ETV Bharat / bharat

ರಜೆ ತೆಗೆದುಕೊಳ್ಳದೇ ಲಂಡನ್​ ಪ್ರವಾಸ; ಐಪಿಎಸ್ ಮಹಿಳಾ​ ಅಧಿಕಾರಿ ಅಮಾನತು

author img

By

Published : Apr 28, 2022, 4:30 PM IST

ಉನ್ನತ ಹುದ್ದೆಯಲ್ಲಿದ್ದುಕೊಂಡು ಯಾವುದೇ ರೀತಿಯ ರಜೆ ತೆಗೆದುಕೊಳ್ಳದೇ ಲಂಡನ್ ಪ್ರವಾಸ ಕೈಗೊಂಡಿರುವುದಕ್ಕಾಗಿ ಐಪಿಎಸ್​ ಮಹಿಳಾ ಅಧಿಕಾರಿಯನ್ನು ಅಮಾನತುಗೊಳಿಸಿ, ಆದೇಶ ಹೊರಹಾಕಲಾಗಿದೆ.

Alankrita Singh
Alankrita Singh

ಲಖನೌ(ಉತ್ತರ ಪ್ರದೇಶ): ಕರ್ತವ್ಯ ನಿರ್ಲಕ್ಷ್ಯ ಮತ್ತು ಅಶಿಸ್ತಿನ ಗಂಭೀರ ಆರೋಪದ ಮೇಲೆ ಐಪಿಎಸ್​ ಅಧಿಕಾರಿ ಅಲಂಕೃತಾ ಸಿಂಗ್​ ಅವರನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತಾ ಇಲಾಖೆಯಲ್ಲಿ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಅಧಿಕೃತವಾಗಿ ರಜೆ ತೆಗೆದುಕೊಳ್ಳದೆ ಲಂಡನ್​ಗೆ ತೆರಳಿದ್ದ ಆರೋಪ ಎದುರಿಸುತ್ತಿದ್ದಾರೆ.

ಅಕ್ಟೋಬರ್​​ 20, 2021ರಿಂದಲೂ ಇವರು ತಮ್ಮ ಕಚೇರಿಗೆ ಹಾಜರಾಗುತ್ತಿಲ್ಲ ಎಂದು ಗೊತ್ತಾಗಿದ್ದು, ಇದರ ಬೆನ್ನಲ್ಲೇ ಅಧಿಕೃತ ಆದೇಶ ಹೊರಬಿದ್ದಿದೆ. ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಹೊರಡಿಸಿರುವ ಆದೇಶದ ಪ್ರಕಾರ, 2008ರ ಬ್ಯಾಚ್​ನ ಐಪಿಎಸ್​ ಅಧಿಕಾರಿ ಅಲಂಕೃತಾ ಸಿಂಗ್​ ಅಕ್ಟೋಬರ್​​ 19, 2021ರ ರಾತ್ರಿ ವಾಟ್ಸಾಪ್​ ಮೂಲಕ ತಮ್ಮ ಇಲಾಖೆಯ ಎಡಿಜಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪ್ರಸ್ತುತ ಲಂಡನ್​​ನಲ್ಲಿರುವ ಕಾರಣ, ಅಂದಿನಿಂದಲೂ ನಿರಂತರವಾಗಿ ಗೈರು ಹಾಜರಾಗಿದ್ದಾರೆ. ಹೀಗಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೈಕ್​​-ಕಾರು ಭೀಕರ ಅಪಘಾತ: ಬೈಕ್​​ಗೆ ಬೆಂಕಿ ಹೊತ್ತಿಕೊಂಡು ಮೂವರು ಸಜೀವ ದಹನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.