ETV Bharat / bharat

ಉತ್ತರ ಪ್ರದೇಶ ಸಚಿವ ವಿಜಯ್ ಕಶ್ಯಪ್ ಕೊರೊನಾ ಸೋಂಕಿನಿಂದ ಮೃತ

author img

By

Published : May 19, 2021, 5:20 AM IST

ನವಾಬ್‌ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಕೇಸರ್ ಸಿಂಗ್ ಗಂಗ್ವಾರ್ ಅವರು ನೋಯ್ಡಾದ ಆಸ್ಪತ್ರೆಯಲ್ಲಿ ಕೋವಿಡ್​ನಿಂದ ಮೃತಪಟ್ಟಿದ್ದು, ಇವರಿಗೆ ನೀಡಿದ ಪ್ಲಾಸ್ಮಾ ಚಿಕಿತ್ಸೆಯೂ ಫಲಕಾರಿಯಾಗಲಿಲ್ಲ.

UP Minister Vijay Kashyap Succumbs to Covid-19
ಉತ್ತರ ಪ್ರದೇಶ ಸಚಿವ ವಿಜಯ್ ಕಶ್ಯಪ್ ಕೊರೊನಾ ಸೋಂಕಿನಿಂದ ಮೃತ

ಲಖನೌ, ಉತ್ತರ ಪ್ರದೇಶ: ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೋವಿಡ್ ಹಾವಳಿ ಸೃಷ್ಟಿ ಮಾಡಿದ್ದು, ಈಗ ಉತ್ತರ ಪ್ರದೇಶ ಸಚಿವ ವಿಜಯ್ ಕಶ್ಯಪ್ ಕೊರೊನಾಗೆ ಬಲಿಯಾಗಿದ್ದಾರೆ. ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ವಿಜಯ್​ ಕಶ್ಯಪ್​ಗೆ ನೀಡುತ್ತಿದ್ದ ಚಿಕಿತ್ಸೆ ವಿಫಲವಾಗಿದೆ.

ಚಾರ್ತವಾಲ್ ವಿಧಾನಸಭಾ ಸ್ಥಾನದಿಂದ ಆಯ್ಕೆಯಾಗಿದ್ದ ಇವರಿಗೆ 52 ವರ್ಷ ವಯಸ್ಸಾಗಿದ್ದು, ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ವಿಜಯ್​ ಕಶ್ಯಪ್ ಮೃತಪಟ್ಟಿದ್ದು, ಕೋವಿಡ್​ನಿಂದ ಮೃತಪಟ್ಟ ಉತ್ತರ ಪ್ರದೇಶದ ಐದನೇ ಶಾಸಕರಾಗಿದ್ದಾರೆ.

ಮೇ 7ರಂದು ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ಬಹದ್ದೂರ್ ಕೋರಿ ಅವರು ಲಕ್ನೋದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್​ನಿಂದಾಗಿ ಸಾವನ್ನಪ್ಪಿದ್ದರು. ರಾಜನಾಥ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕೋರಿ ಅವರನ್ನು ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಉಪನ್ಯಾಸಕನಾಗಿದ್ದ ಶಿವಕುಮಾರಯ್ಯ 'ಪ್ರಶ್ನೆಪತ್ರಿಕೆ ಸೋರಿಕೆ‌ ಪಿತಾಮಹಾ' ಆದ ಕುರಿತು..

ಬರೇಲಿ ಬಳಿಯ ನವಾಬ್‌ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಕೇಸರ್ ಸಿಂಗ್ ಗಂಗ್ವಾರ್ ಅವರು ನೋಯ್ಡಾದ ಆಸ್ಪತ್ರೆಯಲ್ಲಿ ಕೋವಿಡ್​ನಿಂದ ಮೃತಪಟ್ಟಿದ್ದು, ಇವರಿಗೆ ನೀಡಿದ ಪ್ಲಾಸ್ಮಾ ಚಿಕಿತ್ಸೆಯೂ ಫಲಕಾರಿಯಾಗಲಿಲ್ಲ.

ಇನ್ನು ವಿಜಯ್ ಕಶ್ಯಪ್​​ ನಿಧನಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.