ETV Bharat / bharat

UPSCಯಲ್ಲಿ ಶೃತಿ ಶರ್ಮಾ ಟಾಪರ್​​..ಕರ್ನಾಟಕದ 25 ಅಭ್ಯರ್ಥಿಗಳು ಪಾಸ್​.. ಅಭಿನಂದನೆ ಸಲ್ಲಿಸಿದ ನಮೋ

author img

By

Published : May 30, 2022, 3:09 PM IST

Updated : May 30, 2022, 7:31 PM IST

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ(ಯುಪಿಎಸ್​​ಸಿ) ಅಂತಿಮ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕರ್ನಾಟಕದ 25 ಅಭ್ಯರ್ಥಿಗಳು ತೇರ್ಗೆಡೆಯಾಗಿದ್ದಾರೆ. ಪ್ರಮುಖವಾಗಿ ಮೊದಲ ನಾಲ್ಕು ಸ್ಥಾನ ಮಹಿಳಾ ಅಭ್ಯರ್ಥಿಗಳ ಪಾಲಾಗಿವೆ.

ಯುಪಿಎಸ್​​ಸಿಯಲ್ಲಿ ಶೃತಿ ಶರ್ಮಾ ಟಾಪರ್
ಯುಪಿಎಸ್​​ಸಿಯಲ್ಲಿ ಶೃತಿ ಶರ್ಮಾ ಟಾಪರ್

ನವದೆಹಲಿ: 2021ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್​ಸಿ) ಪರೀಕ್ಷೆಗಳ ಅಂತಿಮ ಫಲಿತಾಂಶ ಇಂದು ಪ್ರಕಟಗೊಂಡಿದೆ. ಒಟ್ಟು 685 ಅಭ್ಯರ್ಥಿಗಳು ಈ ಮಹತ್ವದ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಪ್ರಮುಖವಾಗಿ ಕರ್ನಾಟಕದ 25 ಅಭ್ಯರ್ಥಿಗಳು ಈ ಸಲದ ಅಂತಿಮ ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾರೆ. ಫಲಿತಾಂಶವನ್ನ UPSCಯ ಅಧಿಕೃತ ವೆಬ್‌ಸೈಟ್‌ http://www.upsc.gov.in ನಲ್ಲಿ ನೋಡಬಹುದು.

UPSCಯಲ್ಲಿ ಶೃತಿ ಶರ್ಮಾ ಟಾಪರ್

ಯುಪಿಎಸ್​​ಸಿ ಪ್ರಕಟಿಸಿರುವ ಪಟ್ಟಿ ಪ್ರಕಾರ ದೆಹಲಿಯ ಸೇಂಟ್​​ ಸ್ವೀಫನ್ಸ್​ ಕಾಲೇಜ್ ಮತ್ತು ಜವಾಹರಲಾಲ್​ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಶೃತಿ ಶರ್ಮಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಜಾಮಿಯಾ ಮಿಲಿಯಾ ಕೋಚಿಂಗ್​ ಅಕಾಡೆಮಿಯಲ್ಲಿ ಸಿವಿಲ್​ ಸರ್ವೀಸ್​​ ಪರೀಕ್ಷೆಯ ತಯಾರಿ ನಡೆಸಿದ್ದರು. ಎರಡನೇ ಸ್ಥಾನವನ್ನ ಅಂಕಿತಾ ಅಗರ್ವಾಲ್​​ ಗಿಟ್ಟಿಸಿಕೊಂಡಿದ್ದು, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಮೊದಲ ನಾಲ್ಕು ಸ್ಥಾನಗಳು ಮಹಿಳೆಯರ ಪಾಲಾಗಿದ್ದು, ವಿಶೇಷವಾಗಿದೆ. ನಾಲ್ಕನೇ ಸ್ಥಾನದಲ್ಲಿ ಐಶ್ವರ್ಯ ವರ್ಮಾ ಇದ್ದಾರೆ.

ಯುಪಿಎಸ್​​ಸಿ ಅಭ್ಯರ್ಥಿಗಳ ಪಟ್ಟಿ
ಯುಪಿಎಸ್​​ಸಿ ಅಭ್ಯರ್ಥಿಗಳ ಪಟ್ಟಿ

2011ರ ನಾಗರಿಕ ಸೇವಾ ಪರೀಕ್ಷೆಗಳ ಲಿಖಿತ ಪರೀಕ್ಷೆ ಕಳೆದ ಜನವರಿ ತಿಂಗಳಲ್ಲಿ ನಡೆಸಲಾಗಿತ್ತು. ಸಂದರ್ಶನ ಏಪ್ರಿಲ್​ - ಮೇ ತಿಂಗಳಲ್ಲಿ ನಡೆಸಲಾಗಿತ್ತು. ಈ ಮಹತ್ವದ ಪರೀಕ್ಷೆಯಲ್ಲಿ ಪಾಸ್​ ಆಗಿರುವ ಒಟ್ಟು 685 ಅಭ್ಯರ್ಥಿಗಳು ಇದೀಗ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರದ ವಿವಿಧ ಸೇವೆ, ಗ್ರೂಪ್ ಎ ಮತ್ತು ಗ್ರೂ ಬಿ ಸ್ಥಾನಕ್ಕಾಗಿ ನೇಮಕ ಆಗಲಿದ್ದಾರೆ.

ಅಂತಿಮ ಪರೀಕ್ಷೆಯಲ್ಲಿ ಪಾಸ್​ ಆಗಿರುವ 685 ಅಭ್ಯರ್ಥಿಗಳ ಪೈಕಿ 244 ಸಾಮಾನ್ಯ ವರ್ಗ, 73 ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ, 203 ಇತರೆ ಹಿಂದುಳಿದ ವರ್ಗ, 105 ಪರಿಶಿಷ್ಟ ಜಾತಿ ಮತ್ತು 60 ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿದ್ದಾರೆಂದು ಆಯೋಗ ತಿಳಿಸಿದೆ. ಅಭ್ಯರ್ಥಿಗಳಿಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲು 23385271/23381125 /23098543 ನಂಬರ್​ಗೆ ಕರೆ ಮಾಡುವಂತೆ ತಿಳಿಸಿದೆ.

  • Congratulations to all those who have cleared the Civil Services (Main) Examination, 2021. My best wishes to these youngsters who are embarking on their administrative careers at an important time of India’s development journey, when we are marking Azadi Ka Amrit Mahotsav.

    — Narendra Modi (@narendramodi) May 30, 2022 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಅಭಿನಂದನೆ: ಯುಪಿಎಸ್​​ಸಿ ಮುಖ್ಯ ಪರೀಕ್ಷೆಯಲ್ಲಿ ಪಾಸ್​ ಆಗಿರುವ ಎಲ್ಲ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮದಲ್ಲಿರುವ ಭಾರತದ ಅಭಿವೃದ್ಧಿಯ ಪಯಣದಲ್ಲಿ ನಿಮ್ಮ ಆಡಳಿತಾತ್ಮಕ ವೃತ್ತಿ ಆರಂಭಿಸುತ್ತಿದ್ದೀರಿ. ನಿಮಗೆ ನನ್ನ ಶುಭಾಶಯಗಳು ಎಂದಿದ್ದಾರೆ.

Last Updated : May 30, 2022, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.