ETV Bharat / bharat

ಇಲ್ಲಿ ಡೆಂಘೀ ಹಾವಳಿ ವಿಪರೀತ: ಮೃತರ ಸಂಖ್ಯೆ 60ಕ್ಕೆ ಏರಿಕೆ

author img

By

Published : Sep 14, 2021, 6:49 AM IST

ಆಗ್ರಾದಿಂದ 50 ಕಿಮೀ ಮತ್ತು ಲಖನೌದಿಂದ 320 ಕಿಮೀ ದೂರದಲ್ಲಿರುವ ಫಿರೋಜಾಬಾದ್​ನಲ್ಲಿ ಕಳೆದ ಮೂರು ವಾರಗಳಿಂದ ಡೆಂಘೀ ಮತ್ತು ಮಾರಣಾಂತಿಕ ವೈರಲ್ ಜ್ವರದ ಹಾವಳಿ ಹೆಚ್ಚಾಗಿದೆ. ಈಗಾಗಲೇ 60 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಹೆಚ್ಚಿನವರು ಮಕ್ಕಳು ಎಂದು ತಿಳಿದು ಬಂದಿದೆ.

dengue
ಡೆಂಗ್ಯೂ

ಫಿರೋಜಾಬಾದ್ (ಯುಪಿ): ಉತ್ತರ ಪ್ರದೇಶದಲ್ಲಿ ಡೆಂಘೀ ಜ್ವರದ ಭೀತಿ ಹೆಚ್ಚಾಗಿದ್ದು, ಇದೀಗ ಮತ್ತೆ ಎರಡು ಸಾವು ಸಂಭವಿಸಿದೆ. ಈ ಮೂಲಕ ರಾಜ್ಯದಲ್ಲಿ ಡೆಂಘೀಗೆ ಬಲಿಯಾದವರ ಸಂಖ್ಯೆ 60ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗರ್​ ವಿಭಾಗದ ಆರೋಗ್ಯ ಹೆಚ್ಚುವರಿ ನಿರ್ದೇಶಕ ಎ.ಕೆ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, "14 ವರ್ಷದ ಬಾಲಕಿ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾಳೆ. ಜೊತೆಗೆ ಇನ್ನೊಂದು ಮಗು ಸಹ ಕೊನೆಯುಸಿರೆಳೆದಿದೆ" ಎಂದು ಹೇಳಿದರು. ಇನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್, ಆಸ್ಪತ್ರೆಯಲ್ಲಿ ವಿಧಿಸಿದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಅಪರಿಚಿತ ಉಗ್ರನ ಕೊಂದ ಭದ್ರತಾ ಪಡೆ

ಆಗ್ರಾದಿಂದ 50 ಕಿಮೀ ಮತ್ತು ಲಖನೌದಿಂದ 320 ಕಿಮೀ ದೂರದಲ್ಲಿರುವ ಫಿರೋಜಾಬಾದ್​ನಲ್ಲಿ ಕಳೆದ ಮೂರು ವಾರಗಳಿಂದ ಡೆಂಘೀ ಮತ್ತು ಮಾರಣಾಂತಿಕ ವೈರಲ್ ಜ್ವರದ ಹಾವಳಿ ಹೆಚ್ಚಾಗಿದೆ. ಈಗಾಗಲೇ 60 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಹೆಚ್ಚಿನವರು ಮಕ್ಕಳು ಎಂದು ತಿಳಿದು ಬಂದಿದೆ. ಇನ್ನೂ ಕೆಲವು ಪ್ರಕರಣಗಳು ಮಥುರಾ, ಆಗ್ರಾ ಮತ್ತು ಮೈನ್‌ಪುರಿಯಲ್ಲಿ ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.