ETV Bharat / bharat

ಜನವರಿ 29ರಿಂದ ಕೇಂದ್ರ ಬಜೆಟ್ ಅಧಿವೇಶನ: ಫೆ. 1ರಂದು ಕೇಂದ್ರ ಬಜೆಟ್ ಮಂಡನೆ!?

author img

By

Published : Jan 5, 2021, 7:23 PM IST

ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೂರನೇ ಬಜೆಟ್ ಮಂಡನೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.

Union Budget
Union Budget

ನವದೆಹಲಿ: ಜನವರಿ 29ರಿಂದ ಪ್ರಸಕ್ತ ಸಾಲಿನ ಬಜೆಟ್​ ಅಧಿವೇಶನ ಆರಂಭಗೊಳ್ಳಲಿದ್ದು, ಫೆಬ್ರವರಿ 1ರಂದು ಮಹತ್ವದ ಕೇಂದ್ರ ಬಜೆಟ್​ ಮಂಡನೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಫೆ. 1ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಿ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್​ ಸಮಿತಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಎರಡು ಹಂತಗಳಲ್ಲಿ ಬಜೆಟ್​ ಅಧಿವೇಶನ ನಡೆಯಲಿದ್ದು, ಜನವರಿ 29ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಎರಡು ಸದನಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಓದಿ: ನಿಮ್ಮ ಆಲೋಚನೆಗಳು ನನಗೆ ಕಳುಹಿಸಿ, ಹಿಂದೆಂದೂ ಕಂಡಿರದ ಬಜೆಟ್​ ನಿಮ್ಮ ಮುಂದಿಡುತ್ತೇನೆ: ನಿರ್ಮಲಾ ಸೀತಾರಾಮನ್

ಜನವರಿ 29ರಿಂದ ಫೆ. 15ರವರೆಗೆ ಮೊದಲ ಹಂತ, ಮಾರ್ಚ್​ 8ರಿಂದ ಏಪ್ರಿಲ್​ 8ರವರೆಗೆ ಎರಡನೇ ಹಂತದ ಅಧಿವೇಶನ ನಡೆಯಲಿದೆ ಎಂದು ತಿಳಿದು ಬಂದಿದೆ. ಕೊರೊನಾ ವೈರಸ್​ ಹಾವಳಿ ಜೋರಾಗಿದ್ದ ಕಾರಣ ಕಳೆದ ವರ್ಷದ ಚಳಿಗಾಲದ ಅಧಿವೇಶನ ರದ್ದುಗೊಳಿಸಲಾಗಿತ್ತು. ಅಧಿವೇಶನದ ವೇಳೆ ಕೋವಿಡ್​ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದ್ದು, ಪ್ರತಿದಿನ 4 ಗಂಟೆಗಳ ಕಾಲ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.

ಈ ಸಲದ ಬಜೆಟ್​ ಅಧಿವೇಶನದಲ್ಲಿ ನೂತನ ಕೃಷಿ ಮಸೂದೆಗಳ ಬಗ್ಗೆ ಹೆಚ್ಚು ಚರ್ಚೆ ಆಗುವ ಸಾಧ್ಯತೆ ಇವೆ. ಈಗಾಗಲೇ ಈ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.