ETV Bharat / bharat

ವಿಶ್ವ ಹೃದಯ ದಿನ: ಬಾಂಧವ್ಯ ಬೆಸೆಯುವ 'ಹೃದಯ'ದ ಮಹತ್ವ ಇಲ್ಲಿದೆ

author img

By

Published : Sep 29, 2021, 9:17 AM IST

ಹೃದಯರಕ್ತನಾಳದ ಕಾಯಿಲೆ (ಸಿವಿಡಿ)ಗೆ ಪ್ರಪಂಚದಲ್ಲಿ ಅನೇಕರು ತುತ್ತಾಗುತ್ತಿದ್ದಾರೆ. ಇದರ ಪರಿಣಾಮವಾಗಿ ವರ್ಷಕ್ಕೆ 18.6 ಮಿಲಿಯನ್ ಸಾವುಗಳು ಸಂಭವಿಸುತ್ತವೆ. ಇದು ಅನೇಕ ಕಾರಣಗಳನ್ನು ಹೊಂದಿದೆ. ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ವಾಯು ಮಾಲಿನ್ಯ ಮತ್ತು ಕಡಿಮೆ ಸಾಮಾನ್ಯ ಸ್ಥಿತಿಗಳಾದ ಚಾಗಸ್ ರೋಗ ಮತ್ತು ಹೃದಯದ ಅಮಿಲಾಯ್ಡೋಸಿಸ್. ಹೀಗಾಗಿ, ಜಾಗತಿಕ ಮಟ್ಟದಲ್ಲಿ ಸಿವಿಡಿಯ ಜಾಗೃತಿ, ತಡೆಗಟ್ಟುವಿಕೆ ಮತ್ತು ನಿರ್ವಹಣೆ ಸುಧಾರಿಸಲು ಡಿಜಿಟಲ್ ಆರೋಗ್ಯದ ಶಕ್ತಿಯನ್ನು ಬಳಸಿಕೊಳ್ಳುವುದು ವಿಶ್ವ ಹೃದಯ ದಿನ 2021ದ ಗುರಿಯಾಗಿದೆ.

World Heart Day
ವಿಶ್ವ ಹೃದಯ ದಿನ

ಹೃದಯವು ನಮ್ಮ ದೇಹದಲ್ಲಿನ ಪ್ರಮುಖ ಅಂಗವಾಗಿದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು ಮಾರಕವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಹೃದಯ ರೋಗಿಗಳು ಬೇಗ ಸೋಂಕಿಗೆ ತುತ್ತಾಗಬಹುದು ಎಂದು ಪರಿಗಣಿಸಲಾಗಿತ್ತು. ಹೆಚ್ಚು ಆಸಕ್ತಿಕರ ಸಂಗತಿಯೆಂದರೆ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿ ಸಾವು-ನೋವಿಗೆ ತುತ್ತಾಗುತ್ತಿದ್ದಾರೆ.

ಹೃದಯ ರಕ್ತನಾಳದ ಕಾಯಿಲೆ (ಸಿವಿಡಿ)ಗೆ ಪ್ರಪಂಚದಲ್ಲಿ ಅನೇಕರು ತುತ್ತಾಗುತ್ತಿದ್ದಾರೆ. ಇದರ ಪರಿಣಾಮ ವರ್ಷಕ್ಕೆ 18.6 ಮಿಲಿಯನ್ ಸಾವುಗಳು ಸಂಭವಿಸುತ್ತವೆ. ಇದು ಅನೇಕ ಕಾರಣಗಳನ್ನು ಹೊಂದಿದೆ.

ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ವಾಯು ಮಾಲಿನ್ಯ ಮತ್ತು ಕಡಿಮೆ ಸಾಮಾನ್ಯ ಸ್ಥಿತಿಗಳಾದ ಚಾಗಸ್ ರೋಗ ಮತ್ತು ಹೃದಯದ ಅಮಿಲಾಯ್ಡೋಸಿಸ್. ಹೀಗಾಗಿ, ಜಾಗತಿಕ ಮಟ್ಟದಲ್ಲಿ ಸಿವಿಡಿಯ ಜಾಗೃತಿ, ತಡೆಗಟ್ಟುವಿಕೆ ಮತ್ತು ನಿರ್ವಹಣೆ ಸುಧಾರಿಸಲು ಡಿಜಿಟಲ್ ಆರೋಗ್ಯದ ಶಕ್ತಿಯನ್ನು ಬಳಸಿಕೊಳ್ಳುವುದು ವಿಶ್ವ ಹೃದಯ ದಿನ 2021ದ ಗುರಿಯಾಗಿದೆ.

ನಾವು ಸಾಮಾನ್ಯವಾಗಿ ಹೃದಯದ ಆರೋಗ್ಯವನ್ನು ನಿರ್ಲಕ್ಷಿಸುತ್ತೇವೆ. ಆದರೆ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಕಾಳಜಿಯನ್ನು ಮಾಡಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು, ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ.

