ETV Bharat / bharat

ಆರ್ಥಿಕ ಏಳಿಗೆಗಾಗಿ ನರಬಲಿ.. ಮಹಿಳೆಯರನ್ನು ಅಪಹರಿಸಿ ತುಂಡು-ತುಂಡಾಗಿ ಕತ್ತರಿಸಿದ ಹಂತಕರು!

author img

By

Published : Oct 11, 2022, 12:43 PM IST

ಆರ್ಥಿಕವಾಗಿ ಏಳಿಗೆಯಾಗಲು ಇಬ್ಬರು ಮಹಿಳೆಯರನ್ನು ಅಪಹರಿಸಿ ಬಲಿಕೊಟ್ಟಿರುವ ಭಯಾನಕ ಪ್ರಕರಣ ಕೇರಳದಲ್ಲಿ ನಡೆದಿದೆ.

women sacrificed in Kerala  women sacrificed in Kerala as part of black magic  black magic in Kerala  ತುಂಡು ತುಂಡಾಗಿ ಕತ್ತರಿಸಿದ ಹಂತಕರು  ಆರ್ಥಿಕ ಏಳಿಗೆಗಾಗಿ ನರಬಲಿ  ಮಹಿಳೆಯರನ್ನು ಅಪಹರಿಸಿ ಬಲಿ  ಕೇರಳದಲ್ಲಿ ದುರಂತ ಘಟನೆ  ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರೊಂದಿಗೆ ಸ್ನೇಹ
ಆರ್ಥಿಕ ಏಳಿಗೆಗಾಗಿ ನರಬಲಿ

ಪತ್ತನಂತಿಟ್ಟ(ಕೇರಳ): ದೇವರನಾಡು ಕೇರಳದಲ್ಲಿ ದೇಶವನ್ನೇ ಬೆಚ್ಚಿಬೀಳಿಸುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರ್ಥಿಕ ಏಳಿಗೆಗಾಗಿ ಇಬ್ಬರು ಮಳೆಯರನ್ನು ನರಬಲಿ ಕೊಟ್ಟಿರುವ ಅಮಾನವೀಯ ಘಟನೆ ಪತ್ತನಂತಿಟ್ಟ ಜಿಲ್ಲೆಯ ಎಳಂದೂರಿನಲ್ಲಿ ನಡೆದಿದೆ.

ಎಳಂದೂರು ಗ್ರಾಮದಲ್ಲಿ ಆರ್ಥಿಕ ಸಮೃದ್ಧಿಗಾಗಿ ಮಾಟಮಂತ್ರದ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ಬಲಿ ನೀಡಲಾಗಿದೆ. ಮಾಂತ್ರಿಕ ಮತ್ತು ಆತನ ಪತ್ನಿಯ ಸಹಾಯದಿಂದ ಕೊಚ್ಚಿ ಮೂಲದ ಮಹಿಳೆಯರನ್ನು ಅಪಹರಿಸಿ ನಂತರ ಹತ್ಯೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಇದುವರೆಗೆ ಮೂವರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮುಹಮ್ಮದ್ ಶಫಿ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ನಂತರ ಅಪಹರಿಸಿದ್ದಾರೆ. ಈ ಮಹಿಳೆಯರು ಸೆಪ್ಟೆಂಬರ್ 26 ರಂದು ನಾಪತ್ತೆಯಾಗಿದ್ದರು. ಮೃತರನ್ನು ಕಡವಂತರ ನಿವಾಸಿ ಪದ್ಮಮ್ (52) ಮತ್ತು ಕಾಲಡಿ ನಿವಾಸಿ ರೋಸಿಲಿ (50) ಎಂದು ಗುರುತಿಸಲಾಗಿದೆ.

ಆರೋಪಿಗಳು ತಮ್ಮ ಆರ್ಥಿಕ ಏಳಿಗೆಗಾಗಿ ಪೂಜೆ ನಡೆಸಿ ಮಾಟಮಂತ್ರದ ಭಾಗವಾಗಿ ಮಹಿಳೆಯರನ್ನು ಬಲಿಕೊಟ್ಟಿದ್ದಾರೆ. ನಂತರ ಬಲಿಯಾದವರ ಶವಗಳನ್ನು ತುಂಡು-ತುಂಡುಗಳಾಗಿ ಕತ್ತರಿಸಿ ತಿರುವಲ್ಲಾ ಬಳಿ ಹೂತು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರನ್ನು ಅಪಹರಿಸಿದ ತಿರುವಲ್ಲಾ ಮೂಲದ ಸ್ಕಾರ್ಸೆಸರ್ ಬಗವಂತ್ ಸಿಂಗ್, ಅವರ ಪತ್ನಿ ಲೈಲಾ ಮತ್ತು ಏಜೆಂಟ್ ಮುಹಮ್ಮದ್ ಶಫಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಓದಿ:ವಾಮಾಚಾರ ಮಾಡುತ್ತಿದ್ದ ಶಂಕೆ.. ಜಾರ್ಖಂಡ್​ನಲ್ಲಿ ಮೂವರು ಮಹಿಳೆಯರ ಬರ್ಬರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.