ETV Bharat / bharat

ಜೇಬಿನಿಂದ ಬಂದ ಹೊಗೆ.. ಮೊಬೈಲ್​ ಹೊರತೆಗೆಯುತ್ತಿದ್ದಂತೆ ಬ್ಲಾಸ್ಟ್.. ಮೊಬೈಲ್​​ ಬಳಸುವ ಮುನ್ನ ಎಚ್ಚರ..!

author img

By

Published : Aug 14, 2023, 12:47 PM IST

Updated : Aug 14, 2023, 1:25 PM IST

ಉತ್ತರಪ್ರದೇಶದಲ್ಲಿ ಜೇಬಿನಲ್ಲಿ ಇರಿಸಿದ್ದ ಮೊಬೈಲ್​ ಫೋನ್ ಸ್ಫೋಟ​ಗೊಂಡು ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಮೊಬೈಲ್ ಬ್ಲಾಸ್ಟ್
ಮೊಬೈಲ್ ಬ್ಲಾಸ್ಟ್

ಅಲಿಗಢ (ಉತ್ತರಪ್ರದೇಶ): ಬ್ರಾಂಡ್​ ಕಂಪನಿಯ ಮೊಬೈಲ್​​ ಫೋನ್​ ಒಂದು​ ಸ್ಫೋಟಗೊಂಡು 47 ವರ್ಷದ ಉದ್ಯಮಿಯೊಬ್ಬರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಉತ್ತರಪ್ರದೇಶ ರಾಜ್ಯದ ಅಲಿಗಢದಲ್ಲಿ ನಡೆದಿದೆ.

ಪ್ರೇಮ್ ರಾಜ್ ಸಿಂಗ್ ಎಂಬ ಉದ್ಯಮಿ ಉತ್ತಮ ಬ್ರಾಂಡ್​ನ ಮೊಬೈಲ್​ ಅನ್ನು ಮೂರು ವರ್ಷದ ಹಿಂದೆ ಖರೀದಿಸಿದ್ದರು. ಎಂದಿನಂತೆ ತಮ್ಮ ಫೋನ್​ ಅನ್ನು ತಮ್ಮ ಜೇಬಿನಲ್ಲಿ ಇರಿಸಿಕೊಂಡಿದ್ದರು. ಅದೇಕೋ ಅವರಿಗೆ ತಮ್ಮ ಜೇಬು ಬಿಸಿಯಾಗಿದೆ ಎಂಬ ಅನುಭವವಾಗಿದೆ. ಜೊತೆಗೆ ಮೊಬೈಲಿಂದ ಹೊಗೆ ಬರಲು ಪ್ರಾರಂಭವಾಗಿದೆ. ತಕ್ಷಣವೇ ಮೊಬೈಲ್​ ಅನ್ನು ಬೇಬಿನಿಂದ ಹೊರ ತೆಗೆದಿದ್ದಾರೆ. ಆದರೆ, ಅದಾಗಲೇ ದೊಡ್ಡ ಶಬ್ದದಿಂದ ಮೊಬೈಲ್​​ ಸ್ಫೋಟ ಗೊಂಡಿದೆ. ಜೊತೆಗೆ ಮೊಬೈಲ್​ 2 ಭಾಗಗಳಾಗಿ ಬೇರ್ಪಟ್ಟಿವೆ ಎಂದು ಘಟನೆಯ ನಂತರ ಗಾಯಾಳು ಪ್ರೇಮ್ ರಾಜ್ ಸಿಂಗ್ ಹೇಳಿದ್ದಾರೆ.

ಘಟನೆ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಸ್ಫೋಟದ ಪರಿಣಾಮ ಸಿಂಗ್​ ಅವರ ಎಡಗೈ ಹೆಬ್ಬೆರಳು ಮತ್ತು ತೊಡೆಯ ಮೇಲೆ ಸುಟ್ಟ ಗಾಯಗಳಾಗಿದ್ದು. ಅದಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಗಾಯಾಳು ಪ್ರೇಮ್ ರಾಜ್ ಸಿಂಗ್," ನಾನು ಹಲವು ವರ್ಷಗಳಿಂದ ಅದೇ ಬ್ರಾಂಡ್​ನ ಫೋನ್​ ಬಳಸುತ್ತಿದ್ದೇನೆ. ಆದರೆ ಇಂದು ನನ್ನ ಮೊಬೈಲ್​ ಜೇಬ್​​ನಿಂದ ಹೊರ ತೆಗೆಯುವಷ್ಟರಲ್ಲೇ ಬ್ಲಾಸ್ಟ್ ಆಗಿದೆ. ಹಾಗಾಗಿ ಆ ಕಂಪನಿಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ. ಅದೃಷ್ಟವಶಾತ್​ ಸಣ್ಣ ಮಟ್ಟಿಗೆ ಗಾಯಗಳಾಗಿ, ಬಚಾವ್​ ಆಗಿದ್ದೇನೆ ಎಂದು ನಿಟ್ಟುಸಿರು ಬಿಟ್ಟರು.