ಹೃದಯದ ತೊಂದರೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ತಡೆಯಬಹುದು ಎಂದು ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ವಿಶ್ವ ಹೃದಯ ದಿನದ ಸಂದರ್ಭದಲ್ಲಿ "ಬಾಂಧವ್ಯ ಬೆಸೆಯಲು ಹೃದಯ ಬಳಸಿ" ಎಂಬ ಸಂದೇಶವನ್ನು ರವಾನಿಸಲಾಗುತ್ತಿದೆ. 1999 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯೊಂದಿಗೆ ವಿಶ್ವ ಹೃದಯ ಒಕ್ಕೂಟ (ಡಬ್ಲ್ಯುಎಚ್‌ಎಫ್) ಈ ದಿನವನ್ನು ಆರಂಭಿಸಿತು.

ಯಾರು ಸಿವಿಡಿ ಹೊಂದುವ ಸಾಧ್ಯತೆಯಿದೆ?

ವಯಸ್ಸು ಮತ್ತು ಅನುವಂಶಿಕತೆ ಸೇರಿದಂತೆ ಹೃದಯ ಕಾಯಿಲೆಯ ಬೆಳವಣಿಗೆಯ ಸಾಧ್ಯತೆಗಳನ್ನು ಹಲವಾರು ಅಂಶಗಳು ವ್ಯಾಖ್ಯಾನಿಸುತ್ತವೆ. ಇತರ ಕೆಲವು ಅಪಾಯಕಾರಿ ಅಂಶಗಳು ಇಲ್ಲಿವೆ:

  • ಧೂಮಪಾನ
  • ಬೊಜ್ಜು
  • ಒತ್ತಡ
  • ತೀವ್ರ ರಕ್ತದೊತ್ತಡ
  • ಅಧಿಕ ರಕ್ತದ ಕೊಲೆಸ್ಟ್ರಾಲ್​
  • ಮಧುಮೇಹ
  • ಅನುವಂಶಿಯತೆ
  • ಜಡ ಜೀವನಶೈಲಿ
  • ಅತಿಯಾದ ಮದ್ಯ ಸೇವನೆ
  • ಅನಾರೋಗ್ಯಕರ ಆಹಾರ ಪದ್ಧತಿ, ಇತ್ಯಾದಿ.

ತಡೆಯುವುದು ಹೇಗೆ?

ಹೃದಯ, ಉಸಿರಾಟದ ತೊಂದರೆ ಅಥವಾ ಅಸಾಮಾನ್ಯ ಲಕ್ಷಣಗಳಿಗೆ ಸಂಬಂಧಿಸಿದ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ, ಅವನು ಅಥವಾ ಅವಳು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ. ಇದಲ್ಲದೇ ನಿಯಮಿತ ಆರೋಗ್ಯ ತಪಾಸಣೆ ಕೂಡ ಬಹಳ ಮುಖ್ಯ. ಏಕೆಂದರೆ ಹೃದ್ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದರೆ, ಅದರ ಚಿಕಿತ್ಸೆ ಮತ್ತು ಚೇತರಿಕೆಗೆ ಹೆಚ್ಚಿನ ಅವಕಾಶಗಳಿವೆ.

ಅಸಮತೋಲಿತ ಆಹಾರ, ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ ಹೃದಯದ ಸಮಸ್ಯೆಗಳಿಗೆ ಕಾರಣ ಎಂದು ಪರಿಗಣಿಸಲಾಗಿದೆ.

ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಮತ್ತು ಹೃದಯ ರೋಗಗಳನ್ನು ತಡೆಗಟ್ಟಲು ಇಲ್ಲಿವೆ ಕೆಲವು ಸಲಹೆಗಳು:

  • ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ ಮತ್ತು ಸರಿಯಾದ ದಿನಚರಿ ನಿರ್ವಹಿಸಿ.
  • ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವಿಸಿ. ಅಧಿಕ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ. ಏಕೆಂದರೆ ಅಧಿಕ ಕೊಬ್ಬಿನ ಆಹಾರವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಹೃದಯದಲ್ಲಿನ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುತ್ತದೆ ಮತ್ತು ತಡೆಗಳನ್ನು ಸೃಷ್ಟಿಸುತ್ತದೆ.
  • ಬೆಳಗ್ಗೆ ಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರವನ್ನು ಸೇವಿಸಿ ಮತ್ತು ಸಂಜೆ 6 ಅಥವಾ 7 ರ ನಂತರ ಏನನ್ನೂ ತಿನ್ನಬೇಡಿ.
  • ಆರೋಗ್ಯಕರ ಹೃದಯ ಹೊಂದಲು ಪ್ರತಿದಿನ ತಾಜಾ, ಕಾಲೋಚಿತ ಹಣ್ಣುಗಳನ್ನು ಸೇವಿಸುವುದು ಮುಖ್ಯ.
  • ವ್ಯಾಯಾಮದ ದಿನಚರಿ ಬಿಡಬೇಡಿ. ಹೃದಯದ ವ್ಯಾಯಾಮವನ್ನು ಹೃದಯದ ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗಿದೆ.
  • ಪ್ರತಿದಿನ 40 ನಿಮಿಷದ ವೇಗದ ನಡಿಗೆ ಒಳ್ಳೆಯದು. ಇದಲ್ಲದೇ, ಈಜು, ಸ್ಕಿಪ್ಪಿಂಗ್​, ಓಟ, ಮತ್ತು ಸೈಕ್ಲಿಂಗ್​ನಂತಹ ವ್ಯಾಯಾಮಗಳು ಸಹ ಪ್ರಯೋಜನಕಾರಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.