ETV Bharat / bharat

ಅಯೋಧ್ಯಾ, ಮಥುರಾ ದೇವಸ್ಥಾನ ಸುತ್ತಮುತ್ತ ಮದ್ಯ ಮಾರಾಟಕ್ಕೆ ಯೋಗಿ ಸರ್ಕಾರ ಬ್ರೇಕ್​!

author img

By

Published : Jun 1, 2022, 1:16 PM IST

ಉತ್ತರ ಪ್ರದೇಶದ ಐತಿಹಾಸಿಕ ಸ್ಥಳಗಳಾಗಿರುವ ಅಯೋಧ್ಯಾ ಮತ್ತು ಮಥುರಾದಲ್ಲಿ ಮದ್ಯ ಮಾರಾಟಕ್ಕೆ ಯೋಗಿ ಆದಿತ್ಯನಾಥ್​ ಸರ್ಕಾರ ಬ್ರೇಕ್​ ಹಾಕಿದೆ.

UP govt bans sale of liquor
UP govt bans sale of liquor

ಲಖನೌ(ಉತ್ತರ ಪ್ರದೇಶ): ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿನ ಪ್ರಮುಖ ದೇವಸ್ಥಾನಗಳಾದ ಅಯೋಧ್ಯಾ, ಮಥುರಾದ ಸುತ್ತಮುತ್ತಲೂ ಮದ್ಯ ಮಾರಾಟಕ್ಕೆ ಇದೀಗ ಬ್ರೇಕ್​ ಹಾಕಲಾಗಿದೆ. ದೇವಾಲಯಗಳ ಸುತ್ತಮುತ್ತಲೂ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಮದ್ಯದಂಗಡಿ ಮಾಲೀಕರ ಪರವಾನಗಿ ರದ್ಧುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ, ಇಂದಿನಿಂದಲೇ ಮಥುರಾದ ಸುಮಾರು 37 ಮದ್ಯದಂಗಡಿ ಬಂದ್​ ಆಗಲಿವೆ.

ಅಯೋಧ್ಯೆಯ ರಾಮಮಂದಿರ ಮತ್ತು ಮಥುರಾದ ಕೃಷ್ಣ ಜನ್ಮಭೂಮಿಯ ಸಮೀಪವಿರುವ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಆದೇಶ ಜೂನ್ 1, 2022 ರಿಂದ ಜಾರಿಗೆ ಬಂದಿದೆ ಎಂದು ಅಲ್ಲಿನ ಜಿಲ್ಲಾಡಳಿತ ತಿಳಿಸಿವೆ. ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ರಾಜ್ಯ ಸರ್ಕಾರ ಮಥುರಾ - ವೃಂದಾವನದ 10 ಚದರ ಕಿಲೋ ಮೀಟರ್​ ಪ್ರದೇಶವನ್ನ ಯಾತ್ರಸ್ಥಳ ಎಂದು ಘೋಷಣೆ ಮಾಡಿತ್ತು. ಈ ಪ್ರದೇಶದಲ್ಲಿ ಯಾವುದೇ ರೀತಿಯ ಮದ್ಯ ಹಾಗೂ ಮಾಂಸ ಮಾರಾಟಕ್ಕೆ ಅನುಮತಿ ನೀಡಿರಲಿಲ್ಲ.

ಇದನ್ನೂ ಓದಿ: ದುರದೃಷ್ಟವಶಾತ್​, ಪಠ್ಯಗಳಲ್ಲಿ ಸಾಮ್ರಾಟ್​ ಪೃಥ್ವಿರಾಜ್​ ಬಗ್ಗೆ 2-3 ಸಾಲು ಮಾತ್ರ ಉಲ್ಲೇಖ: ಅಕ್ಷಯ್ ಕುಮಾರ್!

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಗರ್ಭಗುಡಿ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ್​ ಇಂದು ಅಡಿಗಲ್ಲು ಹಾಕಿದ್ದಾರೆ. ಇದರ ಬೆನ್ನಲ್ಲೇ ಇಂತಹದೊಂದು ಮಹತ್ವದ ನಿರ್ಧಾರ ಹೊರಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.