕಿಗೆ ಬಂದಿದೆ.

ಐಸಿಸ್​, ಸಿರಿಯಾ, ಪಾಕ್​ ಜೊತೆ ನಂಟು: ಈ ಉಗ್ರನ ಜಾಡು ಪತ್ತೆ ಮಾಡಿದಷ್ಟು ವಿಸ್ತಾರವಾಗುತ್ತಿದೆ. ಉತ್ತರಪ್ರದೇಶದಲ್ಲಿ ಇದ್ದುಕೊಂಡೇ ಆಫ್ರಿಕಾದಿಂದ ನಡೆಸಲಾಗುತ್ತಿರುವ ಉಗ್ರ ಸಂಘಟನೆಯಾದ ಅಬುಬಕರ್​ ಅಲ್​ ಸೋಮಾನಿ ಗ್ರೂಪ್​ನ ಭಾಗವಾಗಿದ್ದ. ಇದರಿಂದ ಆತ ಬಾಂಬ್​ ತಯಾರಿಸುವ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಇದಲ್ಲದೇ, ಪಾಕಿಸ್ತಾನ, ಸಿರಿಯಾ, ಇರಾಕ್​ನ ಐಸಿಸ್​ ಉಗ್ರರ ಜೊತೆಗೂ ನಂಟು ಹೊಂದಿದ್ದ ಎಂಬುದು ತಿಳಿದು ಬಂದಿದೆ.

ಎಲೆಕ್ಟ್ರಾನಿಕ್ ಬಾಂಬ್​, ಗ್ರೆನೇಡ್​ನಂತಹ ಅಪಾಯಕಾರಿ ಸ್ಫೋಟಕಗಳನ್ನು ಹೇಗೆ ತಯಾರಿಸುವುವು ಎಂಬುದನ್ನು ಕಲಿತಿದ್ದ. ಐಸಿಸ್​ಗೆ ದೇಶದ ಮುಸ್ಲಿಂ ಯುವಕರ ಸೇರುವಂತೆ ಪ್ರೇರೇಪಿಸುತ್ತಿದ್ದ. ಬಂಧಿತನಿಂದ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಕಾರ್ಟ್ರಿಡ್ಜ್‌ಗಳು, ಬಾಂಬ್‌ಗಳನ್ನು ತಯಾರಿಸಲು ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರ್​ಎಸ್​ಎಸ್​ ನಾಯಕ ಕೊಲ್ಲುವ ಟಾಸ್ಕ್: ಇನ್ನು ಆತಂಕಕಾರಿ ವಿಚಾರವೆಂದರೆ ಬಂಧಿತ ಉಗ್ರ ಸಬಾವುದ್ದೀನ್​ ಅಜ್ಮಿಗೆ ಆರ್​ಎಸ್​ಎಸ್​ ನಾಯಕರನ್ನು ಕೊಲ್ಲುವ ಟಾಸ್ಕ್​ ನೀಡಲಾಗಿತ್ತು. ದೇಶದಲ್ಲಿ ಹಲವು ಕೋಮು ಗಲಭೆಗಳಿಗೆ ಸಂಘ ಕಾರಣ ಎಂದು ತಿಳಿದಿದ್ದ ಈತ, ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಓದಿ: ಜಮ್ಮು- ಕಾಶ್ಮೀರದಲ್ಲಿ ಮೂವರ ಹೈಬ್ರಿಡ್​ ಉಗ್ರರ ಸೆರೆ.. ನಾಗರಿಕರ ಹತ್ಯೆ ಮಾಡಿದ್ದ ಕೀಚಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.