ಬ್ಲಾಸ್ಟ್​​ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು: ಇನ್ನು ಕಂಪನಿ ಕುರಿತು ಮಹುವಾ ಖೇರಾ ಪೊಲೀಸ್ ಠಾಣೆಯಲ್ಲಿ ಪ್ರೇಮ್​ರಾಜ್​ ಸಿಂಗ್​ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ, ತನಿಖೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಚ್‌ಒ ವಿಜಯ್ ಸಿಂಗ್ ತಿಳಿಸಿದ್ದಾರೆ.

ಹೀಗೇಕೆ ಮೊಬೈಲ್​ಗಳು ಬ್ಲಾಸ್ಟ್​ ಆಗುತ್ತವೆ: ಈ ರೀತಿಯ ಘಟನೆಗಳು ನಡೆಯುತ್ತಿರುವುದು ಮೊದಲನೇಯದೇನೂ ಅಲ್ಲ. ಅನೇಕ ಬಾರಿ ಹಲವು ಕಂಪನಿಗಳ ಮೊಬೈಲ್​ಗಳು ಹೆಚ್ಚಿನ ಶಾಖದಿಂದಾಗಿ ಸ್ಫೋಟಗೊಂಡ ಉದಾಹರಣೆಗಳಿವೆ. ಕೆಲವೊಮ್ಮೆ ಮೊಬೈಲ್​ ಬಳಕೆದಾರರು ಅತೀ ಹೆಚ್ಚು ಕಾಲ ಮೊಬೈಲ್​​ ಬಳಿಸಿದ್ದರಿಂದ ಬಿಸಿಯಾಗಿ ಸ್ಫೋಟಗೊಂಡಿರುವ ಉದಾಹರಣೆಗಳೂ ಇವೆ. ಇನ್ನು ಗಂಟೆಗಟ್ಟಲೇ ಚಾರ್ಜ್​ನಲ್ಲೇ ಇರಿಸಿದರೆ ಈ ರೀತಿಯ ಸ್ಫೋಟಗಳು ನಡೆಯುವ ಸಂಭವ ಹೆಚ್ಚು ಎನ್ನುತ್ತಾರೆ, ತಂತ್ರಜ್ಞರು. ಹಾಗೇ ನೀವು ಒದ್ದೆ ಕೈಯಲ್ಲಿ ನಿಮ್ಮ ಫೋನ್​ನ್ನು ಬಳಸಿದರೆ ಅದರೊಳಗೆ ನೀರು ಹೋಗಿ ಸಾಮನ್ಯವಾಗಿ ಮೊಬೈಲ್ ಬಿಸಿಯಾದಾಗ ನೀರಿನ ಅಂಶ ಸೇರಿಕೊಳ್ಳುವುದರಿಂದಲೂ ಬ್ಲಾಸ್ಟ್​ ಆಗುವ ಸಾಧ್ಯತೆಗಳು ಇವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೂಡಾ ಮಥುರಾ ಜಿಲ್ಲೆಯ 13 ವರ್ಷದ ಬಾಲಕನೊಬ್ಬ ಚೈನೀಸ್ ಬ್ರಾಂಡ್‌ನ ಸ್ಮಾರ್ಟ್‌ಫೋನ್‌ನಲ್ಲಿ ಗೇಮ್ ಆಡುತ್ತಿದ್ದಾಗ ಸ್ಫೋಟಗೊಂಡು ಸುಟ್ಟ ಗಾಯಗಳಿಂದ ಬಳಲುವಂತಾಗಿತ್ತು.

ಇದನ್ನೂ ಓದಿ: ಪ್ಯಾಂಟ್​​ನಲ್ಲಿಟ್ಟುಕೊಂಡಿದ್ದ ಮೊಬೈಲ್​ ಬ್ಲಾಸ್ಟ್​... ಯುವಕನಿಗೆ ಗಾಯ!

Last Updated : Aug 14, 2023, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.