ETV Bharat / bharat

Live Video: ಭೀಕರ ಅಪಘಾತ..ಕಾರ್​​ಗೆ ಗುದ್ದಿದ ಕಂಟೈನರ್ ಲಾರಿ..ಅಪ್ಪ, ಅಮ್ಮ, 4 ವರ್ಷದ ಮಗ ಸ್ಥಳದಲ್ಲೇ ಸಾವು

author img

By

Published : Jul 3, 2021, 3:15 PM IST

Updated : Jul 6, 2021, 3:43 PM IST

ಟ್ರಕ್​-ಹುಂಡೈ ಕಾರಿನ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಅಪಘಾತಕ್ಕೀಡಾಗಿರುವ ಕಾರು ಸ್ಥಳದಲ್ಲೇ ಹೊತ್ತಿ ಉರಿದಿದೆ.

Truck Runs Over Hyundai i10
Truck Runs Over Hyundai i10

ಮುಂಬೈ(ಮಹಾರಾಷ್ಟ್ರ): ಮುಂಬೈ-ಪುಣೆ ಎಕ್ಸ್​ಪ್ರೆಸ್​​ವೇ​​ನಲ್ಲಿ ಭೀಕರ ರಸ್ತೆ ಅಪಘಾತವೊಂದು ನಡೆದಿದ್ದು, ಅದರ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಂಟೈನರ್​ ಟ್ರಕ್​​ವೊಂದು ಹುಂಡೈ i10 ಕಾರಿನ ಮೇಲೆ ಹರಿದ ಪರಿಣಾಮ ಅಪ್ಪ, ಅಮ್ಮ, 4 ವರ್ಷದ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Truck Runs Over Hyundai
ಒಂದೇ ಕುಟುಂಬದ ಮೂವರು ಸಾವು

ಮುಂಬೈ-ಪುಣೆ ಎಕ್ಸ್​​ಪ್ರೆಸ್​ವೇನಲ್ಲಿ ನಿಯಂತ್ರಣ ಕಳೆದುಕೊಂಡ ಕಂಟೈನರ್​​ ಟ್ರಕ್​ ಏಕಾಏಕಿ ಹುಂಡೈi10 ಕಾರಿನ ಮೇಲೆ ಹರಿದಿದೆ. ವೇಗವಾಗಿ ಚಲಿಸುತ್ತಿದ್ದ ಹುಂಡೈ ಕಾರಿಗೆ ಟ್ರಕ್​ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರು ಕ್ಷಣಾರ್ಧದಲ್ಲೇ ಸುಟ್ಟು ಬೂದಿಯಾಗಿದೆ. ಕಾರಿನಲ್ಲಿದ್ದ ದಂಪತಿ ಮತ್ತು ಅವರ 4 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹುಂಡೈ i10 ಮೇಲೆ ಹರಿದ ಟ್ರಕ್

ಘಟನಾ ಸ್ಥಳಕ್ಕೆ ತೆರಳಿದ ಹೈವೇ ಪೊಲೀಸರು ಟ್ರಕ್​ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತನ ಸ್ಥಿತಿ ಗಂಭೀರವಾಗಿದೆ. ಈ ಭೀಕರ ಅಪಘಾತದ ವಿಡಿಯೋ ಮುಂದೆ ಸಾಗುತ್ತಿದ್ದ ಟ್ರಕ್​​ನಲ್ಲಿ ಇದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ.

Last Updated :Jul 6, 2021, 3:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.